Ponniyin Selvan: ಪೊನ್ನಿಯನ್ ಸೆಲ್ವನ್ 2 ಸಿನಿಮಾಗಾಗಿ ಸ್ಟಾರ್ ನಟ-ನಟಿಯರು ಪಡೆದ ಸಂಭಾವನೆ ಎಷ್ಟು?

Ponniyin Selvan 2: ಮಣಿರತ್ನಂ ನಿರ್ದೇಶನದ ತಮಿಳು ಚಿತ್ರ ಪೊನ್ನಿಯನ್ ಸೆಲ್ವನ್ ಸಿನಿಮಾ ಸೆಪ್ಟೆಂಬರ್ 30, 2022 ರಂದು ಬಿಡುಗಡೆಯಾಗಿ ದೊಡ್ಡ ಹಿಟ್ ಆಗಿತ್ತು. ಇದೀಗ ಪೊನ್ನಿಯಿನ್ ಸೆಲ್ವನ್ 2 ಕೂಡ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿ ವಿಕ್ರಮ್, ಕಾರ್ತಿ, ಜಯಂ ರವಿ, ಐಶ್ವರ್ಯಾ ರೈ ಮತ್ತು ತ್ರಿಶಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಟಾರ್ ನಟರ ಸಂಭಾವನೆ ಎಷ್ಟು ಗೊತ್ತಾ?

First published:

 • 19

  Ponniyin Selvan: ಪೊನ್ನಿಯನ್ ಸೆಲ್ವನ್ 2 ಸಿನಿಮಾಗಾಗಿ ಸ್ಟಾರ್ ನಟ-ನಟಿಯರು ಪಡೆದ ಸಂಭಾವನೆ ಎಷ್ಟು?

  ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಪೊನ್ನಿಯನ್ ಸೆಲ್ವನ್ ರಿಲೀಸ್ ಆಗಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯಾದ 2 ದಿನಗಳಲ್ಲಿ ಚಿತ್ರ 50 ಕೋಟಿ ಕ್ಲಬ್ ಸೇರಿದೆ. ಪೊನ್ನಿಯನ್ ಸೆಲ್ವನ್ 1 ಸಿನಿಮಾ ಭಾರತದಲ್ಲೇ 327 ಕೋಟಿ ಗಳಿಸಿದೆ. 2ನೇ ಭಾಗವು ಈ ದಾಖಲೆಯನ್ನು ಸೋಲಿಸುವ ನಿರೀಕ್ಷೆಯಿದೆ.

  MORE
  GALLERIES

 • 29

  Ponniyin Selvan: ಪೊನ್ನಿಯನ್ ಸೆಲ್ವನ್ 2 ಸಿನಿಮಾಗಾಗಿ ಸ್ಟಾರ್ ನಟ-ನಟಿಯರು ಪಡೆದ ಸಂಭಾವನೆ ಎಷ್ಟು?

  ಮಣಿರತ್ನಂ ಅವರು ತಮ್ಮ ಕನಸಿನ ಚಿತ್ರ ಪೊನ್ನಿಯನ್ ಸೆಲ್ವನ್ 2 ಸಿನಿಮಾವನ್ನು 500 ಕೋಟಿ ರೂಪಾಯಿಗಳ ಬಜೆಟ್ನಲ್ಲಿ ಪೂರ್ಣಗೊಳಿಸಿದ್ದಾರೆ. ತಮಿಳು ಮಾತ್ರವಲ್ಲದೆ ಮಲಯಾಳಂ, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿಯೂ ಚಿತ್ರ ಬಿಡುಗಡೆಯಾಗಿದೆ.

  MORE
  GALLERIES

 • 39

  Ponniyin Selvan: ಪೊನ್ನಿಯನ್ ಸೆಲ್ವನ್ 2 ಸಿನಿಮಾಗಾಗಿ ಸ್ಟಾರ್ ನಟ-ನಟಿಯರು ಪಡೆದ ಸಂಭಾವನೆ ಎಷ್ಟು?

  ಐಶ್ವರ್ಯಾ ರೈ ಬಚ್ಚನ್, ಕಾರ್ತಿ, ಚಿಯಾನ್ ವಿಕ್ರಮ್, ತ್ರಿಶಾ ಮತ್ತು ಜಯಂ ರವಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಪ್ರಕಾಶ್ ರಾಜ್, ಪ್ರಭು, ಐಶ್ವರ್ಯಾ ಲಕ್ಷ್ಮಿ, ಸೋಭಿತಾ ಧೂಳಿಪಾಲ, ಜಯರಾಂ, ಅಶ್ವಿನ್ ಕಾಕುಮನು, ಮೋಹನ್ ರಾಮನ್, ಶರತ್ಕುಮಾರ್ ಮತ್ತು ಪಾರ್ತಿಬನ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

  MORE
  GALLERIES

 • 49

  Ponniyin Selvan: ಪೊನ್ನಿಯನ್ ಸೆಲ್ವನ್ 2 ಸಿನಿಮಾಗಾಗಿ ಸ್ಟಾರ್ ನಟ-ನಟಿಯರು ಪಡೆದ ಸಂಭಾವನೆ ಎಷ್ಟು?

