ರಶ್ಮಿಕಾ ಮಂದಣ್ಣ ಸದ್ಯ ಮುಂಬೈನಲ್ಲಿದ್ದು, ಅಮಿತಾಭ್ ಬಚ್ಚನ್ ಅವರೊಂದಿಗೆ ಗುಡ್ಬೈ ಸಿನಿಮಾದ ಶೂಟಿಂಗ್ನಲ್ಲಿದ್ದಾರೆ.
2/ 10
ಹೀಗಿರುವಾಗಲೇ ರಶ್ಮಿಕಾ ಅವರ ಹೊಸ ತೆಲುಗು ಸಿನಿಮಾ ಕುರಿತಾದ ಸುದ್ದಿಯೊಂದು ಹೊರ ಬಿದ್ದಿದೆ.
3/ 10
ರಶ್ಮಿಕಾ ಈಗಾಗಲೇ ತೆಲುಗಿನಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ.
4/ 10
ಗೀತ ಗೋವಿಂದಂ ಹಾಗೂ ಡಿಯರ್ ಕಾಮ್ರೇಡ್ ಸಿನಿಮಾಗಳಲ್ಲಿ ವಿಜಯ್ ದೇವರಕೊಂಢ ಜತೆ ನಟಿಸಿದ್ದಾರೆ ರಶ್ಮಿಕಾ ಮಂದಣ್ಣ.
5/ 10
ಆದರೆ, ಈಗ ಇದೇ ರಶ್ಮಿಕಾ ಟಾಲಿವುಡ್ ನಟರೊಬ್ಬರ ಜತೆ ಮತ್ತೆ ತೆರೆ ಹಂಚಿಕೊಳ್ಳಲಿದ್ದಾರೆ.
6/ 10
ಹೌದು, ಈ ಸುದ್ದಿ ನಿಜ. ಆದರೆ ರಶ್ಮಿಕಾ ಮತ್ತೆ ನಟಿಸಲಿರುವ ನಟ ಯಾರು ಗೊತ್ತಾ..?
7/ 10
ಅದೇ ನಿತಿನ್. ಹೌದು, ಈ ಜೋಡಿ ಭೀಷ್ಮ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಸಿನಿಮಾ ಸಹ ಹಿಟ್ ಆಗಿತ್ತು.
8/ 10
ರಶ್ಮಿಕಾ ಈಗ ಇದೇ ನಟನ ಜತೆ ಮತ್ತೆ ನಟಿಸಲಿದ್ದಾರೆ. ಅದು ನಿರ್ದೇಶಕ ವಕ್ಕಂತಂ ವಂಶಿ ಅವರ ಚಿತ್ರದಲ್ಲಿ.
9/ 10
ವಂಶಿ ಅವರ ಸಿನಿಮಾದಲ್ಲಿ ನಟಿಸಲು ನಿತಿನ್ ಈಗಾಗಲೇ ಓಕೆ ಹೇಳಿದ್ದಾರಂತೆ.
10/ 10
ಈ ಕುರಿತಾಗಿ ರಶ್ಮಿಕಾ ಜತೆ ಮೊದಲ ಹಂತದ ಮಾತುಕತೆ ಸಹ ಮುಗಿದಿದೆಯಂತೆ. ರಶ್ಮಿಕಾ ಇದನ್ನು ಹೊರತುಪಡಿಸಿ ಶರ್ವಾನಂದ ಜತೆ ಆಡವಾಳ್ಳು ಮೀಕು ಜೋಹಾರುಲು ಹಾಗೂ ಅಲ್ಲು ಅರ್ಜುನ್ ಜತೆ ಪುಷ್ಪ ಚಿತ್ರದಲ್ಲಿ ನಟಿಸುತ್ತಿದ್ದಾರೆ.