Reeshma Nanaiah: ಉಪ್ಪಿ ಜೊತೆ ರೊಮ್ಯಾನ್ಸ್ ಮಾಡಲಿರೋ ಕೊಡಗಿನ ಕುವರಿ ಇವರೇ!
ರಿಯಲ್ ಸ್ಟಾರ್ ಉಪೇಂದ್ರ ಅವರ ಮುಂದಿನ ಸಿನಿಮಾ ಯುಐಗೆ ರೀಷ್ಮಾ ನಾಣಯ್ಯ ಹೀರೋಯಿನ್ ಆಗಲಿದ್ದಾರಂತೆ. ಈ ಕೊಡಗಿನ ಕುವರಿ ಯಾರು ಗೊತ್ತಾ?
1/ 10
2023ರಲ್ಲಿ ಜನರು ರಿಯಲ್ ಸ್ಟಾರ್ ಉಪೇಂದ್ರ ಅವರ ಯುಐ ಸಿನಿಮಾವನ್ನು ಎದುರು ನೋಡುತ್ತಿದ್ದಾರೆ. ಈ ಸಿನಿಮಾ ತಂಡದಿಂದ ಈಗ ಹೊಸದೊಂದು ಸುದ್ದಿ ಹೊರಬಿದ್ದಿದೆ.
2/ 10
ಈ ಸಿನಿಮಾದಲ್ಲಿ ಉಪ್ಪಿಗೆ ನಾಯಕಿಯಾಗಿ ಕೊಡಗಿನ ಕುವರಿ ಚಿತ್ರತಂಡದ ಜೊತೆ ಸೇರಿಕೊಳ್ಳುತ್ತಿದ್ದಾರಂತೆ. ಹೀಗಾಗಿ ಉಪ್ಪಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
3/ 10
ಮತ್ತೊಬ್ಬ ಕೊಡಗಿನ ಕುವರಿ ಸ್ಟಾರ್ ನಟನ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಇದು ಸಖತ್ ಎಕ್ಸೈಟಿಂಗ್ ಆಗಿದ್ದು ಇವರ ಬಗ್ಗೆ ಸಿನಿಪ್ರಿಯರಿಗೆ ಕುತೂಹಲ ಹೆಚ್ಚಾಗಿದೆ.
4/ 10
ಇದೀಗ ನಟಿ ರೀಷ್ಮಾ ನಾಣಯ್ಯ ಅವರು ಉಪ್ಪಿ ಅವರ ಬಹು ನಿರೀಕ್ಷಿತ ಪ್ರಾಜೆಕ್ಟ್ ಯುಐ ಸಿನಿಮಾದ ಭಾಗವಾಗಿದ್ದಾರೆ.
5/ 10
ಯುಐ ಚಿತ್ರಕ್ಕೆ ನಾಯಕಿ ಯಾರೆಂಬುದು ಇದೀಗ ಆಲ್ಮೋಸ್ಟ್ ಫೈನಲ್ ಆಗಿದೆ. ಈಗ ನಟಿ ರೀಷ್ಮಾ, ನಾಯಕಿಯಾಗಿ ಫಿಕ್ಸ್ ಆಗಿದ್ದಾರೆ ಎನ್ನಲಾಗಿದೆ.
6/ 10
ಯುಐ ಚಿತ್ರತಂಡ ಈಗ ರೀಷ್ಮಾ ಅವರನ್ನು ಫೈನಲ್ ಮಾಡಿದ್ದಾರೆ. ಅಂತೂ ಹೊಸ ನಟಿಗೆ ಅವಕಾಶ ಕೊಡೋ ಮೂಲಕ ಯುಐನಲ್ಲಿ ಹೊಸ ಮುಖವನ್ನು ಪ್ರೇಕ್ಷಕರಿಗೆ ತೋರಿಸುತ್ತಿದೆ ಚಿತ್ರತಂಡ.
7/ 10
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಮತ್ತು ನಿರ್ದೇಶನದ UI ಸಿನಿಮಾದ ಚಿತ್ರೀಕರಣ ನಡಿಯುತ್ತಿದ್ದು ಈ ಚಿತ್ರವನ್ನ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ರಿಲೀಸ್ ಮಾಡಲು ಪ್ಲಾನ್ ಮಾಡಲಾಗಿದೆ.
8/ 10
ಉಪ್ಪಿ ಸಿನಿಮಾ ಅಂದ್ಮೇಲೆ ಸಾಕಷ್ಟು ನಿರೀಕ್ಷೆ ಹುಟ್ಟಿಕೊಂಡಿರುತ್ತದೆ. ಉಪ್ಪಿ ನಿರ್ದೇಶನದ UI ಸಿನಿಮಾ ಅತಿ ಹೆಚ್ಚು ಗಮನ ಸೆಳೆಯುತ್ತಿದೆ.
9/ 10
ಚಿತ್ರದ ಪ್ರತಿ ದೃಶ್ಯವನ್ನ ಉಪ್ಪಿ ಪಕ್ಕಾ ಪ್ಲಾನ್ ಮಾಡಿದ್ದಾರೆ. ತಮ್ಮ ಕಲ್ಪನೆಯಲ್ಲಿ ಇಡೀ ಚಿತ್ರವನ್ನ ತೆಗೆಯೋಕೆ ಮುಂದಾಗಿದ್ದಾರೆ.
10/ 10
ಉಪ್ಪಿಯ UI ಚಿತ್ರವನ್ನ ದೊಡ್ಡಮಟ್ಟದಲ್ಲಿಯೇ ರಿಲೀಸ್ ಮಾಡಲಾಗುತ್ತಿದೆ. ಎಲ್ಲ ಭಾಷೆಯಲ್ಲೂ ಇದನ್ನ ರಿಲೀಸ್ ಮಾಡೋಕೆ ನಿರ್ಮಾಪಕರು ರೆಡಿ ಆಗಿದ್ದಾರೆ.
First published: