Rashmika Mandanna: ರಶ್ಮಿಕಾ ಮಂದಣ್ಣ ಕನ್ನಡದ ಚೆಲುವೆ ಈಗ ತೆಲುಗಿನ ಜೊತೆಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತನ್ನ ಛಾಪು ಮೂಡಿಸುತ್ತಿದ್ದಾರೆ. ನ್ಯಾಷನಲ್ ಕ್ರಷ್ ಎಂದು ಫೇಮಸ್ ಆಗಿರುವ ಈ ನಟಿ ತಮ್ಮ ಸಾಲು ಸಾಲು ಹಿಟ್ ಚಿತ್ರಗಳ ಮೂಲಕ ಮನೆಮಾತಾಗಿದ್ದಾರೆ. ಈ ಪುಷ್ಪ ಸುಂದರಿ ಏನೂ ಮಾಡಿದರೂ ಸುದ್ದಿ ಎನ್ನುವಂತಿದೆ. ಇದೀಗ ಅವರ ಹೆಸರಿನ ಬಗ್ಗೆ ಒಂದು ಸೂಪರ್ ಸುದ್ದಿ ಹರಿದಾಡುತ್ತಿದೆ.
ಕೊಡಗಿನ ಬೆಡಗಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ‘ಪುಷ್ಪ’ ಸಿನಿಮಾ ಸಕ್ಸಸ್ನಲ್ಲಿ ತೇಲುತ್ತಿದ್ದಾರೆ. ತೆಲುಗು ಸಿನಿರಂಗದಲ್ಲಿ ಹಿಟ್ಗಳ ಮೇಲೆ ಹಿಟ್ ಸಿನಿಮಾ ಕೊಡುತ್ತಿರುವ ರಶ್ಮಿಕಾ ಮಂದಣ್ಣ ಮುಂದೆ ಸಾಲು ಸಾಲು ಆಫರ್ಗಳು ಇವೆ.
2/ 9
ತಮಿಳು ಖ್ಯಾತ ನಟ ವಿಜಯ್ ಸೇರಿದಂತೆ ಘಟಾನುಘಟಿಗಳೇ ರಶ್ಮಿಕಾಗೆ ನಾಯಕಿಯಾಗಿ ಆಫರ್ ನೀಡುತ್ತಿದ್ದಾರೆ. ಮತ್ತೊಂದೆಡೆ ಬಾಲಿವುಡ್ನಲ್ಲೂ ರಶ್ಮಿಕಾ ಜರ್ನಿ ಶುರುವಾಗಿದ್ದು, ಬಾಲಿವುಡ್ ದಂತ ಕಥೆ, ಬಿಗ್ ಬಿ ಅಮಿತಾಭ್ ಬಚ್ಚನ್ ಸೇರಿದಂತೆ ಖ್ಯಾತನಾಮರ ಜೊತೆ ರಶ್ಮಿಕಾ ತೆರೆ ಹಂಚಿಕೊಳ್ಳಲಿದ್ದಾರೆ.
3/ 9
ಇನ್ನು ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಈ ರಶ್ಮಿಕಾ ಇದೀಗ ನನ್ನನ್ನ ರಶ್ ಎಂದು ಕರೆಯಿರಿ ಎನ್ನುವ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳು ಕೆಲ ಕ್ಷಣ ಅರೇ ಇದೇನಪ್ಪ ಎಂದಿದ್ದಾರೆ.
4/ 9
ಹೌದು, ಸಿನಿಮಾ ಸೆಟ್ನಲ್ಲಿ ರಶ್ಮಿಕಾ ಎಂದು ಹೇಳೋಕೆ ಕೆಲವರು ತಡವರಿಸುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದು, ರಶ್ಮಿಕಾ ಎಂಬುದು ಉದ್ದವಾದ ಹೆಸರು ಎಂದು ನನಗೆ ಅರ್ಥವಾಗಿದೆ, ಚಿಂತೆ ಮಾಡಬೇಡಿ ಎಂದಿದ್ದಾರೆ.
5/ 9
ಇನ್ನು ನಿಮಗೆ ರಶ್ಮಿಕಾ ಎಂದು ಕರೆಯಲು ಕಷ್ಟವಾದರೇ, ರಶ್ ಎಂದು ಕರೆಯಿರಿ. ನನಗೆ ಹೀಗೆ ಕರೆಯುವುದರಿಂದ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ.
6/ 9
ಈ ಬಗ್ಗೆ ಪೋಸ್ಟ್ ಶೇರ್ ಮಾಡಿರುವ ಅವರು, ಸೆಟ್ನಲ್ಲಿ ನನ್ನನ್ನ ರಶ್ ಎಂದು ಕರೆಯಬಹುದು ಎಂದು ಹೇಳಿದ್ದಾರೆ.
7/ 9
ಇನ್ನು ರಶ್ಮಿಕಾ ಮಂದಣ್ಣ ಇತ್ತೀಚೆಗೆ ಬಹಳ ಸುದ್ದಿಯಲ್ಲಿದ್ದಾರೆ. ಗೆಳತಿಯ ಮದುವೆಯಲ್ಲಿ ಮಿಂಚಿದ್ದ ಕಿರಿಕ್ ಬೆಡಗಿ, ಫ್ಯಾಮಿಲಿ ಜೊತೆ ಫೋಟೋ ಹಾಕಿಕೊಂಡು ಅಭಿಮಾನಿಗಳಿಗೆ ಥ್ಯಾಂಕ್ಯೂ ಎಂದಿದ್ದಾರೆ.
8/ 9
ರಶ್ಮಿಕಾ ಮಂದಣ್ಣ ಟಾಲಿವುಡ್ನಲ್ಲಿ ಬ್ಯುಸಿಯಾಗಿದ್ದರೆ, ಇನ್ನೊಂದು ಕಡೆ ಬಾಲಿವುಡ್ನಲ್ಲಿ ನೆಲೆಯೂರಲು ಯತ್ನಿಸುತ್ತಿದ್ದಾರೆ. ಈಗಾಗಲೇ ರಶ್ಮಿಕಾ ಕೈಯಲ್ಲಿ ಎರಡು ಬಾಲಿವುಡ್ ಸಿನಿಮಾಗಳಿವೆ. ಸಿದ್ದಾರ್ಥ ಮಲ್ಹೋತ್ರಾ ಜೊತೆ ನಟಿಸುತ್ತಿರುವ 'ಮಿಷನ್ ಮಜ್ನು' ಬಿಡುಗಡೆಗೆ ಸಿದ್ದವಾಗಿದೆ.
9/ 9
ಇನ್ನು ಅಮಿತಾಬ್ ಮಗಳಾಗಿ ನಟಿಸುತ್ತಿರುವ 'ಗುಡ್ ಬೈ' ಸಿನಿಮಾ ಕೈಯಲ್ಲಿವೆ. ಹೀಗಾಗಿ ಇನ್ನೂ ಹೆಚ್ಚು ಹಿಂದಿ ಸಿನಿಮಾಗಳಲ್ಲಿ ನಟಿಸಲು ರಶ್ಮಿಕಾ ಮಂದಣ್ಣ ಸಜ್ಜಾಗಿದ್ದಾರಂತೆ.