Rashmika Mandanna: ಪುಷ್ಪ 2 ಸಿನಿಮಾದಿಂದ ರಶ್ಮಿಕಾ ಮಂದಣ್ಣಗೆ ಗೇಟ್ ಪಾಸ್? ಈ ಬಗ್ಗೆ ಶ್ರೀವಲ್ಲಿ ಕೊಟ್ರು ಆನ್ಸರ್
ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಚಿತ್ರಕ್ಕಾಗಿ ಅಭಿಮಾನಿಗಳು ಕಾತೂರದಿಂದ ಕಾಯುತ್ತಿದ್ದಾರೆ. ಪುಪ್ಪ 2 ಶೂಟಿಂಗ್ ಕೂಡ ಆರಂಭವಾಗಿದೆ. ಪುಷ್ಪ ಪಾರ್ಟ್ ಒಂದರಲ್ಲಿ ಅಲ್ಲು ಅರ್ಜುನ್ಗೆ ನಾಯಕಿಯಾಗಿ ರಶ್ಮಿಕಾ ಮಿಂಚಿದ್ರು. ಆದ್ರೆ ಪುಷ್ಪಾ 2ಗೆ ಹೀರೋಯಿನ್ ಬದಲಾಗ್ತಾರಾ ಎನ್ನುವ ಮಾತುಗಳು ಕೇಳಿ ಬಂದಿತ್ತು. ಇದೀಗ ರಶ್ಮಿಕಾ ಗಾಸಿಪ್ಗೆ ತೆರೆ ಎಳೆದಿದ್ದಾರೆ.
ಪುಷ್ಪ-2 ಸಿನಿಮಾ ನಿರ್ಮಾಪಕರು ನಟಿ ಸಾಯಿ ಪಲ್ಲವಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನುವ ಸುದ್ದಿ ಹರಡಿತ್ತು. ಹೀಗಾಗಿ ಪುಪ್ಪ 2 ಸಿನಿಮಾದಿಂದ ನಟಿ ರಶ್ಮಿಕಾ ಮಂದಣ್ಣ ಹೊರನಡೆದಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು.
2/ 8
ಪುಷ್ಪ: ದಿ ರೈಸ್ ಚಿತ್ರದ ಯಶಸ್ಸಿನ ಬಳಿಕ ರಶ್ಮಿಕಾ ಪ್ಯಾನ್ ಇಂಡಿಯಾ ನಟಿಯಾಗಿ ಫುಲ್ ಫೇಮಸ್ ಆದ್ರು. ಶ್ರೀವಲ್ಲಿ ಪಾತ್ರದಲ್ಲಿ ಜನರ ಮನ ಗೆದ್ದರು. ಇದೀಗ ಪುಪ್ಪಾ 2 ನಲ್ಲೂ ನಟಿಯಾಗಿ ಅವ್ರೇ ಮಿಂಚಲಿದ್ದಾರೆ.
3/ 8
ಬಾಲಿವುಡ್ಗೆ ಕಾಲಿಟ್ಟಿರುವ ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ರಶ್ಮಿಕಾ ಅಭಿನಯದ 4 ಸಿನಿಮಾಗಳು ಈ ವರ್ಷ ತೆರೆಗೆ ಬರಲು ರೆಡಿಯಾಗಿದೆ.
4/ 8
ಈ ಬಗ್ಗೆ ಸೋಶಿಯಲ್ ಮೀಡಿಯಲ್ಲಿ ಪೋಸ್ಟ್ ಹಾಕುವುದರ ಮೂಲಕ ರಶ್ಮಿಕಾ ಮಂದಣ್ಣ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
5/ 8
ರಶ್ಮಿಕಾ ಮಂದಣ್ಣ ತಮ್ಮ ಸಿನಿಮಾಗಳ ಬಗ್ಗೆ ಅಪ್ಡೇಟ್ ನೀಡಿದ್ದಾರೆ. 4 ಸರ್ಪ್ರೈಸ್ ಗಳ ಮೂಲಕ ಫ್ಯಾನ್ಸ್ ಮುಂದೆ ಬರೋದಾಗಿ ರಶ್ಮಿಕಾ ಹೇಳಿದ್ದಾರೆ.
6/ 8
ಆ 4 ಸರ್ಪ್ರೈಸ್ ಅಂದ್ರೆ ಅವರ ಅಭಿನಯದ ಸಿನಿಮಾಗಳು ಈ ವರ್ಷದ ಆರಂಭದಲ್ಲಿ ತೆರೆಗೆ ಬರ್ತಿರುವ ವಾರಿಸು, ರಿಲೀಸ್ ಸರ್ಜಾಗಿರುವ ಮಿಷನ್ ಮಜ್ನು, ಶೂಟಿಂಗ್ ಹಂತದಲ್ಲಿರುವ ಪುಪ್ಪ 2 ಹಾಗೂ ಅನಿಮಾಲ್ ಸಿನಿಮಾಗಳಾಗಿವೆ.
7/ 8
4 ಸಿನಿಮಾಗಳ ಮೂಲಕ ಈ ವರ್ಷ ನಟಿ ರಶ್ಮಿಕಾ ಮಂದಣ್ಣ ಅಭಿಮಾನಿಗಳನ್ನು ರಂಜಿಸಲು ರೆಡಿಯಾಗಿದ್ದಾರೆ.
8/ 8
ಪುಷ್ಪ ಪಾರ್ಟ್ 2ರಲ್ಲಿ ರಶ್ಮಿಕಾ ಮಂದಣ್ಣ ಜೊತೆಗೆ ಸಾಯಿ ಪಲ್ಲವಿ ಕೂಡ ಅಭಿನಯಿಸಲಿದ್ದಾರೆ ಎಂದು ಚಿತ್ರತಂಡ ಸ್ಪಷ್ಟನೆ ನೀಡಿದೆ.