Vijay Deverakonda: ಮತ್ತೆ ಒಂದಾದ ರಶ್ಮಿಕಾ-ವಿಜಯ್! ಬರ್ತಿದೆ ಗೀತ ಗೋವಿಂದಂ 2 ಸಿನಿಮಾ

Vijay Devarakonda: ವಿಜಯ್ ದೇವರಕೊಂಡ ಅವರು ಖುಷಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಈಗಾಗಲೇ ಎರಡು ಶೆಡ್ಯೂಲ್‌ಗಳ ಶೂಟಿಂಗ್ ಮುಗಿಸಿದೆ. ಹೊಸ ಶೆಡ್ಯೂಲ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಇದರ ಮಧ್ಯೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಕಾಂಬಿನೇಷನ್‌ನಲ್ಲಿ ಪರಶುರಾಮ್ ಪೆಟ್ಲ ನಿರ್ದೇಶನದ ಗೀತ ಗೋವಿಂದಂ ಸಿನಿಮಾದ ಸೀಕ್ವೆಲ್ ಬರಲಿದೆ ಎನ್ನುವ ಸುದ್ದಿ ಹೊರಬಿದ್ದಿದ್ದು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

First published:

 • 18

  Vijay Deverakonda: ಮತ್ತೆ ಒಂದಾದ ರಶ್ಮಿಕಾ-ವಿಜಯ್! ಬರ್ತಿದೆ ಗೀತ ಗೋವಿಂದಂ 2 ಸಿನಿಮಾ

  ಫಿಲ್ಮ್ ವಲಯದಲ್ಲಿ ಇತ್ತೀಚಿನ ಗಾಸಿಪ್ ಪ್ರಕಾರ ವಿಜಯ್ ದೇವರಕೊಂಡ ಮತ್ತೊಮ್ಮೆ ಗೀತ ಗೋವಿಂದಂ ಸೀಕ್ವೆಲ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರಿಗೆ ಬ್ಲಾಕ್ಬಸ್ಟರ್ ಹಿಟ್ ನೀಡಿದ ಸಿನಿಮಾದ ಸೀಕ್ವೆಲ್ ಸೆಟ್ಟೇರಲಿದೆ ಎನ್ನುವ ವಿಚಾರ ಅಭಿಮಾನಿಗಳಿಗೆ ಥ್ರಿಲ್ ಕೊಟ್ಟಿದೆ.

  MORE
  GALLERIES

 • 28

  Vijay Deverakonda: ಮತ್ತೆ ಒಂದಾದ ರಶ್ಮಿಕಾ-ವಿಜಯ್! ಬರ್ತಿದೆ ಗೀತ ಗೋವಿಂದಂ 2 ಸಿನಿಮಾ

  ವಿಜಯ್ ದೇವರಕೊಂಡ ಅವರ ಸದ್ಯದ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ನಟ ಲೈಗರ್ ಸೋಲಿನ ನಂತರ ಖುಷಿ ಸಿನಿಮಾ ಮಾಡುತ್ತಿದ್ದಾರೆ. ಸಮಂತಾ ಅವರ ಅನಾರೋಗ್ಯದ ಕಾರಣದಿಂದ ಈ ಚಿತ್ರದ ಶೂಟಿಂಗ್ ಮುಂದೂಡಲಾಗಿದೆ.

  MORE
  GALLERIES

 • 38

  Vijay Deverakonda: ಮತ್ತೆ ಒಂದಾದ ರಶ್ಮಿಕಾ-ವಿಜಯ್! ಬರ್ತಿದೆ ಗೀತ ಗೋವಿಂದಂ 2 ಸಿನಿಮಾ

  ನಿರ್ದೇಶಕ ಗೌತಮ್ ತಿನ್ನನೂರಿ ರೌಡಿ ಸ್ಟಾರ್ ವಿಜಯ್ ಜೊತೆ ಸಿನಿಮಾ ಮಾಡುತ್ತಿದ್ದಾರೆ ಎನ್ನಲಾಗಿದೆ. ಚಿತ್ರದ ಘೋಷಣೆಯ ಸಂದರ್ಭದಲ್ಲಿ, ನಿರ್ಮಾಪಕರು ಪೋಸ್ಟರ್ ಅನ್ನು ಬಿಡುಗಡೆ ಮಾಡಿದರು. ಅದರಲ್ಲಿ ಒಬ್ಬ ವ್ಯಕ್ತಿ ಪೊಲೀಸ್ ವೇಷ ಧರಿಸಿ, ಮುಖಕ್ಕೆ ಮಾಸ್ಕ್ ಹಾಕಿಕೊಂಡು ಗೂಢಚಾರನಂತೆ ನಟಿಸುತ್ತಿರುವುದನ್ನು ಕಾಣಬಹುದು. ಇದು ಗೂಢಚಾರಿಕೆ ಚಿತ್ರ ಎಂಬುದು ಪೋಸ್ಟರ್​ನಿಂದ ಸ್ಪಷ್ಟವಾಗಿದೆ. ಸದ್ಯದಲ್ಲೇ ಈ ಸಿನಿಮಾದ ಶೂಟಿಂಗ್ ಶುರುವಾಗಲಿದೆ.

