Rashmika Mandanna: ಕರಣ್ ಜೋಹರ್ ಬರ್ತ್ ಡೇ ಪಾರ್ಟಿಯಲ್ಲಿ ರಶ್ಮಿಕಾ, ಏನ್ ಸಖತ್ತಾಗಿ ರೆಡಿ ಆಗಿದಾರೆ ನೋಡಿ
Rashmika: ಬಾಲಿವುಡ್ನಲ್ಲಿ ಹಲವಾರು ಹಿಟ್ ಚಿತ್ರಗಳನ್ನು ನೀಡಿದ ಬಾಲಿವುಡ್ನ ಅತ್ಯಂತ ಪ್ರೀತಿಯ ಮತ್ತು ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕ ಕರಣ್ ಜೋಹರ್ ಮೇ 25 ರಂದು ತಮ್ಮ 50 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಆ ಪಾರ್ಟಿಯಲ್ಲಿ ಎಲ್ಲರ ಕಣ್ಣು ಸೆಳೆದಿದ್ದು, ರಶ್ಮಿಕಾ ಮಂದಣ್ಣ. ಕಿರಿಕ್ ಬೆಡಗಿ ಹೇಗೆ ಕಾಣ್ತಿದ್ರು ಇಲ್ಲಿದೆ ಫೋಟೋಸ್.
ಕರಣ್ ಅವರು ಅದ್ದೂರಿ ಹುಟ್ಟುಹಬ್ಬದ ಪಾರ್ಟಿಯನ್ನು ಆಯೋಜಿಸಿದ್ದರು, ಚಿತ್ರರಂಗದ ಅನೇಕ ತಾರೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅನುಷ್ಕಾ ಶರ್ಮಾ ರಿಂದ ಶಾಹಿದ್ ಕಪೂರ್ ವರೆಗೆ ಎಲ್ಲರೂ ಭಾಗವಹಿಸಿದ್ದರು.
2/ 8
ಎಲ್ಲಾ ಅತಿಥಿಗಳ ನಡುವೆ, ಎಲ್ಲರ ಕಣ್ಣು ಸೆಳೆದಿದ್ದು ಮಾತ್ರ ನ್ಯಾಷನಲ್ ಕ್ರಶ್, ರಶ್ಮಿಕಾ ಮಂದಣ್ಣ. ಕರಣ್ ಜೋಹರ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಎಲ್ಲರನ್ನು ಬೆರಗುಗೊಳಿಸಿದ ರಶ್ಮಿಕಾ ತಮ್ಮ ಸ್ಪೈಲ್ ಮೂಲಕ ಅಭಿಮಾನಿಗಳ ಮನಸ್ಸನ್ನು ಕದ್ದಿದ್ದಾರೆ.
3/ 8
ರಶ್ಮಿಕಾ ಬಹಳ ಸುಂದರವಾಗಿ ಕಾಣಿಸುತ್ತಿದ್ದರು. ಕಪ್ಪು ಬಣ್ಣದ ಉದ್ದನೆಯ ಹಾಗೂ ನೆಟ್ ಹೊಂದಿರುವ ವಿಭಿನ್ನವಾದ ಉಡುಪು ಧರಿಸಿದ್ದ ರಶ್ಮಿಕಾ ಮೇಲೆಯೇ ಹಲವರ ಕಣ್ಣಿತ್ತು. ಜೊತೆಗೆ ಡೈಮಂಡ್ ಕಿವಿಯೋಲೆಗಳು, ಹೀಲ್ಸ್ ಇನ್ನಷ್ಟು ಮೆರಗನ್ನು ಹೆಚ್ಚಿಸಿತ್ತು.
4/ 8
ರಶ್ಮಿಕಾ ತನ್ನ ಬಟ್ಟೆಗೆ ತಕ್ಕಂತೆ ಮೇಕಪ್ ಮತ್ತು ಕೇಶ ವಿನ್ಯಾಸವನ್ನು ಸಹ ಮಾಡಿದ್ದರು. ಕೂದಲನ್ನು ಕಟ್ಟದೇ ಹಾಗೆಯೇ ಬಿಟ್ಟಿದ್ದರು. ಅಲ್ಲದೇ ಮೇಕಪ್ ಕೂಡ ಆ ಸಂಜೆಯ ಜಗಮಗಿಸುವ ಪಾರ್ಟಿಗೆ ತಕ್ಕಂತೆ ಇತ್ತು.
5/ 8
ರಶ್ಮಿಕಾ ಕೆಲ ಕಾಲ ಬಾಲಿವುಡ್ ಮಂದಿಯನ್ನ ತನ್ನತ್ತ ಸೆಳೆದಿದ್ದರು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಅವರ ಲುಕ್, ಡ್ರೆಸ್ ಬಗ್ಗೆಯೇ ಚರ್ಚೆ ನಡೆದಿದೆಯಂತೆ.
6/ 8
ಸದ್ಯ ರಶ್ಮಿಕಾ ಏನೇ ಮಾಡಿದರೂ ಸುದ್ದಿ ಎನ್ನುವಂತಾಗಿದೆ. ಅವರೂ ಹೋದಲ್ಲಿ ಬಂದಲ್ಲಿ ಪಾಪರಾಜಿಗಳು ಅವರನ್ನು ಹಿಂಬಾಲಿಸುತ್ತಾರೆ. ಸಣ್ಣ ಸಣ್ಣ ವಿಚಾರಗಳು ಸಹ ದೊಡ್ಡದು ಎನ್ನುವಂತಾಗಿದೆ.
7/ 8
ತಮಿಳು ಹಾಗೂ ತೆಲುಗಿನಲ್ಲಿ ಬ್ಯುಸಿ ಇರುವ ರಶ್ಮಿಕಾ, ಬಾಲಿವುಡ್ನಲ್ಲಿ ಸಹ ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಸದ್ಯ ಅವರು ಸಿದ್ಧಾರ್ಥ ಜೊತೆ ಅಭಿನಯಿಸುತ್ತಿರುವ ಮಿಷನ್ ಮಜ್ನು ತೆರೆಗೆ ಬರಲು ಸಿದ್ದವಾಗಿದೆ.
8/ 8
ಅದೊಂದೇ ಅಲ್ಲದೇ ಬಿಗ್ ಬಿ ಜೊತೆ ಸಹ ತೆರೆ ಹಂಚಿಕೊಳ್ಳುತ್ತಿದ್ದು, ಒಟ್ಟಾರೆಯಾಗಿ ದಕ್ಷಿಣದ ಲಕ್ಕಿ ಗರ್ಲ್ ಬಾಲಿವುಡ್ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.