Rashmika Mandanna: ಸೌತ್​​ನ ಸ್ಟಾರ್ ಹೀರೋಗಳನ್ನೆಲ್ಲ ಹಿಂದಿಕ್ಕಿ ರಶ್ಮಿಕಾ ಹೊಸ ದಾಖಲೆ

Rashmika Mandanna: ಇನ್​ಸ್ಟಾಗ್ರಾಮ್​ನಲ್ಲಿ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಹೊಸ ದಾಖಲೆ ಬರೆದಿದ್ದಾರೆ. ಸೌತ್ ಇಂಡಸ್ಟ್ರಿಯ ಹೆಚ್ಚಿನ ಸ್ಟಾರ್ ನಟರನ್ನು ಹಿಂದಿಕ್ಕಿದ್ದಾರೆ.

First published:

  • 18

    Rashmika Mandanna: ಸೌತ್​​ನ ಸ್ಟಾರ್ ಹೀರೋಗಳನ್ನೆಲ್ಲ ಹಿಂದಿಕ್ಕಿ ರಶ್ಮಿಕಾ ಹೊಸ ದಾಖಲೆ

    ಕೂರ್ಗ್ ಲೇಡಿ ರಶ್ಮಿಕಾ ಮಂದಣ್ಣ ಬಗ್ಗೆ ವಿಶೇಷ ಪರಿಚಯ ನೀಡುವಂತಹ ಅಗತ್ಯವಿಲ್ಲ. ಚಲೋ ಚಿತ್ರದ ಮೂಲಕ ತೆಲುಗಿಗೆ ಪಾದಾರ್ಪಣೆ ಮಾಡಿದ ಕನ್ನಡತಿ ಸರಣಿ ಹಿಟ್ ಸಿನಿಮಾಗಳ ಮೂಲಕ ಪ್ರೇಕ್ಷಕರ ಹೃದಯವನ್ನು ಕದ್ದಿದ್ದಾರೆ. ಸದ್ಯ ರಶ್ಮಿಕಾ ತೆಲುಗಿನಲ್ಲಿ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಚಿತ್ರದಲ್ಲಿ ನಟಿಸುತ್ತಿದ್ದಾರೆ.

    MORE
    GALLERIES

  • 28

    Rashmika Mandanna: ಸೌತ್​​ನ ಸ್ಟಾರ್ ಹೀರೋಗಳನ್ನೆಲ್ಲ ಹಿಂದಿಕ್ಕಿ ರಶ್ಮಿಕಾ ಹೊಸ ದಾಖಲೆ

    ರಶ್ಮಿಕಾ ಮಂದಣ್ಣ ಪುಷ್ಪಾ 2 ಜೊತೆ ಜೊತೆಗೇ ರೈನೋ ಚಿತ್ರದ ಕೆಲಸಗಳಲ್ಲಿಯೂ ಸಖತ್ ಬ್ಯುಸಿಯಾಗಿದ್ದಾರೆ. ಹೀಗಿದ್ದರೂ ನಟಿ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಆ್ಯಕ್ಟಿವ್ ಆಗಿರುವುದನ್ನು ತಪ್ಪಿಸುವುದಿಲ್ಲ. ಏನಾದರೊಂದು ಅಪ್ಡೇಟ್​ ಕೊಡುತ್ತಲೇ ಇರುತ್ತಾರೆ ಈ ಕಿರಿಕ್ ಚೆಲುವೆ.

    MORE
    GALLERIES

  • 38

    Rashmika Mandanna: ಸೌತ್​​ನ ಸ್ಟಾರ್ ಹೀರೋಗಳನ್ನೆಲ್ಲ ಹಿಂದಿಕ್ಕಿ ರಶ್ಮಿಕಾ ಹೊಸ ದಾಖಲೆ

    ಇತ್ತೀಚೆಗೆ ವಾರಿಸು ಚಿತ್ರದ ಮೂಲಕ ಮತ್ತೊಂದು ಬಂಪರ್ ಹಿಟ್ ಪಡೆದುಕೊಂಡಿರುವ ಈ ನಟಿ ಈಗ ಸೆನ್ಸೇಷನಲ್ ದಾಖಲೆ ಸೃಷ್ಟಿಸಿದ್ದಾರೆ. ರಶ್ಮಿಕಾ ಆಗಾಗ ತಮ್ಮ ಸಿನಿಮಾ ಮತ್ತು ವೈಯಕ್ತಿಕ ಅನುಭವಗಳನ್ನು ತಮ್ಮ ಅಭಿಮಾನಿಗಳು ಮತ್ತು ಪ್ರೇಕ್ಷಕರೊಂದಿಗೆ Instagram ನಲ್ಲಿ ಹಂಚಿಕೊಳ್ಳುತ್ತಾರೆ.

    MORE
    GALLERIES

  • 48

    Rashmika Mandanna: ಸೌತ್​​ನ ಸ್ಟಾರ್ ಹೀರೋಗಳನ್ನೆಲ್ಲ ಹಿಂದಿಕ್ಕಿ ರಶ್ಮಿಕಾ ಹೊಸ ದಾಖಲೆ

    ರಶ್ಮಿಕಾ ಮಂದಣ್ಣ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಟ್ಟು 38 ಮಿಲಿಯನ್ ಫಾಲೋವರ್ಸ್ ಪಡೆಯುವ ಮೂಲಕ ದೊಡ್ಡ ದಾಖಲೆ ಬರೆದಿದ್ದಾರೆ. ಇದರೊಂದಿಗೆ ರಶ್ಮಿಕಾ ಮಂದಣ್ಣ ಭಾರತದಲ್ಲಿ ಅತಿ ಹೆಚ್ಚು ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಹೊಂದಿರುವ ನಾಯಕಿಯರಲ್ಲಿ ಒಬ್ಬರು ಎಂಬ ಸೆನ್ಸೇಷನಲ್ ದಾಖಲೆಯನ್ನು ದಾಖಲಿಸಿದ್ದಾರೆ.