  MORE
  GALLERIES

 • 48

  Vijay Deverakonda: ಮತ್ತೆ ಒಂದಾದ ರಶ್ಮಿಕಾ-ವಿಜಯ್! ಬರ್ತಿದೆ ಗೀತ ಗೋವಿಂದಂ 2 ಸಿನಿಮಾ

  ಇನ್ನು ವಿಜಯ್ ಅವರ ಇತ್ತೀಚಿನ ಚಿತ್ರ ಖುಷಿ ವಿಚಾರಕ್ಕೆ ಬಂದರೆ ಈ ಸಿನಿಮಾ ಈಗಾಗಲೇ ಎರಡು ಶೆಡ್ಯೂಲ್ ಮುಗಿಸಿದೆ. ಸದ್ಯದಲ್ಲೇ ಈ ಸಿನಿಮಾದ ಹೊಸ ಶೆಡ್ಯೂಲ್ ಶುರುವಾಗಲಿದೆಯಂತೆ. ಈ ವಿಚಾರದಲ್ಲಿ ಸಮಂತಾ ಜೊತೆಗೆ ನಿರ್ದೇಶಕರು ಕೂಡ ಸ್ಪಷ್ಟನೆ ನೀಡಿದ್ದಾರೆ.

  MORE
  GALLERIES

 • 58

  Vijay Deverakonda: ಮತ್ತೆ ಒಂದಾದ ರಶ್ಮಿಕಾ-ವಿಜಯ್! ಬರ್ತಿದೆ ಗೀತ ಗೋವಿಂದಂ 2 ಸಿನಿಮಾ

  ಈ ಚಿತ್ರವನ್ನು ಶಿವ ನಿರ್ವಾಣ ನಿರ್ದೇಶಿಸಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ನಿರ್ಮಿಸಿರುವ ಈ ಚಿತ್ರದಲ್ಲಿ ಜಯರಾಮ್, ಸಚಿನ್ ಖಡೇಕರ್, ಅಲಿ, ವೆನ್ನೆಲ ಕಿಶೋರ್, ರಾಹುಲ್ ರಾಮಕೃಷ್ಣ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಮಲಯಾಳಂ ಚಿತ್ರ ಹೃದಯಂ ಖ್ಯಾತಿಯ ಹಿಶಾಮ್ ಅಬ್ದುಲ್ ವಹಾಬ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬರುತ್ತಿದೆ.

  MORE
  GALLERIES

 • 68

  Vijay Deverakonda: ಮತ್ತೆ ಒಂದಾದ ರಶ್ಮಿಕಾ-ವಿಜಯ್! ಬರ್ತಿದೆ ಗೀತ ಗೋವಿಂದಂ 2 ಸಿನಿಮಾ

  ತೆಲುಗಿನ ಜೊತೆಗೆ ಬೇರೆ ಭಾಷೆಯಲ್ಲೂ ವಿಜಯ್ ದೇವರಕೊಂಡ ಅವರಿಗೆ ಒಳ್ಳೆಯ ಕ್ರೇಜ್ ಇದೆ. ಈ ಹಿನ್ನಲೆಯಲ್ಲಿ ಮಲಯಾಳಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಮಲಯಾಳಂನಲ್ಲಿ ಬರುತ್ತಿರುವ ವೃಷಭ ಸಿನಿಮಾದಲ್ಲಿ ವಿಜಯ್ ನಟಿಸುತ್ತಿದ್ದಾರಂತೆ. ಈ ಸಿನಿಮಾದಲ್ಲಿ ವಿಜಯ್ ಮೋಹನ್ ಲಾಲ್ ಅವರ ಮಗನಾಗಿ ಕಾಣಿಸಿಕೊಳ್ಳಲಿದ್ದಾರೆ. ಅದರ ಭಾಗವಾಗಿ ಈಗಾಗಲೇ ಈ ಚಿತ್ರದ ನಿರ್ದೇಶಕ ನಂದ ಕಿಶೋರ್ ವಿಜಯ್ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆ ಇದೆ. ಈ ಸಿನಿಮಾ ತೆಲುಗು ಹಾಗೂ ಮಲಯಾಳಂನಲ್ಲಿ ರೆಡಿಯಾಗಲಿದೆ.

  MORE
  GALLERIES

 • 78

  Vijay Deverakonda: ಮತ್ತೆ ಒಂದಾದ ರಶ್ಮಿಕಾ-ವಿಜಯ್! ಬರ್ತಿದೆ ಗೀತ ಗೋವಿಂದಂ 2 ಸಿನಿಮಾ

  ವಿಜಯ್ ದೇವರಕೊಂಡ ಅವರ ಸಿನಿಮಾ ಲೈಗರ್ ಫ್ಲಾಪ್ ಆದರೂ ಈಗ ಅವರ ಖುಷಿ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ವಿಶೇಷವಾಗಿ ಸಮಂತಾ ಜೊತೆ ನಟಿಸುತ್ತಿರುವುದರಿಂದ ಕುತೂಹಲ ಹೆಚ್ಚಾಗಿದೆ.

  MORE
  GALLERIES

 • 88

  Vijay Deverakonda: ಮತ್ತೆ ಒಂದಾದ ರಶ್ಮಿಕಾ-ವಿಜಯ್! ಬರ್ತಿದೆ ಗೀತ ಗೋವಿಂದಂ 2 ಸಿನಿಮಾ

  ಇನ್ನು ಗೀತಾ ಗೋವಿಂದಂ ಸಿನಿಮಾ ಸೀಕ್ವೆಲ್ ಬರುತ್ತಿರುವುದನ್ನು ತಿಳಿದು ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ರಶ್ಮಿಕಾ ಹಾಗೂ ವಿಜಯ್ ಜೋಡಿ ಮತ್ತೊಮ್ಮೆ ಮೋಇ ಮಾಡೋದು ಪಕ್ಕಾ ಆಗಿದೆ.

  MORE
  GALLERIES