Kantara: ಬಿಡುಗಡೆಯಾದ ಬೇರೆ ಭಾಷೆಗಳಲ್ಲಿ ಸಖತ್ ಕಲೆಕ್ಷನ್ ಮಾಡಿದ ಕಾಂತಾರ ಸಿನಿಮಾ ಇಂಗ್ಲಿಷ್ಗೆ ಡಬ್ಬಿಂಗ್ ಆಗುತ್ತಾ? ಆದ್ರೆ ಡೈಲಾಗ್ಸ್ ಎಲ್ಲ ಹೇಗೆ ಬರಬಹುದು ಎನ್ನುವುದೇ ಪ್ರೇಕ್ಷಕರ ಕುತೂಹಲ.
ಕಾಂತಾರ ಸಿನಿಮಾ ಬಿಡುಗಡೆಯಾದ ಬೇರೆ ಭಾಷೆಗಳಲ್ಲಿಯೂ ಸಖತ್ ಕಲೆಕ್ಷನ್ ಮಾಡಿದೆ. ಹಿಂದಿಯಲ್ಲಿ 75 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದು ಟಾಲಿವುಡ್ನಲ್ಲಿ ಸುಮಾರು 60 ಕೋಟಿ ಗಳಿಸಿದೆ.
2/ 8
ರಿಷಬ್ ಶೆಟ್ಟಿ ನಾಯಕರಾಗಿರುವ ಚಿತ್ರವನ್ನು ತೆಲುಗಿನಲ್ಲಿ ಗೀತಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಅಲ್ಲು ಅರವಿಂದ್ ನಿರ್ಮಿಸಿದ್ದಾರೆ. ಇದು ಅಕ್ಟೋಬರ್ 15 ರಂದು ಬಿಡುಗಡೆಯಾಯಿತು. ಬಿಡುಗಡೆಯಾದ ಎಲ್ಲ ಭಾಷೆಗಳಲ್ಲಿ ಸಖತ್ ಸುದ್ದಿ ಮಾಡಿದೆ.
3/ 8
ಅಮೆಜಾನ್ ಪ್ರೈಮ್ ವಿಡಿಯೋ ಕಾಂತಾರ ಡಿಜಿಟಲ್ ಹಕ್ಕುಗಳನ್ನು ಭಾರಿ ಬೆಲೆಗೆ ಪಡೆದುಕೊಂಡಿದೆ. ನವೆಂಬರ್ 24 ರಿಂದ ತೆಲುಗು, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರವು ಅಮೆಜಾನ್ ಪ್ರೈಮ್ನಲ್ಲಿ ಸ್ಟ್ರೀಮ್ ಆಗುತ್ತಿದೆ.
4/ 8
ಈಗ ಈ ಸಿನಿಮಾ ಇಂಗ್ಲಿಷ್ ಭಾಷೆಗೂ ಡಬ್ ಆಗಲಿದೆಯಂತೆ. ಈ ಸಿನಿಮಾ ಈಗಾಗಲೇ ತೆಲುಗು ಹಾಗೂ ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಲಭ್ಯವಿದ್ದು, ನಿರ್ಮಾಪಕರು ಈ ಸಿನಿಮಾವನ್ನು ಇಂಗ್ಲಿಷ್ನಲ್ಲೂ ಡಬ್ ಮಾಡಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ.
5/ 8
ಆದರೆ ಇಂಗ್ಲಿಷ್ ವರ್ಷನ್ ಥಿಯೇಟರ್ಗಳಲ್ಲಿ ಬಿಡುಗಡೆ ಮಾಡಲಾಗುತ್ತದೆಯೇ ಅಥವಾ OTT ಗೆ ಸೀಮಿತಗೊಳಿಸಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ
6/ 8
ಸಿನಿಪ್ರಿಯರೆಲ್ಲ ಇದರ ಡೈಲಾಗ್ ಇಂಗ್ಲಿಷ್ನಲ್ಲಿ ಹೇಗಿರಬಹುದು? ಸಾಂಗ್ ಹೇಗೆ ಬರಬಹುದು ಎಂದು ತೆಲೆ ಕೆರೆದುಕೊಳ್ಳುತ್ತಿದ್ದಾರೆ.
7/ 8
ಏನೇ ಆದರೂ ಹೈ ಕ್ವಾಲಿಟಿ ಡಬ್ಬಿಂಗ್ ಇರಬಹುದು ಎನ್ನುವುದು ಸಿನಿಪ್ರಿಯರ ನಿರೀಕ್ಷೆ. ಹೇಗಿರಲಿದೆ ಎನ್ನುವುದನ್ನು ಸಿನಿಮಾ ಬಿಡುಗಡೆಯಾದ ಮೇಲೆ ನೋಡಬೇಕಷ್ಟೆ.
8/ 8
ಸಿನಿಮಾದಲ್ಲಿ ಗ್ರಾಮ್ಯ ಭಾಷೆಯೇ ದೊಡ್ಡ ಹೈಲೈಟ್ ಆಗಿರುವ ಕಾರಣ ಇಂಗ್ಲಿಷ್ನಲ್ಲಿ ಸಿನಿಮಾ ಹೇಗೆ ಮೂಡಿ ಬರಬಹುದು ಎನ್ನುವ ಕುತೂಹಲ ಎಲ್ಲರಿಗೂ ಇದೆ.