ರಿಷಬ್ ಶೆಟ್ಟಿ ಅವರು ಈಗ ಏನು ಮಾಡುತ್ತಿದ್ದಾರೆ? ತಮ್ಮ ಸಿನಿಮಾ ಕಾಂತಾರ ಸಕ್ಸಸ್ ಆದ ಮೇಲೆ ನಟ ಫುಲ್ ಬ್ಯುಸಿಯಾಗಿದ್ದಾರೆ. ಕೈಗೆ ಸಿಗದಷ್ಟು ಬ್ಯುಸಿಯಾಗಿರುವ ನಟ ಕಾಂತಾರ 2 ಸಿನಿಮಾ ಮಾಡ್ತಾರಾ?
2/ 8
ಕಾಂತಾರ 2 ಸಿನಿಮಾ ಬಗ್ಗೆ ಪ್ರೇಕ್ಷಕರಿಗೆ ವಿಪರೀತ ಕುತೂಹಲ ಇದೆ. ಸಿನಿಮಾ ಯಾವಾಗ ಬರುತ್ತೆ? ಕಾಂತಾರ 2 ಸಿನಿಮಾ ಮಾಡ್ತಾರಾ ಎನ್ನುವ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ.
3/ 8
ಆದರೆ ಈ ಬಗ್ಗೆ ಯಾವುದೇ ಹೇಳಿಕೆ ಕೊಟ್ಟಿಲ್ಲ ರಿಷಬ್ ಶೆಟ್ಟಿ. ಸದ್ಯ ಕಾಂತಾರ ತುಳುವಿನಲ್ಲಿ ರಿಲೀಸ್ ಆಗುತ್ತಿದ್ದು ಕಾಂತಾರದ ಕೆಲಸಗಳು ರಿಷಬ್ ಅವರನ್ನು ಬ್ಯುಸಿಯಾಗಿಸಿದೆ.
4/ 8
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ದಿಗಂತ್ ಅವರ ಹೇಳಿಕೆಯೊಂದು ಈಗ ಕಾಂತಾರ 2 ಬಗ್ಗೆ ಹೊಸ ಹಿಂಟ್ ಕೊಟ್ಟಿದೆ.
5/ 8
ರಿಷಬ್ ಶೆಟ್ಟಿ ಅವರು ಕಾಂತಾರ 2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ಅವರು ಬ್ಯಾಚುರಲ್ ಪಾರ್ಟಿ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದು ದಿಗಂತ್ ರಿವೀಲ್ ಮಾಡಿದ್ದಾರೆ.
6/ 8
ಅದೇ ಸಂದರ್ಭ ಕಾಂತಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ನಟ ಈ ಸಿನಿಮಾ ನಮಗೆಲ್ಲರಿಗೂ ಹೆಮ್ಮೆ ಎನ್ನುವುದನ್ನೂ ಹೇಳಿದ್ದಾರೆ.
7/ 8
ಕಾಂತಾರ ಸಿನಿಮಾ ಸದ್ಯ ಸಕ್ಸಸ್ಫುಲ್ ಆಗಿ ಓಡುತ್ತಿದ್ದು 400 ಕೋಟಿಗೂ ಹೆಚ್ಚು ಗಳಿಸಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ.
8/ 8
ಕಾಂತಾರ ಸಿನಿಮಾ ಹಿಂದಿಯಲ್ಲಿ 75 ಕೋಟಿ, ತೆಲುಗಿನಲ್ಲಿ 50 ಕೋಟಿಗೂ ಹೆಚ್ಚು ಗಳಿಸಿದ್ದು ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.