Rashmika Mandanna: ಫ್ಯಾಮಿಲಿ ಫೋಟೋ ಶೇರ್ ಮಾಡಿದ ರಶ್ಮಿಕಾ - ನಿಮ್ಮಿಂದಲೇ ನಮ್ಮ ಮುಖದಲ್ಲಿ ನಗು ಅಂದಿದ್ದು ಯಾರಿಗೆ?
Sandalwood Actress: ರಶ್ಮಿಕಾ ಮಂದಣ್ಣ, ಬಾಲಿವುಡ್, ಕಾಲಿವುಡ್, ಟಾಲಿವುಡ್ ಎಲ್ಲಾ ಚಿತ್ರರಂಗದಲ್ಲಿ ಬ್ಯುಸಿ ಇರುವ ನಟಿ, ಆದರೂ ಸಹ ಸಾಮಾಜಿಕ ಜಾಲಾತಾಣದ ಮೂಲಕ ಯಾವಾಗಲೂ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುತ್ತಾರೆ. ಇದೀಗ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಒಂದು ಫೋಟೋ ಹಂಚಿಕೊಂಡಿದ್ದು, ಅಭಿಮಾನಿಗಳಿಗೂ ಥ್ಯಾಂಕ್ಯೂ ಅಂದಿದ್ದಾರೆ.
ಕೊಡಗಿನ ಬೆಡಗಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ‘ಪುಷ್ಪ’ ಸಿನಿಮಾ ಸಕ್ಸಸ್ ನಂತರ ಬಾಲಿವುಡ್ನತ್ತ ಮುಖ ಮಾಡಿದ್ದು, ಫುಲ್ ಬ್ಯುಸಿ ಇದ್ದಾರೆ. ಚಿತ್ರರಂಗದ ಅತ್ಯಂತ ಜನಪ್ರಿಯ ನಟಿಯಾಗಿರುವ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ನಟಿ ಆಗಾಗ್ಗೆ ತಮ್ಮ ವೈಯಕ್ತಿಕ ಮತ್ತು ವೃತ್ತಿ ಜೀವನದ ಬಗ್ಗೆ ಹಂಚಿಕೊಳ್ಳುತ್ತಿರುತ್ತಾರೆ.
2/ 9
ಇನ್ಸ್ಟಾಗ್ರಾಮ್ನಲ್ಲಿ ಅದ್ಭುತ ಫೋಟೋಗಳೊಂದಿಗೆ ಅಭಿಮಾನಿಗಳಿಗೆ ಆಗಾಗ ಝಲಕ್ ಕೊಡುವ ಸುಂದರಿ, ಈಗ ತನ್ನ ಪೋಷಕರು ಮತ್ತು ಸಹೋದರಿಯೊಂದಿಗೆ ಪರಿಪೂರ್ಣ ಕುಟುಂಬ ಫೋಟೊವನ್ನು ಹಂಚಿಕೊಂಡಿದ್ದಾರೆ.
3/ 9
ರಶ್ಮಿಕಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಅವರ ಪೋಷಕರು ಮತ್ತು ಚಿಕ್ಕ ತಂಗಿಯನ್ನು ಒಳಗೊಂಡಿರುವ ಮಂದಣ್ಣ ಕುಟುಂಬದ ಸಂತೋಷದ ಫೋಟೋ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ರಶ್ಮಿಕಾ, ಅವರ ಪೋಷಕರು ಮತ್ತು ಅವರ ಸಹೋದರಿ ಇದ್ದು, ಕೂಟ್, ಹ್ಯಾಪಿ ಫ್ಯಾಮಿಲಿ ಫೋಟೋ ಎಂದಿದ್ದಾರೆ.
4/ 9
ಅವರ ಮುಖದಲ್ಲಿ ನಗು ಮೂಡಿರುವುದಕ್ಕೆ ಅವರ ಅಭಿಮಾನಿಗಳೇ ಕಾರಣ ಎಂದು ನಟಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದು, ರಶ್ಮಿಕಾ ಅವರ ಅಭಿಮಾನಿಗಳು ಫ್ಯಾಮಿಲಿ ಚಿತ್ರಕ್ಕೆ ಲೈಕ್ಗಳು ಮತ್ತು ಕಾಮೆಂಟ್ಗಳ ಸುರಿಮಳೆ ಸುರಿಸುತ್ತಿದ್ದಾರೆ.
