ಇತ್ತೀಚಿನ ಆಕ್ಷನ್ ಎಂಟರ್ಟೈನರ್ ಧಮಾಕಾ ಸಿನಿಮಾ ರವಿತೇಜ ಅಭಿನಯದ ಸೂಪರ್ ಹಿಟ್ ಸಿನಿಮಾ. ತ್ರಿನಾಥ ರಾವ್ ನಕ್ಕಿನ ನಿರ್ದೇಶನದ ಮೂವಿಯಲ್ಲಿ ಶ್ರೀಲೀಲಾ ನಟಿಸಿದ್ದಾರೆ. ಸತತ ಎರಡು ಫ್ಲಾಪ್ಗಳ ನಂತರ ರವಿತೇಜಗೆ ಈ ಸಿನಿಮಾ ಬ್ರೇಕ್ ಕೊಟ್ಟಿದೆ. ಬಾಕ್ಸ್ ಆಫೀಸ್ನಲ್ಲಿ ಚಿತ್ರ 100 ಕೋಟಿ ಗಳಿಕೆ ಸಮೀಪಿಸಿದೆ.
2/ 7
ಈ ಚಿತ್ರವನ್ನು ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ ಮತ್ತು ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಜಂಟಿಯಾಗಿ ನಿರ್ಮಿಸಿದ್ದು, ಕನ್ನಡದ ನಟಿ ಶ್ರೀಲೀಲಾ ನಾಯಕಿ. ಭೀಮ್ ಸಿಸೆರೊಲಿಯೊ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
3/ 7
ಭಾರೀ ನಿರೀಕ್ಷೆಗಳ ನಡುವೆ ಬಂದಿರುವ ಸಿನಿಮಾ ಡಿಸೆಂಬರ್ 23 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಇದರಲ್ಲಿ ಕನ್ನಡದ ನಟಿ ಹೀರೋಯಿನ್ ಎನ್ನುವುದು ವಿಶೇಷ.
4/ 7
ಈ ಆಕ್ಷನ್ ಎಂಟರ್ಟೈನರ್ ಚಿತ್ರದಲ್ಲಿ ರವಿತೇಜ ಡಬಲ್ ರೋಲ್ ಮಾಡಿದ್ದಾರೆ. ರವಿತೇಜ ಅವರ ಹಿಂದಿನ ಸಿನಿಮಾಗಳ ವಿಷಯಕ್ಕೆ ಬಂದರೆ, ರಮೇಶ್ ವರ್ಮಾ ನಿರ್ದೇಶನದ ಕಿಲಾಡಿಗಳು ಮತ್ತು ಶರತ್ ಮಾಂಡವ ನಿರ್ದೇಶನದ ರಾಮರಾವ್ ಅವರ ಆನ್ ಡ್ಯೂಟಿ ಕೂಡ ಫ್ಲಾಪ್ ಆಗಿದ್ದವು.
5/ 7
ಈ ಚಿತ್ರದ ಹಿಂದಿ ಡಬ್ಬಿಂಗ್ ಹಕ್ಕು ರೂ. 10 ಕೋಟಿಗೆ ಸೇಲ್ ಆಗಿದೆ. ಮತ್ತೊಂದೆಡೆ, ಸ್ಯಾಟ್ಲೈಟ್ ಹಾಗೂ ಡಿಜಿಟಲ್ ಹಕ್ಕುಗಳು ರೂ. 20 ಕೋಟಿಗೆ ಮಾರಾಟವಾಗಿದೆ.
6/ 7
ಧಮಾಕಾ ಸಿನಿಮಾ 96 ಕೋಟಿ ಕಲೆಕ್ಷನ್ ಮಾಡಿದೆ ಎಂದು ಚಿತ್ರತಂಡ ಘೋಷಿಸಿದೆ. ಇನ್ನೊಂದೆಡೆ 70 ಕೋಟಿ ಗಳಿಕೆ ಗಳಿಸಿದೆ ಎನ್ನುತ್ತಾರೆ ಟ್ರೇಡ್ ಪಂಡಿತರು. ಅದೇನೇ ಇರಲಿ, ರವಿತೇಜ ಅವರ ಸಿನಿಮಾ 100 ಕೋಟಿ ಕ್ಲಬ್ ಸೇರೋದು ಪಕ್ಕಾ ಅಂತಿದ್ದಾರೆ ಪ್ರೇಕ್ಷಕರು.
7/ 7
ಏನೇ ಆದ್ರೂ ರಶ್ಮಿಕಾ ನಂತರ ಈಗ ಮತ್ತೊಬ್ಬ ಸ್ಯಾಂಡಲ್ವುಡ್ ನಟಿ ತೆಲುಗು ಚಿತ್ರರಂಗದಲ್ಲಿ ಸಖತ್ ಸೌಂಡ್ ಮಾಡುತ್ತಿದ್ದಾರೆ.