Rashmika Mandanna: ವೈರಲ್ ಆಗುತ್ತಿದೆ ರಶ್ಮಿಕಾರ ಮತ್ತೊಂದು ಚುಂಬನದ ಚಿತ್ರ..!
ಕಿರಿಕ್ ಪಾರ್ಟಿ (Kirik Party) ಸಿನಿಮಾದಿಂದ ಬಣ್ಣದ ಲೋಕಕ್ಕೆ ಕಾಲಿಟ್ಟ ನಟ ರಶ್ಮಿಕಾ ಮಂದಣ್ಣ (Rashmika Mandanna) ಅವರು ಈಗ ಕನ್ನಡದ ಜೊತೆಗೆ ತೆಲುಗು, ತಮಿಳು ಹಾಗೂ ಹಿಂದಿ ಚಿತ್ರಗಳಲ್ಲಿ ಮಿಂಚುತ್ತಿದ್ದಾರೆ. ಇನ್ನು ರಶ್ಮಿಕಾ ಅವರ ಫೋಟೋಗಳು ಹಾಗೂ ವಿಡಿಯೋಗಳು ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಈಗಲೂ ಸಹ ಈ ನಟಿಯ ಲೆಟೆಸ್ಟ್ ಪೋಸ್ಟ್ ಒಂದು ವೈರಲ್ ಆಗುತ್ತಿದೆ. (ಚಿತ್ರಗಳು ಕೃಪೆ: ರಶ್ಮಿಕಾ ಮಂದಣ್ಣ ಇನ್ಸ್ಟಾಗ್ರಾಂ ಖಾತೆ)
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟಿಯರಲ್ಲಿ ರಶ್ಮಿಕಾ ಮಂದಣ್ಣ ಸಹ ಒಬ್ಬರು. ಇನ್ನು ರಶ್ಮಿಕಾ ಒಂದು ಫೋಟೋ ಪೋಸ್ಟ್ ಮಾಡಿದರೂ ಸಹ ಅದು ವೈರಲ್ ಆಗುತ್ತದೆ. ಅಷ್ಟರ ಮಟ್ಟಿಗೆ ರಶ್ಮಿಕಾ ಅವರಿಗೆ ಹಿಂಬಾಲಕರಿದ್ದಾರೆ.
2/ 8
ರಶ್ಮಿಕಾ ಮೊದಲ ಬಾರಿಗೆ ಟ್ರೋಲ್ ಆಗಿದ್ದು, ಟಾಲಿವುಡ್ನ ಗೀತ ಗೋವಿಂದಂ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಜೊತೆ ಮಾಡಿದ್ದ ಆ ಚುಂಬನದ ವಿಡಿಯೋದಿಂದಾಗಿ. ನಂತರದಲ್ಲಿ ಮತ್ತೆ ರಶ್ಮಿಕಾ ಡಿಯರ್ ಕಾಮ್ರೇಡ್ ಚಿತ್ರದಲ್ಲಿ ವಿಜಯ್ ದೇವರಕೊಂಡ ಜೊತೆ ಮತ್ತೆ ಚುಂಬನ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು.
3/ 8
ಇದೇ ಕಾರಣದಿಂದಾಗಿ ಆಗಾಗ ರಶ್ಮಿಕಾ ಟ್ರೋಲ್ ಆಗುತ್ತಿರುತ್ತಾರೆ. ಈಗಲೂ ಸಹ ಟ್ರೋಲಿಗರು ರಶ್ಮಿಕಾರ ಹಳೇ ವಿಡಿಯೋ ಹಾಗೂ ಫೋಟೋಗಳನ್ನು ಹುಡುಕಿ ಹುಡುಕಿ ಟ್ರೋಲ್ ಮಾಡುತ್ತಾರೆ.
4/ 8
ಆದರೆ, ಈ ಸಲ ರಶ್ಮಿಕಾ ಖುದ್ದು ತಾವೇ ಒಂದು ಮುದ್ದಾದ ಚುಂಬನ ಚಿತ್ರವನ್ನು ಹಂಚಿಕೊಂಡಿದ್ದು, ಅದು ನೆಟ್ಟಿಗರ ಮನ ಗೆದ್ದಿದೆ. ಹೌದು, ಅಷ್ಟಕ್ಕೂ ರಶ್ಮಿಕಾರ ಜೊತೆ ಆ ಚಿತ್ರದಲ್ಲಿ ಇರೋದು ಯಾರು ಅಂತೀರಾ..?
5/ 8
ಅದೇ ರಶ್ಮಿಕಾ ಅವರ ಮುದ್ದಿನ ಸಾಕು ನಾಯಿ ಔರಾ... ಈ ನಟಿಗೆ ಕೊಂಚ ಸಮಯ ಸಿಕ್ಕರೂ ಸಾಕು ತಮ್ಮ ಔರಾ ಜೊತೆ ಆಡಲು ಕುಳಿತು ಬಿಡುತ್ತಾರೆ. ಔರಾಗೆ ಮುತ್ತಿಡುತ್ತಾ ತೆಗೆಸಿಕೊಂಡ ಚಿತ್ರವನ್ನು ರಶ್ಮಿಕಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
6/ 8
ಕೆಲವೊಮ್ಮೆ ರಶ್ಮಿಕಾ ತಮ್ಮ ಮುದ್ದಿನ ನಾಯಿಯನ್ನು ಶೂಟಿಂಗ್ಗೂ ಜೊತೆಯಲ್ಲಿ ಕೆರೆದುಕೊಂಡು ಹೋಗುತ್ತಾರೆ. ಈ ಹಿಂದೆ ಗುಡ್ಬೈ ಚಿತ್ರದ ಸೆಟ್ನಲ್ಲೂ ಔರಾ ಕಾಣಿಸಿಕೊಂಡಿತ್ತು. ಜೊತೆಗೆ ಔರಾ ಈಗ ರಶ್ಮಿಕಾರ ಸ್ಟ್ರೆಸ್ ಬಸ್ಟರ್ ಎಂದರೆ ತಪ್ಪಾಗದು.
7/ 8
ಇತ್ತೀಚೆಗಷ್ಟೆ ರಶ್ಮಿಕಾ ತಮ್ಮ ಬಾಲಿವುಡ್ನ ಮೊದಲ ಪ್ರಾಜೆಕ್ಟ್ ಮಿಷನ್ ಮಜ್ನು ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಸದ್ಯ ರಶ್ಮಿಕಾ ಅಭಿನಯದ ಪುಷ್ಪ ಹಾಗೂ ಮಿಷನ್ ಮಜ್ನು ರಿಲೀಸ್ಗೆ ಸಜ್ಜಾಗುತ್ತಿದೆ.
8/ 8
ಈ ಸಿನಿಮಾಗಳ ಜೊತೆಗೆ ಟಾಲಿವುಡ್ನಲ್ಲಿ ಆಡವಾಳ್ಳು ಮೀಕು ಜೋಹಾರುಲು ಹಾಗೂ ಬಾಲಿವುಡ್ನಲ್ಲಿ ಅಮಿತಾಭ್ ಬಚ್ಚನ್ ಜೊತೆ ಗುಡ್ ಬೈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.