Ravi Teja: ಒಟಿಟಿಯಲ್ಲಿ ಧಮಾಕಾ ರಿಲೀಸ್ ಡೇಟ್ ಫಿಕ್ಸ್! ರವಿತೇಜ ಅಭಿಮಾನಿಗಳು ಖುಷ್
Dhamaka OTT Release date: ವಿಶ್ವಾದ್ಯಂತ ಬಿಡುಗಡೆಯಾಗಿ ಸೂಪರ್ ಹಿಟ್ ಆದ ಧಮಾಕಾ ಸಿನಿಮಾ ನಟ ರವಿತೇಜ ಸಿನಿ ಕೆರಿಯರ್ ನಲ್ಲೇ ಬಹುದೊಡ್ಡ ಯಶಸ್ಸಾಗಿದೆ. ಇದೀಗ ಒಟಿಟಿ ರಿಲೀಸ್ ಡೇಟ್ ಕೂಡ ಫಿಕ್ಸ್ ಆಗಿದೆ.
ರವಿತೇಜ ಅಭಿನಯದ ಧಮಾಕಾ ಸಿನಿಮಾ ಒಟಿಟಿಯಲ್ಲೂ ರೆಕಾರ್ಡ್ ಮಾಡಲು ರೆಡಿಯಾಗಿದೆ. ಚಿತ್ರಮಂದಿರಗಳಲ್ಲಿ ಯಶಸ್ವಿಯಾದ ಈ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗ್ತಿದೆ.
2/ 8
ತ್ರಿನಾಥ ರಾವ್ ನಕ್ಕಿನ ನಿರ್ದೇಶನದ ಈ ಧಮಾಕಾ ಚಿತ್ರ ತೆಲುಗು ಪ್ರೇಕ್ಷಕರ ಮನಗೆದ್ದಿತ್ತು. ಈ ಚಿತ್ರವು ಮಾಸ್ ಮತ್ತು ಸಖತ್ ಎಂಟರ್ಟೈನರ್ ಆಗಿ ಪ್ರೇಕ್ಷಕರಿಗೆ ಇಷ್ಟವಾಗಿದೆ. ಕಲೆಕ್ಷನ್ ವಿಚಾರದಲ್ಲೂ ಭರ್ಜರಿ ಸೌಂಡ್ ಮಾಡಿದೆ.
3/ 8
ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ ಮತ್ತು ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರದಲ್ಲಿ ರವಿತೇಜಗೆ ನಾಯಕಿಯಾಗಿ ಶ್ರೀಲೀಲಾ ನಟಿಸಿದ್ದಾರೆ. ಸಿನಿಮಾಗೆ ಭೀಮ್ ಸಿಸೆರೊಲಿಯೊ ಮೂಸಿಕ್ ನೀಡಿದ್ದಾರೆ. ಡಿಸೆಂಬರ್ 23ರಂದು ಧಮಾಕಾ ಸಿನಿಮಾ, ವಿಶ್ವದಾದ್ಯಂತ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿತ್ತು.
4/ 8
ಅಭಿಮಾನಿಗಳು ಈ ಸಿನಿಮಾ ಒಟಿಟಿಗೆ ಯಾವಾಗ ಬರುತ್ತೋ ಎಂದು ಕಾಯುತ್ತಿದ್ದಾರೆ. ಈ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಪಡೆದಿರುವ ನೆಟ್ ಫ್ಲಿಕ್ಸ್ ಜನವರಿ 22 ರಿಂದ ಸ್ಟ್ರೀಮಿಂಗ್ ಪ್ರಾರಂಭಿಸಲಿದೆಯಂತೆ.
5/ 8
ಸದ್ಯಕ್ಕೆ, ಈ ಸ್ಟ್ರೀಮಿಂಗ್ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಇಲ್ಲ, ಆದರೆ ಶೀಘ್ರದಲ್ಲೇ ಅಧಿಕೃತ ಘೋಷಣೆಯಾಗಬಹುದು ಎಂಬ ಮಾತು ಕೇಳಿಬರುತ್ತಿದೆ. ಈ ಸುದ್ದಿ ತಿಳಿದು ರವಿತೇಜ ಅಭಿಮಾನಿಗಳು ಖುಷಿಯಾಗಿದ್ದಾರೆ.
6/ 8
ಈ ಚಿತ್ರದಲ್ಲಿ ಮಾಸ್ ಮಹಾರಾಜ ರವಿತೇಜ, ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಚಿನ್ ಖೇಡ್ಕರ್ ಮತ್ತು ತುಳಸಿ ಅವರ ಪುತ್ರ ರವಿತೇಜ (ಆನಂದ್) ಉದ್ಯಮಿಯಾಗಿ ಕಾಣಿಸಿಕೊಂಡು ಬಳಿಕ ಸಾಮಾನ್ಯ ವ್ಯಕ್ತಿಯಾಗಿ ಕಾಣಿಸಿಕೊಳ್ತಿದ್ದಾರೆ.
7/ 8
ಕಲೆಕ್ಷನ್ ನಲ್ಲಿ ಧಮಾಕಾ ಸಿನಿಮಾ ಈಗಾಗಲೇ 100 ಕೋಟಿ ಕ್ಲಬ್ ಸೇರಿದೆ. ಶ್ರೀಲೀಲಾ ಅವರ ಗ್ಲಾಮರ್ ಜೊತೆಗೆ ರವಿತೇಜ ಅವರ ಮಾಸ್ ಎನರ್ಜಿಯೂ ಇದ್ದು, ಈ ಧಮಾಕಾ ಚಿತ್ರ ಪ್ರೇಕ್ಷಕರ ಮನಗೆದ್ದಿದೆ.
8/ 8
ಈ ಧಮಾಕಾ ಸಿನಿಮಾದಲ್ಲಿ ರವಿತೇಜ ನಟನೆ ಹಾಗೂ ಕಾಮಿಡಿ ಟೈಮಿಂಗ್ ನೋಡಿ ಅಭಿಮಾನಿಗಳು ‘ಮಾಸ್ ಮಹಾರಾಜ ಈಸ್ ಬ್ಯಾಕ್’ ಎಂದು ಕುಣಿದು ಕುಪ್ಪಳಿಸಿದ್ದಾರೆ. ಶ್ರೀಲೀಲಾ ನೃತ್ಯ ವೀಕ್ಷಿಸಲು ಅಭಿಮಾನಿಗಳು ಮತ್ತೆ ಮತ್ತೆ ಚಿತ್ರಮಂದಿರಗಳಿಗೆ ಮುಗಿಬಿದ್ದಿದ್ದಾರೆ.