    MORE
    GALLERIES

  • 58

    Rashmika Mandanna: ಸೌತ್​​ನ ಸ್ಟಾರ್ ಹೀರೋಗಳನ್ನೆಲ್ಲ ಹಿಂದಿಕ್ಕಿ ರಶ್ಮಿಕಾ ಹೊಸ ದಾಖಲೆ

    ಇತ್ತೀಚೆಗೆ, ರಶ್ಮಿಕಾ ಮಂದಣ್ಣ ತಮ್ಮ Instagram ಖಾತೆಯಲ್ಲಿ ಒಟ್ಟು 38 ಮಿಲಿಯನ್ ಫಾಲೋವರ್ಸ್​ಗಳನ್ನು ಪಡೆಯುವ ಮೂಲಕ ದೊಡ್ಡ ದಾಖಲೆಯನ್ನು ಮಾಡಿದ್ದಾರೆ. ಇದೇ ಕಾರಣಕ್ಕೆ ಅವರ ಅಭಿಮಾನಿಗಳು ಅವರಿಗೆ ಶುಭಾಶಯ ತಿಳಿಸುತ್ತಿದ್ದಾರೆ. ರಶ್ಮಿಕಾ ಅವರಿಗೆ ಸೌತ್​ನ ಬಹಳಷ್ಟು ಸ್ಟಾರ್ ಹೀರೋಗಳಿಗಿಂತ ಹೆಚ್ಚು ಫಾಲೋವರ್ಸ್ ಇರುವುದು ವಿಶೇಷ.

    MORE
    GALLERIES

  • 68

    Rashmika Mandanna: ಸೌತ್​​ನ ಸ್ಟಾರ್ ಹೀರೋಗಳನ್ನೆಲ್ಲ ಹಿಂದಿಕ್ಕಿ ರಶ್ಮಿಕಾ ಹೊಸ ದಾಖಲೆ

    ಸತತ ಹಿಟ್ ಚಿತ್ರಗಳ ಮೂಲಕ ಚಿತ್ರರಂಗದಲ್ಲಿ ಮೇಲೇರುತ್ತಿರುವ ರಶ್ಮಿಕಾ ಮಂದಣ್ಣ ಅವರ ಸಂಭಾವನೆಯ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಒಂದು ಚಿತ್ರಕ್ಕೆ ರಶ್ಮಿಕಾ 4 ಕೋಟಿ ಸಂಭಾವನೆ ತೆಗೆದುಕೊಳ್ಳುತ್ತಿದ್ದಾರಂತೆ. ಇನ್ನು ರಶ್ಮಿಕಾ ಅವರ ಆಸ್ತಿ ಮೌಲ್ಯ 64 ಕೋಟಿ, ಸೆಲೆಬ್ರಿಟಿಗಳ ಆಸ್ತಿ ವಿವರ ನೀಡುವ ವೆಬ್‌ಸೈಟ್ ಅವರ ತಿಂಗಳ ಆದಾಯ 60 ಲಕ್ಷ ಮತ್ತು ವಾರ್ಷಿಕ ಆದಾಯ ಎಂಟು ಕೋಟಿ ಎಂದು ಹೇಳಲಾಗಿದೆ.

    MORE
    GALLERIES

  • 78

    Rashmika Mandanna: ಸೌತ್​​ನ ಸ್ಟಾರ್ ಹೀರೋಗಳನ್ನೆಲ್ಲ ಹಿಂದಿಕ್ಕಿ ರಶ್ಮಿಕಾ ಹೊಸ ದಾಖಲೆ

    ರಶ್ಮಿಕಾ ಸಿನಿಮಾಗಳ ವಿಚಾರಕ್ಕೆ ಬಂದರೆ ಅವರ ವಾರಿಸು ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡರು. ಚಿತ್ರವು ಪ್ರಸ್ತುತ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ನಟಿ ತನ್ನ ಗಳಿಕೆಯ ಬಹುಪಾಲು ಆಸ್ತಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಅದರ ಭಾಗವಾಗಿ ಈ ಐದು ವರ್ಷಗಳಲ್ಲಿ ಐದು ಐಷಾರಾಮಿ ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಿದ್ದಾರೆ ಈ ನಟಿ.

    MORE
    GALLERIES

  • 88

    Rashmika Mandanna: ಸೌತ್​​ನ ಸ್ಟಾರ್ ಹೀರೋಗಳನ್ನೆಲ್ಲ ಹಿಂದಿಕ್ಕಿ ರಶ್ಮಿಕಾ ಹೊಸ ದಾಖಲೆ

    ಮುಂಬೈ, ಮಡಿಕೇರಿ, ಬೆಂಗಳೂರು ನಗರದಲ್ಲಿ ರಶ್ಮಿಕಾ ದುಬಾರಿ ಅಪಾರ್ಟ್‌ಮೆಂಟ್ ಹೊಂದಿದ್ದಾರೆ. ಕೆಲಸದ ವಿಚಾರವಾಗಿ ನೋಡುವುದಾದರೆ ಅವರು ಈಗ ಪುಷ್ಪಾ 2 ನಲ್ಲಿ ನಿರತರಾಗಿದ್ದಾರೆ. ಇದು ಅವರ ವೃತ್ತಿಜೀವನದ ದೊಡ್ಡ ಪ್ರಾಜೆಕ್ಟ್. ಸದ್ಯ ಈ ಸಿನಿಮಾ ಶೂಟಿಂಗ್ ನಡೆಯುತ್ತಿದೆ.

    MORE
    GALLERIES