ಕನ್ನಡದಲ್ಲಿ ನಟ ಚೇತನ್ ಅಭಿನಯದ 'ಸೂರ್ಯಕಾಂತಿ' ಚಿತ್ರದಲ್ಲಿ ಅಭಿನಯಿಸಿರುವ ತಾರೆ ರೆಜಿನಾ ಕಸ್ಸಂದ್ರ. ಈಗ ಬಾಲಿವುಡ್, ಟಾಲಿವುಡ್ನಲ್ಲಿ ಬ್ಯೂಸಿಯಾಗಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ ಈ ನಟಿ.
2/ 12
ಅಂದಹಾಗೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಚೆನ್ನೈ ಬ್ಯೂಟಿ ರೆಜಿನಾ ಕಸ್ಸಂದ್ರ ಡಿಸೆಂಬರ್ 13 ರಂದು ತಮ್ಮ ಜನ್ಮದಿನವನ್ನು ಆಚರಿಸಿಕೊಂಡರು. ಅಭಿಮಾನಿಗಳಿಂದ ಶುಭಾಷಯಗಳ ಮಹಾಪೂರವೇ ಹರಿದುಬಂದಿತ್ತು.
3/ 12
ಅಭಿಮಾನಿಗಳಿಗೆ ರೆಜಿನಾ ಸಾಮಾಜಿಕ ಮಾಧ್ಯಮದಲ್ಲಿ ಧನ್ಯವಾದ ಕೂಡ ಹೇಳಿದರು. ಆದರೆ, ಅಷ್ಟೇ ನಿರಾಸೆಯನ್ನೂ ಮಾಡಿದ್ದಾರೆ. ಅದಕ್ಕೆ ಕಾರಣ ಅವರು ಮಾಡಿದ ಒಂದು ಇನ್ಸ್ಟಾಗ್ರಾಂ ಪೋಸ್ಟ್.
4/ 12
ಹೌದು, ಹುಟ್ಟುಹಬ್ಬ ಆಚರಣೆಯ ಬಳಿಕ ರಜಿನಾ ಒಂದು ಪೋಸ್ಟ್ ಮಾಡಿದ್ದರು. ಸುಂದರ ತಾಣವೊಂದಲ್ಲಿ ತುಂಡುಡುಗೆ ಧರಿಸಿದ ಫೋಟೋವನ್ನು ಹರಿಬಿಟ್ಟು, ಬರ್ತಡೇಗೆ ಶುಭಕೋರಿದ ಎಲ್ಲರಿಗೂ ಧನ್ಯವಾದ ಹೇಳಿದ್ದರು. ಅಷ್ಟೇ ಅಲ್ಲದೆ…
5/ 12
ಅಷ್ಟೇ ಅಲ್ಲದೆ, ಫೋಟೋದಲ್ಲಿ ಟ್ವಿಸ್ಟ್ ಒಂದನ್ನು ನೀಡಿದ್ದ ರೆಜಿನಾ ನನ್ನ ಬೆತ್ತಲೆ ಫೋಟೋಗಳನ್ನು ನೋಡಲು ಎಡಕ್ಕೆ ಸ್ವೈಪ್ ಮಾಡಿ ಎಂದು ಬರೆದುಕೊಂಡಿದ್ದರು.
6/ 12
ಇದನ್ನು ನೋಡಿದ ಅಭಿಮಾನಿಗಳು ಶಾಕ್ ಆದರು. ತಕ್ಷಣ ಎಡಕ್ಕೆ ಸ್ವೈಪ್ ಮಾಡಿದರು. ಆಗ ಎಲ್ಲರಿಗೂ ಕಾದಿತ್ತು ಬಿಗ್ ಶಾಕ್.
7/ 12
ಅವರು ಹೇಳಿದಂತೆ ಬೆತ್ತಲೆ ಫೋಟೋಗಳನ್ನು ಪೋಸ್ಟ್ ಮಾಡಿದ್ದರು. ಆದರೆ, ರೆಜಿನಾ ಕೊಟ್ಟ ಟ್ವಿಸ್ಟ್ ಎಂಥದ್ದು ಅಂದರೆ ಆ ಬೆತ್ತಲೆ ಫೋಟೋಗಳು ತಾವು ಮಗುವಾಗಿದ್ದಾಗ ತೆಗಿಸಿದಂತದ್ದು.
8/ 12
ಹೌದು, ರೆಜಿನಾ ಚಿಕ್ಕ ಮಗುವಿದ್ದಾಗ ಟಬ್ನಲ್ಲಿ ಕುಳಿತ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅವರ ಈ ಹಾಸ್ಯಪ್ರಜ್ಞೆ ಅನೇಕರನ್ನು ಆಕರ್ಷಿಸಿದರೆ, ಆದರೆ ವಿಕೃತ ಮನಸ್ಸುಗಳ ಮುಖಗಳನ್ನು ಕೆಂಪಾಗಿಸಿದೆ.
9/ 12
ರೆಜಿನಾ ಕೊನೆಯ ಬಾರಿಗೆ ‘ಯೆರು’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅದು ದೊಡ್ಡ ಹಿಟ್ ಆಗಿತ್ತು. ಈ ಚಿತ್ರದಲ್ಲಿ ಅವರು ನೆಗೆಟಿವ್ ರೋಲ್’ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಚಿರಂಜೀವಿ ಅವರ ‘ಆಚಾರ್ಯ’ ಚಿತ್ರದ ವಿಶೇಷ ಹಾಡಿನಲ್ಲಿ ಅವರು ಹೆಜ್ಜೆ ಹಾಕುವ ನಿರೀಕ್ಷೆಯಿದೆ.
10/ 12
ರೆಜಿನಾ ಕಸ್ಸಂದ್ರ ಹದಿನೈದು ವರ್ಷವಿರುವಾಗಲೇ ಪ್ರಿಯಾ ವಿ. ನಿರ್ದೇಶನದ ‘ಕಂದಾ ನಾಲ್ ಮುಧಲ್’ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.
11/ 12
ನಂತರ ಅವರು ಪಂಡಿರಾಜ್ ನಿರ್ದೇಶನದ ‘ಕೇಡಿ ಬಿಲ್ಲಾ ಕಿಲಾಡಿ ರಂಗ’ ಚಿತ್ರದಲ್ಲಿ ಶಿವಕಾರ್ತಿಕೇಯನ್ ಜೋಡಿಯಾಗಿ ನಟಿಸಿದ್ದಾರೆ. ಆ ನಂತರ ರೆಜಿನಾ ಹಿಂತಿರುಗಿ ನೋಡಲೇ ಇಲ್ಲ.
12/ 12
ರೆಜಿನಾ ಈಗ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಹೆಚ್ಚು ಬೇಡಿಕೆಯಿರುವ ನಟಿಯರಲ್ಲಿ ಒಬ್ಬರಾಗಿದ್ದಾರೆ. ಅವರು ನಿರ್ವಹಿಸುವ ಪಾತ್ರಗಳಿಗೆ ಸಂಪೂರ್ಣ ನ್ಯಾಯ ಒದಗಿಸುವ ಮೂಲಕ ಖ್ಯಾತಿಯನ್ನು ಗಳಿಸಿದ್ದಾರೆ.