ಸಿನಿಮಾ ಬಿಡುಗಡೆ ಆಗೋ ಮೊದಲೇ ಸ್ಯಾಂಡಲ್ ವುಡ್ ನಲ್ಲಿ ಈ ಹುಡುಗ ಮಾಸ್ ಹೀರೋ ಆಗಿ ನಿಲ್ಲಲಿದ್ದಾನೆ ಎಂಬ ಮಾತುಗಳು ಸ್ಟಾರ್ ಹೀರೋಗಳು, ನಿರ್ದೇಶಕರಿಂದ ಕೇಳಿ ಬರುತ್ತಿದೆ. ಯಾಕೆಂದರೆ ವಿಕ್ಕಿ ಅಭಿನಯಿಸುತ್ತಿರೋ 'ತ್ರಿವಿಕ್ರಮ' ಸಿನಿಮಾದ ಫಸ್ ಲುಕ್ನಲ್ಲಿ ಒಬ್ಬ ಮಾಸ್, ಲವರ್ ಬಾಯ್ ಇಮೇಜ್ ಎರಡೂ ಕೂಡ ಎದ್ದು ಕಾಣುತ್ತಿದೆ. ಇದರ ಜೊತೆಗೆ ವಿಕ್ರಂಗೆ ಅಭಿನಯದ ಸ್ಕಿಲ್ ತಂದೆಯಿಂದ ಕರಗತವಾಗಿ ಬಂದಿದೆ.
ಇಷ್ಟೆಲ್ಲಾ ಹೇಳಿದ ಮೇಲೆ ನಿಮ್ಮಲ್ಲೂ ಈ ಪ್ರಶ್ನೆ ಮೂಡಬಹುದು. ಅದ್ಯಾಕೆ ವಿವಾದಿತ ಪ್ರದೇಶದಲ್ಲೇ ಚಿತ್ರೀಕರಣ ಎಂದು. ಇದಕ್ಕೂ. ಉತ್ತರ ನೀಡಿದ್ದಾರೆ ನಿರ್ದೇಶಕ ಸಹನಾ ಮೂರ್ತಿ. ಭಾರತ ಚೀನಾ ಗಡಿ ವಿವಾದ ಈಗ ಅಂತರಾಷ್ಟ್ರೀಯ ಚರ್ಚಿತ ವಿಷಯ. ನಮ್ಮ ನೆಲದಲ್ಲಿ ನಾವು ಹೆಚ್ಚಾಗಿ ಭೇಟಿ ಕೊಟ್ಟರೆ ಆ ಜಾಗಕ್ಕೆ ಬೇರೆಯವರ ಪ್ರವೇಶ ಅಸಾಧ್ಯ. ಹಾಗೆಯೇ ನಮ್ಮ ದೇಶದ ಸಾರ್ವಭೌಮತ್ವವನ್ನ ಇಡೀ ದೇಶಕ್ಕೆ ತಿಳಿಸಬಹುದು.