5/ 9
ಮಂದಣ್ಣ ಫ್ಯಾಮಿಲಿಯ ಹ್ಯಾಪಿ ಫೋಟೋವನ್ನು ಶೇರ್ ಮಾಡಿದ್ದು,, ಫೋಟೋ ಕೆಳಗೆ ನಮ್ಮ ಈ ನಗುವಿಗೆ ಅಭಿಮಾನಿಗಳಾದ ನೀವೇ ಕಾರಣ ಎಂದು ಬರೆದಿದ್ದಾರೆ.
6/ 9
ಗೆಳತಿಯ ಮದುವೆಗೆ ಹೋಗಿದ್ದ ರಶ್ಮಿಕಾ ಅಲ್ಲಿಂದ ತಮ್ಮ ಕುಟುಂಬದ ಜೊತೆ ಸಮಯ ಕಳೆಯಲು ಮನೆಗೆ ತೆರಳಿದ್ದು, ತಂಗಿ ಮತ್ತು ತಂದೆ, ತಾಯಿ ಜೊತೆ ಇದ್ದು, ಸ್ವಲ್ಪ ಬ್ಯುಸಿ ಲೈಫ್ನಿಂದ ದೂರವಿದ್ದಾರೆ.
7/ 9
ಈ ಮಧ್ಯೆ, ಕೆಲಸದ ಮುಂಭಾಗದಲ್ಲಿ, , ರಶ್ಮಿಕಾಗೆ ಪುಷ್ಪ: ದಿ ರೂಲ್, ಅಲ್ಲು ಅರ್ಜುನ್ ಜೊತೆಗಿನ ಬ್ಲಾಕ್ಬಸ್ಟರ್ ಚಿತ್ರ ಪುಷ್ಪಾ ಸೀಕ್ವೆಲ್ ಇದೆ, ಇದರ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ.
8/ 9
ವಂಶಿ ಪೈಡಿಪಲ್ಲಿ ನಿರ್ದೇಶನದ ದಳಪತಿ 66 ರಲ್ಲಿ ದಳಪತಿ ವಿಜಯ್ ಎದುರು ನಾಯಕಿಯಾಗಿ ನಟಿಸುತ್ತಿದ್ದು, ಹನು ರಾಘವಪುಡಿ ಜೊತೆಗೆ ದುಲ್ಕರ್ ಸಲ್ಮಾನ್ ಅವರ ಮುಂದಿನ ಸೀತಾ ರಾಮಂನಲ್ಲಿ ಅವರು ಅತಿಥಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
9/ 9
ರಶ್ಮಿಕಾ ಮಂದಣ್ಣ ಟಾಲಿವುಡ್ನಲ್ಲಿ ಬ್ಯುಸಿಯಾಗಿದ್ದರೆ, ಇನ್ನೊಂದು ಕಡೆ ಬಾಲಿವುಡ್ನಲ್ಲಿ ನೆಲೆಯೂರಲು ಯತ್ನಿಸುತ್ತಿದ್ದಾರೆ. ಈಗಾಗಲೇ ರಶ್ಮಿಕಾ ಕೈಯಲ್ಲಿ ಎರಡು ಬಾಲಿವುಡ್ ಸಿನಿಮಾಗಳಿವೆ. ಸಿದ್ದಾರ್ಥ ಮಲ್ಹೋತ್ರಾ ಜೊತೆ ನಟಿಸುತ್ತಿರುವ 'ಮಿಷನ್ ಮಜ್ನು' ಬಿಡುಗಡೆಗೆ ಸಿದ್ದವಾಗಿದೆ. ಇನ್ನು ಅಮಿತಾಬ್ ಮಗಳಾಗಿ ನಟಿಸುತ್ತಿರುವ 'ಗುಡ್ ಬೈ' ಸಿನಿಮಾ ಕೈಯಲ್ಲಿವೆ.