Rashmika Mandanna: ತಮ್ಮ ಮುದ್ದಾದ ಮಗುವಿನ ಫೋಟೋ ಹಂಚಿಕೊಂಡ ರಶ್ಮಿಕಾ ಮಂದಣ್ಣ..!
ಸಾಮಾಜಿಕ ಜಾಲತಾಣದಲ್ಲಿರುವ ರಶ್ಮಿಕಾ ಮಂದಣ್ಣ ಸಮಾಜಮುಖಿ ಕೆಲಸಗಳಲ್ಲೂ ತೊಡಗಿಕೊಂಡಿದ್ದಾರೆ. ಇಂತಹ ನಟಿ ಈಗ ತಮ್ಮ ಮುದ್ದಾದ ಮಗುವಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಕೋವಿಡ್ನಿಂದಾಗಿ ಎಲ್ಲೆಡೆ ಆತಂಕದ ವಾತವರಣವಿದ್ದು, ಇಂತಹ ಸಮಯದಲ್ಲಿ ಅವರ ಖುಷಿಗೆ ಕಾರಣವಾಗಿದೆಯಂತೆ ಈ ಮಗು. (ಚಿತ್ರಗಳು ಕೃಪೆ: ರಶ್ಮಿಕಾ ಮಂದಣ್ಣ ಇನ್ಸ್ಟಾಗ್ರಾಂ ಖಾತೆ)
ಕೊರೋನಾ ರುದ್ರ ತಾಂಡವದಿಂದಾಗಿ ಎಲ್ಲೆಡೆ ಒಂದು ರೀತಿಯ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮನಸ್ಸಿಗೆ ನೆಮ್ಮದಿಯೇ ಇಲ್ಲದಂತಾಗಿರುವ ಈ ಪರಿಸ್ಥಿತಿಯಲ್ಲಿ ರಶ್ಮಿಕಾಗೆ ಖುಷಿ ನೀಡುವ ಮಗುವೊಂದು ಸಿಕ್ಕಿದೆ.
2/ 11
ಹೌದು, ಹೈದರಾಬಾದಿನಲ್ಲಿ ಒಂಟಿಯಾಗಿರುವ ರಶ್ಮಿಕಾರ ಬದುಕಿಗೆ ಹೊಸ ಅತಿಥಿಯ ಆಗಮನವಾಗಿದೆ.
3/ 11
ಅದೇ ಅವರ ಪುಟ್ಟ ಮಗು ಔರಾ...
4/ 11
ರಶ್ಮಿಕಾ ಔರಾಳನ್ನು ತಮ್ಮ ಮುದ್ದಿನ ಮಗು ಎಂದೇ ಕರೆಯುತ್ತಾರೆ.
5/ 11
ಮಗುವಿನಂತೆ ನೋಡಿಕೊಳ್ಳುವ ಮುದ್ದಿನ ಔರಾಳ ಬಗ್ಗೆ ತಮ್ಮ ಅಭಿಮಾನಿಗಳಿಗೆ ಅಪ್ಡೇಟ್ ಕೊಡುತ್ತಿದ್ದಾರೆ.
6/ 11
ಪ್ರಾಣಿಗಳೆಂದರೆ ಇಷ್ಟ ಪಡುವ ರಶ್ಮಿಕಾ ಅವರ ಮನೆಯಲ್ಲಿ ಅಂದರೆ ಮಡಿಕೇರಿಯಲ್ಲಿರುವ ಮನೆಯಲ್ಲಿ ನಾಯಿಗಳು, ಬೆಕ್ಕು ಸೇರಿದಂತೆ ಹಲವಾರು ಪಕ್ಷಿಗಳಿವೆ.
7/ 11
ಸದ್ಯದ ಪರಿಸ್ಥಿತಿಯಲ್ಲಿ ಎಲ್ಲ ಜಂಜಾಟಗಳ ನಡುವೆ ತನಗೆ ತನ್ನ ಬಂಡಲ್ ಆಫ್ ಜಾಯ್ ಸಿಕ್ಕಿದೆ ಎಂದು ಮುದ್ದಿನ ಔರಾಳನ್ನು ನೆಟ್ಟಿಗರಿಗೆ ಪರಿಚಯಿಸಿದ್ದಾರೆ.
8/ 11
ಜೊತೆಗೆ ಪ್ರೀತಿಯಾಗಲು 3 ಸೆಕೆಂಡ್ ಸಾಕು ಎನ್ನುತ್ತಾರೆ ಆದರೆ ಔರಾ 0.3 ಮಿಲಿ ಸೆಕೆಂಡ್ನಲ್ಲಿ ತನ್ನ ಮನಸ್ಸನ್ನು ಕರಗಿಸಿದ್ದಾಳೆ ಎಂದೂ ಲಿಲ್ಲಿ ಇನ್ಸ್ಟಾ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
9/ 11
ಇನ್ಸ್ಟಾ ಸ್ಟೋರೀಸ್ನಲ್ಲಿ ಔರಾಳ ಒಂದು ಮುದ್ದಾದ ವಿಡಿಯೋ ಹಂಚಿಕೊಂಡಿರುವ ರಶ್ಮಿಕಾ, ತಮ್ಮನ್ನ ತಾವು ಔರಾಳ ಅಮ್ಮನೆಂದು ಕರೆದುಕೊಂಡಿದ್ದಾರೆ.
10/ 11
ಇನ್ನು ರಶ್ಮಿಕಾರ ಈ ಮುದ್ದಾದ ಮಗುವಿನ ಫೋಟೋ ಅಭಿಮಾನಿಗಳಿಗೆ ತುಂಬಾ ಇಷ್ಟವಾಗುತ್ತಿದೆ.
11/ 11
ರಶ್ಮಿಕಾ ತಮ್ಮ ಮುದ್ದಿನ ನಾಯಿ ಮರಿಯನ್ನು ನೆಟಟಿಗರಿಗೆ ಪರಿಚಯಿಸಿದ್ದು ರಕ್ಷಿತ್ ಶೆಟ್ಟಿ ಅವರ ಹುಟ್ಟುಹಬ್ಬದಂದು.