ಕೇರಳದ ಹಲವು ದೇವಾಲಯಗಳಲ್ಲಿ ಕೇವಲ ಹಿಂದೂಗಳಿಗೆ ಮಾತ್ರ ದೇವಿಯ ದರ್ಶನಕ್ಕೆ ಅವಕಾಶವಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ದೇವಿಯ ದರ್ಶನಕ್ಕೆ ಅವಕಾಶ ನಿರಾಕರಿಸಲಾಗಿದೆ ಎಂದು ವರದಿಯಾಗಿದೆ. ಇದಲ್ಲದೆ ಅವರನ್ನು ಹೊರಗಿನಿಂದಲೇ ದೇವರನ್ನು ನೋಡಿ ಹೋಗುವಂತೆ ಕೇಳಲಾಯಿತು. ದೇವಿಯ ದರ್ಶನ ಸಿಗದಿದ್ದರೂ ಸಂತೃಪ್ತಿಯಿಂದ ಮರಳುತ್ತಿದ್ದೇನೆ ಎಂದು ಅಮಲಾ ಪೌಲ್ ದೇವಸ್ಥಾನದ ಸಂದರ್ಶಕರ ನೋಂದಣಿಯಲ್ಲಿ ತಮ್ಮ ನಿರಾಸೆಯನ್ನು ತಿಳಿಸಿದ್ದಾರೆ.