ಕಲಬುರಗಿ ನಗರದಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಕಾಂತಾರ ಸಿನಿಮಾ ಹಾಗೂ ಕಾಂತಾರ ಸಿನಿಮಾದ ವರಾಹ ರೂಪಂ ಹಾಡಿನ ವಿವಾದದ ಬಗ್ಗೆ ಮಾತನಾಡುತ್ತಾರೆ.
2/ 7
ಕಾಂತಾರ ಸಿನಿಮಾ 400 ಕೋಟಿ ಕ್ಲಬ್ಗೆ ಸೇರಿರೋ ವಿಚಾರವಾಗಿ ಪ್ರತಿಕ್ರಿಯಿಸಿದ ನಟ ನಾನು ಜನರಿಗೆ ಧನ್ಯವಾದಗಳನ್ನು ಹೇಳುತ್ತೇನೆ ಎಂದಿದ್ದಾರೆ.
3/ 7
ಎಷ್ಟು ಸೇರಿದೆ ಎನ್ನುವುದಕ್ಕಿಂತ ಅದನ್ನು ಜನರೇ ಸೇರಿಸಿದ್ದು ಎನ್ನುವುದು ಮುಖ್ಯ. ಅದು ಅವರಿಂದಲೇ ಆಗಿರುವ ಸಿನಿಮಾ ಎಂದಿದ್ದಾರೆ.
4/ 7
ಇಷ್ಟೊಂದು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಕಾಂತಾರಾ 2 ಬಗ್ಗೆ ಸದ್ಯ ಯಾವುದೇ ಯೋಚನೆ ಇಲ್ಲ, ಕಾಂತಾರ 2 ಬರೋ ಟೈಮಲ್ಲಿ ಅದು ಬರುತ್ತದೆ ಎಂದು ರಿಷಬ್ ಸ್ಪಷ್ಟಪಡಿಸಿದ್ದಾರೆ.
5/ 7
ವರಾಹರೂಪಂ ಸಾಂಗ್ ಗೆ ಕೇರಳ ಹೈಕೋರ್ಟ್ ತಡೆಯಾಜ್ಞೆ ವಿಚಾರವಾಗಿ ನಟ ಪ್ರತಿಕ್ರಿಯಿಸಿ ಅದು ನ್ಯಾಯಾಲಯದಲ್ಲಿದೆ. ಅಲ್ಲಿಂದ ಬಂದಾಗಲೇ ಮಾತನಾಡಬೇಕು ಎಂದಿದ್ದಾರೆ.
6/ 7
ನಾವು ಇಲ್ಲಿ ಅದರ ಬಗ್ಗೆ ಮಾತನಾಡೋದು ಸರಿಯಲ್ಲ. ಅಲ್ಲಿಂದ ಬಂದಾಗಾಲೇ ಮಾತನಾಡುತ್ತೇವೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
7/ 7
ವರಾಹ ರೂಪಂ ಹಾಡಿನ ಟ್ಯೂನ್ ಕಾಪಿಯಾಗಿರುವ ವಿಚಾರವಾಗಿ ದೊಡ್ಡಮಟ್ಟದಲ್ಲಿ ಚರ್ಚೆ ನಡೆದಿದ್ದು ಇದು ತೈಕ್ಕುಡಂ ಬ್ರಿಡ್ಜ್ ಎನ್ನುವ ಮ್ಯೂಸಿಕ್ ಬ್ಯಾಂಡ್ ಮಾಡಿರುವ ನವರಸಂ ಹಾಡಿನ ಕಾಪಿಯಾಗಿದೆ ಎನ್ನಲಾಗಿದೆ.