ರಿಷಬ್ ಶೆಟ್ಟಿ ಕಥೆ ಬರೆದು, ನಿರ್ದೇಶಿಸಿ, ಅಭಿನಯಿಸಿದ ಕಾಂತಾರ ಸಿನಿಮಾ ಸಿಕ್ಕಾಪಟ್ಟೆ ಸುದ್ದಿಯಾಗಿದೆ. ದೊಡ್ಡ ಮಟ್ಟದಲ್ಲಿ ಹವಾ ಸೃಷ್ಟಿ ಮಾಡಿದೆ. ಈ ಸಿನಿಮಾ ಈಗ ಮತ್ತೊಂದು ದಾಖಲೆ ಬರೆದಿದ್ದು ಎಲ್ಲೆಡೆ ಸುದ್ದಿಯಾಗಿದೆ.
2/ 7
ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿಯೂ ಸಿನಿಮಾ ರಿಲೀಸ್ ಆಗಿ ವ್ಯಾಪಕ ಮೆಚ್ಚುಗೆ ಗಳಿಸಿದೆ. ಕಾಂತಾರ ಸಿನಿಮಾದ ಟೋಟಲ್ ಕಲೆಕ್ಷನ್ 400 ಕೋಟಿಯ ಗಡಿ ದಾಟಿದೆ.
3/ 7
ಕರ್ನಾಟಕದಲ್ಲಿ ಮಾತ್ರ ಕಾಂತಾರ ಸಿನಿಮಾ ಬರೋಬ್ಬರಿ 168 ಕೋಟಿ ಗಳಿಕೆ ಮಾಡಿದೆ. ಸಿನಿಮಾ ರಿಲೀಸ್ ಆದ ಬಹುತೇಕ ಎಲ್ಲ ಥಿಯೇಟರ್ನಲ್ಲಿಯೂ ಕಾಂತಾರ 50 ದಿನಗಳ ಕಾಲ ಸಕ್ಸಸ್ಫುಲ್ ಆಗಿ ಓಡಿದೆ.
4/ 7
ಕಾಂತಾರ ಸಿನಿಮಾ ಬೆಂಗಳೂರಿನಲ್ಲಿ ಮಾತ್ರ 20 ಸಾವಿರದಷ್ಟು ಶೋಗಳನ್ನು ಕಂಡಿದೆ. ಇದು ಇದುವರೆಗೂ ಬೆಂಗಳೂರಿನಲ್ಲಿ ಯಾವ ಸಿನಿಮಾ ಕೂಡಾ ಮಾಡಿರದ ದಾಖಲೆ ಎನ್ನುವುದು ವಿಶೇಷ.
5/ 7
ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್ ಎರಡೂ ಸೇರಿ 20 ಸಾವಿರ ಶೋಗಳು ಪ್ರದರ್ಶನವಾಗಿದ್ದು ಇದು ಕಾಂತಾರಕ್ಕೆ ಮತ್ತೊಂದು ಹಿರಿಮೆ.
6/ 7
ಇದೀಗ ಸಿನಿಮಾ ಒಟಿಟಿಯಲ್ಲಿ ಕೂಡಾ ರಿಲೀಸ್ ಆಗಿದ್ದು ಆದರೂ ಸಿನಿಮಾ ಈಗಲೂ ಥಿಯೇಟರ್ನಲ್ಲಿ ಓಡುತ್ತಿದೆ. ಜನರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುತ್ತಿದ್ದಾರೆ.
7/ 7
ಕಾಂತಾರ ಸಿನಿಮಾದಂತೆಯೇ ಹವಾ ಸೃಷ್ಟಿ ಮಾಡಿದ್ದ ಕೆಜಿಎಫ್ 2 ಸಿನಿಮಾ ಬೆಂಗಳೂರಿನಲ್ಲಿ ಮಾತ್ರ 17 ಸಾವಿರ ಶೋಗಳನ್ನು ಕಂಡಿತ್ತು.