ಅಲ್ಲು ಅರ್ಜುನ್ ಪ್ರಸ್ತುತ ಪುಷ್ಪಾ 2 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸುಕುಮಾರ್ ನಿರ್ದೇಶನದ 'ಪುಷ್ಪ' ಚಿತ್ರದ ಮುಂದುವರಿದ ಭಾಗವಾಗಿ ಈ ಸಿನಿಮಾ ಬರುತ್ತಿದೆ. ಸದ್ಯ ಈ ಚಿತ್ರತಂಡ ರಾಮೋಜಿ ಫಿಲಂ ಸಿಟಿಯಲ್ಲಿ ಸಾಹಸ ದೃಶ್ಯಗಳ ಚಿತ್ರೀಕರಣ ನಡೆಸುತ್ತಿದೆ. ಆದರೆ ಈ ಸಿನಿಮಾದ ರಶ್ಮಿಕಾ ಅವರ ಕೆಲವು ದೃಶ್ಯಗಳು ಲೀಕ್ ಆಗಿವೆ. ಇದಕ್ಕೆ ಸಂಬಂಧಿಸಿದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಪುಷ್ಪ 2 ಚಿತ್ರದ ನಂತರ ಅಲ್ಲು ಅರ್ಜುನ್ ಇನ್ನೂ ಮೂರು ಸಿನಿಮಾ ಮಾಡಲಿದ್ದಾರಂತೆ. ಅಲವೈಕುಂಠಪುರಂನ ತ್ರಿವಿಕ್ರಮ್ ಜೊತೆ ದೊಡ್ಡ ಸಿನಿಮಾ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಜೊತೆಗೆ ಮತ್ತೊಬ್ಬ ಸ್ಟಾರ್ ಹೀರೋ ಕೂಡ ನಟಿಸಲಿದ್ದಾರೆ ಎನ್ನಲಾಗಿದೆ. ಸದ್ಯ ತ್ರಿವಿಕ್ರಮ್ ಅವರು ಮಹೇಶ್ ಬಾಬು ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ಮುಗಿದ ಕೂಡಲೇ ಬನ್ನಿ ಜೊತೆ ಸಿನಿಮಾ ಶುರುವಾಗಲಿದೆಯಂತೆ.
ಈ ಚಿತ್ರದ ಬಗ್ಗೆ ಕುತೂಹಲಕಾರಿ ವದಂತಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪುಷ್ಪ ದಿ ರೂಲ್ ಸಿನಿಮಾದ ಎಲ್ಲಾ ಹಕ್ಕುಗಳಿಗೆ (ಎಲ್ಲಾ ಭಾಷೆಯ ಹಕ್ಕುಗಳು ಹಾಗೂ ಡಿಜಿಟಲ್ ಮತ್ತು ಸ್ಯಾಟಲೈಟ್ ರೈಟ್ಸ್ ಸೇರಿ) ಬೃಹತ್ ಕಂಪನಿಯಿಂದ 900 ಕೋಟಿ ರೂಪಾಯಿ ಆಫರ್ ಬಂದಿದೆ ಎಂಬ ಮಾತು ಇಂಡಸ್ಟ್ರಿ ವಲಯದಲ್ಲಿ ಕೇಳಿ ಬರುತ್ತಿದೆ. ಪುಷ್ಪ ದಿ ರೂಲ್ ಚಿತ್ರ 350 ಕೋಟಿಯಲ್ಲಿ ತಯಾರಾಗಲಿದೆ.