ರಿಷಬ್ ಶೆಟ್ಟಿ ಅವರು ಬಾಲ್ಯದಲ್ಲಿ 5ನೇ ತರಗತಿಯಲ್ಲಿ ಫೇಲ್ ಆಗಿದ್ದರು. ಆದರೆ ಅವರು ಫೇಲ್ ಆಗಿದ್ದಾರೆ ಎನ್ನುವುದೇ ಗೊತ್ತಾಗಿರಲಿಲ್ಲ. ಇದನ್ನು ತಿಳಿಯದೆ ಚಾಕಲೇಟ್ ಕೊಟ್ಟಿದ್ದರು.
2/ 7
ಪ್ರಶಾಂತ್ 5ನೇ ತರಗತಿ ಎಂದೇ ಹೇಳಿದ್ದರು. ಪಾಸ್ ಆದವರನ್ನು ಮುಂದಿನ ತರಗತಿ ಹೆಸರನ್ನು ಹೇಳಿ ತಿಳಿಸುತ್ತಿದ್ದರು. ರಿಷಬ್ ಮನೆಯಲ್ಲಿ ಅಮ್ಮನಲ್ಲಿ ಕಾಡಿ ಬೇಡಿ 5 ರೂಪಾಯಿ ತಂದಿದ್ದರು.
3/ 7
ಗೊಂದಲದಲ್ಲಿದ್ದ ರಿಷಬ್ ತಾನು ಪಾಸ್ ಆದ್ರಾ ಫೇಲ್ ಆದ್ರಾ ಎಂದು ತಿಳಿಯದೆ ಅಲ್ಲಿಯೇ ಸುತ್ತುತ್ತಿದ್ದರು. ರಿಷಬ್ ಸ್ಕೂಲ್ ಸುತ್ತಲೇ ಸುತ್ತುತ್ತಿದ್ದರು.
4/ 7
ಅದನ್ನು ನೋಡಿದ ಹೆಡ್ ಮಾಸ್ಟರ್ ರಿಷಬ್ ಅವರನ್ನು ಕರೆದು ಏನಾಯ್ತು ಎಂದು ಕೇಳುತ್ತಾರೆ. ಆಗ ರಿಷಬ್ ತಮ್ಮ ಗೊಂದಲ ಹೇಳುತ್ತಾರೆ. ಆಗ ಉತ್ತರಿಸಿದ ಹೆಡ್ ಮಾಸ್ಟರ್ ನೀನು ಪಾಸ್, ಹೋಗು ಹೋಗು ಎಂದು ಮನೆಗೆ ಕಳುಹಿಸುತ್ತಾರೆ.
5/ 7
ರಿಷಬ್ ಖುಷಿಯಾಗಿ ಮನೆಗೆ ಬಂದಿದ್ದರು. ಎಲ್ಲರೂ ಖುಷಿಯಾಗಿ- ಸೆಲೆಬ್ರೇಟ್ ಮಾಡಿದ್ದರು. ಆದರೆ 6ನೇ ತರಗತಿ ಅಡ್ಮಿಷನ್ಗೆ ಹೋದಾಗ 5ನೇ ತರಗತಿಗೆ ಸೇರಿಸಿಕೊಂಡಿದ್ದರು. ಆಗಲೇ ರಿಷಬ್ಗೆ ತಾನು 5ನೇ ತರಗತಿಯಲ್ಲಿ ಫೇಲ್ ಎಂದು ಗೊತ್ತಾಗಿದ್ದು.
6/ 7
ಆಮೇಲೆ ಊರಿಗೆ ಬಂದ ಅಪ್ಪ ರಿಷಬ್ ಅವರಿಗೆ ಚೆನ್ನಾಗಿ ರುಬ್ಬಿದ್ದರು ಎಂದು ನಟ ಹೇಳಿದ್ದಾರೆ. ಅಂತೂ ಇಂತೂ 5ನೇ ತರಗತಿಯಲ್ಲಿ 2ನೇ ಸಲ ಚೆನ್ನಾಗಿ ಮಾರ್ಕ್ಸ್ ಪಡೆದಿದ್ದರು ನಟ.
7/ 7
ಇದು ರಿಷಬ್ ಶೆಟ್ಟಿ ಅವರ ಪ್ರೈಮರಿ ಸ್ಕೂಲ್ನಲ್ಲಿ ಫೇಲ್ ಆದ ಸ್ಟೋರಿ. ಆಗ ರಿಷಬ್ ಅವರ ಹೆಸರು ಪ್ರಶಾಂತ್ ಶೆಟ್ಟಿ. ಅವರ ಹೆಸರನ್ನು ಅವರ ತಂದೆ ನಂತರ ಬದಲಾಯಿಸಿದ್ದರು.