Rishi Kapoor Birth Anniversary: ರಿಷಿ ಕಪೂರ್ ಹುಟ್ಟುಹಬ್ಬ; ಭಾವುಕರಾಗಿ ಪೋಸ್ಟ್ ಮಾಡಿದ ಮಗಳು ರಿಧಿಮಾ...!
Rishi Kapoor Birth Anniversary: ಇಂದು ಬಾಲಿವುಡ್ ನಟ ರಿಷಿ ಕಪೂರ್ ಅವರ 68ನೇ ಹುಟ್ಟುಹಬ್ಬ. ಏಪ್ರಿಲ್ 30ರಂದು ರಿಷಿ ಕಪೂರ್ ಇಹಲೋಕ ತ್ಯಜಿಸಿದರು. ಅವರ ಹುಟ್ಟುಬ್ಬದಂದು ಮಗಳು ರಿಧಿಮಾ ಕೆಲವು ಫೋಟೋಗಳೊಂದಿಗೆ ಭಾವುಕರಾಗಿ ಕೆಲವು ಸಾಲುಗಳನ್ನು ಬರೆದು ಪೋಸ್ಟ್ ಮಾಡಿದ್ದಾರೆ. (ಚಿತ್ರಗಳು ಕೃಪೆ: ಟ್ವಿಟರ್ ಹಾಗೂ ಇನ್ಸ್ಟಾಗ್ರಾಂ ಖಾತೆ)
ಬಾಲಿವುಡ್ನ ಖ್ಯಾತ ನಟ ರಿಷಿ ಕಪೂರ್ ಅವರ 68ನೇ ಹುಟ್ಟುಹಬ್ಬ,. ವಾಸ್ತವದಲ್ಲಿ ರಿಷಿ ಕಪೂರ್ ಅವರು ನಮ್ಮೊಂಧಿಗೆ ಇಲ್ಲವಾದರೂ, ಅವರ ಸಿನಿಮಾ ಹಾಗೂ ಅಭಿನಯದ ಮೂಲಕ ಅಭಿಮಾನಿಗಳ ಮನಸ್ಸಿನಲ್ಲಿ ಸದಾ ಜೀವಂತವಾಗಿರುತ್ತಾರೆ.
2/ 21
ಅಪ್ಪನ ಅಗಲಿಕೆ ನಂತರ ರಿಧಿಕಾ ಸಾಕಷ್ಟು ಸಲ ಸಾಮಾಜಿಕ ಜಾಲತಾಣದಲ್ಲಿ ತಂದೆಯನ್ನು ಮಿಸ್ ಮಾಡಿಕೊಳ್ಳುತ್ತಿರುವ ಕುರಿತು ಪೋಸ್ಟ್ ಮಾಡಿದ್ದರು.
3/ 21
ಈಗಲೂ ಸಹ ಅಪ್ಪನ ಹುಟ್ಟುಹಬ್ಬದಂದು ಅವರೊಂದಿಗೆ ತೆಗೆಸಿಕೊಂಡ ಕೆಲವು ಅಪರೂಪದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
4/ 21
ಫೋಟೋಗಳ ಜೊತೆಗೆ ಭಾವುಕರಾಗಿ ಕೆಲವು ಸಾಲುಗಳನ್ನು ಬರೆದಿದ್ದಾರೆ.
5/ 21
ಪ್ರೀತಿ ಪಾತ್ರದರು ಅಗಲಿದಾಗ ಮನಸ್ಸು ಮುರಿದು ಹೋಗುತ್ತದೆ. ನೀನು ಈ ಮುರಿದ ಹೃದಯದಲ್ಲೇ ಇದ್ದೀಯಾ ಅಂತ ಗೊತ್ತು. ಸದಾ ಹೀಗೆ ಇರುತ್ತೀಯಾ. ನೀನು ಎಲ್ಲೇ ಇದ್ದರೂ ನಮ್ಮನ್ನು ಸಹಾ ನೋಡುತ್ತಲೇ ಇರುವೆ ಎಂದು ರಿಧಿಮಾ ತಂದೆಯ ಬಗ್ಗೆ ಭಾವುಕರಾಗಿ ಪೋಸ್ಟ್ ಮಾಡಿದ್ದಾರೆ.