  ಈ ಚಿತ್ರದಲ್ಲಿ ಸ್ಟಾರ್ ನಟರಿಗೆ ಎಷ್ಟು ಸಂಭಾವನೆ ಸಿಕ್ಕಿದೆ ಎಂದು ನೋಡೋಣ. ಆದಿತ್ಯ ಕರಿಕಾಳನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಚಿಯಾನ್ ವಿಕ್ರಮ್ ಸಂಭಾವನೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಕರಿಕಾಲನ್ ಪಾತ್ರ ಮಾಡಲು ವಿಕ್ರಮ್ 12 ಕೋಟಿ ಸಂಭಾವನೆ ಪಡೆದಿದ್ದಾರೆ.

  MORE
  GALLERIES

 • 59

  Ponniyin Selvan: ಪೊನ್ನಿಯನ್ ಸೆಲ್ವನ್ 2 ಸಿನಿಮಾಗಾಗಿ ಸ್ಟಾರ್ ನಟ-ನಟಿಯರು ಪಡೆದ ಸಂಭಾವನೆ ಎಷ್ಟು?

  ವಿಕ್ರಮ್ ನಂತರ ಅತಿ ಹೆಚ್ಚು ಸಂಭಾವನೆ ಪಡೆಯುವವರಲ್ಲಿ ಐಶ್ವರ್ಯಾ ರೈ 2ನೇ ಸ್ಥಾನದಲ್ಲಿದ್ದಾರೆ. ನಂದಿನಿ ಪಾತ್ರದಲ್ಲಿ ನಟಿಸಲು ಐಶ್ವರ್ಯಾ ರೈ 10 ಕೋಟಿ ಸಂಭಾವನೆ ಪಡೆದಿದ್ದಾರೆ.

  MORE
  GALLERIES

 • 69

  Ponniyin Selvan: ಪೊನ್ನಿಯನ್ ಸೆಲ್ವನ್ 2 ಸಿನಿಮಾಗಾಗಿ ಸ್ಟಾರ್ ನಟ-ನಟಿಯರು ಪಡೆದ ಸಂಭಾವನೆ ಎಷ್ಟು?

  ಪೊನ್ನಿಯನ್ ಸೆಲ್ವನ್ ಅಕಾ ಅರುಲ್ಮೋಳಿ ವರ್ಮನ್ ಪಾತ್ರದಲ್ಲಿ ನಟಿಸಿರುವ ಜಯಂ ರವಿ ಸಂಭಾವನೆ 8 ಕೋಟಿ ಇದೆ. ಜಯಂ ರವಿ ಅಭಿನಯಕ್ಕೆ ಭಾರೀ ಮೆಚ್ಚುಗೆ ಕೂಡ ವ್ಯಕ್ತವಾಗಿದೆ.

  MORE
  GALLERIES

 • 79

  Ponniyin Selvan: ಪೊನ್ನಿಯನ್ ಸೆಲ್ವನ್ 2 ಸಿನಿಮಾಗಾಗಿ ಸ್ಟಾರ್ ನಟ-ನಟಿಯರು ಪಡೆದ ಸಂಭಾವನೆ ಎಷ್ಟು?

  ಮತ್ತೊಂದು ಪ್ರಮುಖ ಪಾತ್ರವಾದ ವಂದಿಯಾತೇವನ್ಗೆ ಕಾರ್ತಿ ಸಂಭಾವನೆ  5 ಕೋಟಿ ಇದೆ. ಪೊನ್ನಿಯನ್ ಸೆಲ್ವನ್ ಸಿನಿಮಾದಲ್ಲಿ ನಟಿಸಲು ಸ್ಟಾರ್ ನಟರು ಕೋಟಿ ಕೋಟಿ ಸಂಭಾವನೆಯನ್ನೇ ಪಡೆದಿದ್ದಾರೆ.

  MORE
  GALLERIES

 • 89

  Ponniyin Selvan: ಪೊನ್ನಿಯನ್ ಸೆಲ್ವನ್ 2 ಸಿನಿಮಾಗಾಗಿ ಸ್ಟಾರ್ ನಟ-ನಟಿಯರು ಪಡೆದ ಸಂಭಾವನೆ ಎಷ್ಟು?

  ಪೊನ್ನಿಯನ್ ಸೆಲ್ವನ್ 2 ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ತ್ರಿಷಾ, ತನ್ನ ಅಭಿನಯದಿಂದಲೇ ಅಭಿಮಾನಿಗಳ ಮನಗೆದ್ದಿದ್ದಾರೆ. ಕುಂಡವಿಯಾಗಿ ತೆರೆ ಮೇಲೆ ಮಿಂಚಿದ ತ್ರಿಷಾ ಕೃಷ್ಣನ್ ಚಿತ್ರಕ್ಕೆ 2.5 ಕೋಟಿ ರೂ.

  MORE
  GALLERIES

 • 99

  Ponniyin Selvan: ಪೊನ್ನಿಯನ್ ಸೆಲ್ವನ್ 2 ಸಿನಿಮಾಗಾಗಿ ಸ್ಟಾರ್ ನಟ-ನಟಿಯರು ಪಡೆದ ಸಂಭಾವನೆ ಎಷ್ಟು?

  ಚಿತ್ರದಲ್ಲಿ ಪೂಂಕುಝಲಿ ಪಾತ್ರದಲ್ಲಿ ನಟಿಸಿದ್ದ ಐಶ್ವರ್ಯಾ ಲಕ್ಷ್ಮಿ 1.5 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ. ನಟಿ ಶೋಭಿತಾ ಧೂಳಿಪಾಲ ಮತ್ತು ಜಯರಾಮ್ ಚಿತ್ರದಲ್ಲಿ ನಟಿಸಲು 1 ಕೋಟಿ ಸಂಭಾವನೆ ಪಡೆದಿದ್ದಾರೆ.

  MORE
  GALLERIES