Rashmika Mandanna: ಈ ವರ್ಷ 50ಕ್ಕೂ ಹೆಚ್ಚು ಸಿನಿಮಾ ರಿಜೆಕ್ಟ್ ಮಾಡಿದ್ದಾರಂತೆ ರಶ್ಮಿಕಾ: ಸೂಪರ್ ಸ್ಟಾರ್ ಸಿನಿಮಾಗಳಿಗೂ NO ಎಂದ ನಟಿ!
Rashmika Mandanna: ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಟಾಲಿವುಡ್, ಬಾಲಿವುಡ್ಗಳಲ್ಲಿ ಸಾಲು ಸಾಲು ಸಿನಿಮಾ ಮಾಡುತ್ತಾ ಫುಲ್ ಬ್ಯುಸಿ ಆಗಿದ್ದಾರೆ. ಟಾಪ್ ಹೀರೋಗಳ ಜೊತೆ ಅಭಿನಯಿಸುತ್ತಿರುವ ರಶ್ಮಿಕಾ ರಿಜೆಕ್ಟ್ ಮಾಡಿದ ಚಿತ್ರಗಳ ಲಿಸ್ಟ್ ಇಲ್ಲಿದೆ.
ಚಲೋ ಚಿತ್ರದ ಮೂಲಕ ಪದಾರ್ಪಣೆ ಮಾಡಿದ ರಶ್ಮಿಕಾ ಟಾಲಿವುಡ್ನಲ್ಲಿ ಹಲವು ಸಿನಿಮಾ ಮಾಡುತ್ತಾ ಮಿಂಚಿದ್ದಾರೆ. ಈ ವೇಳೆ ರಶ್ಮಿಕಾ ಅರಸಿ ಬಂದ ಅನೇಕ ಕಥೆಗಳನ್ನು ಅವರು ರಿಜೆಕ್ಟ್ ಮಾಡಿದ್ದಾರೆ. ಇದರಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಚಿತ್ರ ಕೂಡ ಒಂದಾಗಿದೆ. ಮೆಗಾಸ್ಟಾರ್ ಸಿನಿಮಾವನ್ನು ರಶ್ಮಿಕಾ ರಿಜೆಕ್ಟ್ ಮಾಡಿದ್ದಾರೆ.
2/ 10
ಆಚಾರ್ಯ ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್ ಗಳನ್ನು ರಶ್ಮಿಕಾ ತಿರಸ್ಕರಿಸಿದ್ದಾರೆ. ದೆ ಈ ವರ್ಷ ತೆರೆಕಂಡ ಆಚಾರ್ಯ ಚಿತ್ರದಲ್ಲಿ ಪೂಜಾ ಹೆಗ್ಡೆ ಪಾತ್ರಕ್ಕಾಗಿ ರಶ್ಮಿಕಾ ಮಂದಣ್ಣ ಮೊದಲೇ ಕೇಳಿದ್ದರಂತೆ. ಆದ್ರೆ ರಶ್ಮಿಕಾ ಆಫರ್ ತಿರಸ್ಕರಿಸಿದ್ದಾರೆ.
3/ 10
ಸದ್ಯ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಸಾಲು ಸಾಲು ಸಿನಿಮಾಗಳಲ್ಲಿ ರಶ್ಮಿಕಾ ಫುಲ್ ಬ್ಯುಸಿ ಆಗಿದ್ದಾರೆ.
4/ 10
ಚಿರಂಜೀವಿ ಹಾಗೂ ರಾಮ್ ಚರಣ್ ಚಿತ್ರ ಆಚಾರ್ಯ ಚಿತ್ರದಲ್ಲಿ ನಾಯಕಿಯಾಗಿ ನಟಿಸಲು ರಶ್ಮಿಕಾ ಮಂದಣ್ಣ ಅವರನ್ನೇ ಮೊದಲು ಕೇಳಿದ್ರು. ಡೇಟ್ಸ್ ಹೊಂದಾಣಿಕೆ ಆಗಲಿಲ್ಲ ಎಂಬ ಕಾರಣಕ್ಕೆ ರಶ್ಮಿಕಾ ರಿಜೆಕ್ಟ್ ಮಾಡಿದ್ರು ಎನ್ನುವ ಮಾತು ಕೇಳಿಬಂದಿದೆ.
5/ 10
ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಜೊತೆಗಿನ 'ಗೀತ ಗೋವಿಂದಂ' ಚಿತ್ರದ ಮೂಲಕ ಸ್ಟಾರ್ ಹೀರೋಯಿನ್ ಆದರು. ಬಳಿಕ ಮಹೇಶ್ ಬಾಬು ಅವರ ಸರಿಲೇರು ನೀಕೆವ್ವರು ಮತ್ತು ಅಲ್ಲು ಅರ್ಜುನ್ ಜೊತೆ ಪುಷ್ಪಾ ಚಿತ್ರದಲ್ಲಿ ಅಭಿನಯಿಸಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.
6/ 10
ರಶ್ಮಿಕಾ ಕಡಿಮೆ ಸಮಯದಲ್ಲಿ ಸ್ಟಾರ್ ಹೀರೋಯಿನ್ ಆಗಲು ರಶ್ಮಿಕಾ ಆಯ್ಕೆ ಮಾಡಿಕೊಂಡ ಕಥೆಗಳೂ ಪ್ರಮುಖ ಪಾತ್ರ ವಹಿಸಿವೆ. ಈ ಐದು ವರ್ಷಗಳಲ್ಲಿ ಅವರು 50 ಕ್ಕೂ ಹೆಚ್ಚು ಸ್ಕ್ರಿಪ್ಟ್ಗಳನ್ನು ತಿರಸ್ಕರಿಸಿದರು. ಆಚಾರ್ಯ ಜೊತೆ 10ಕ್ಕೂ ಹೆಚ್ಚು ಸೂಪರ್ ಹಿಟ್ ಸಿನಿಮಾಗಳಿವೆ.
7/ 10
ಕನ್ನಡದ ಹಿಟ್ ಕಿರಿಕ್ ಪಾರ್ಟಿ ಹಿಂದಿಯಲ್ಲಿ ಕಾರ್ತೀನ್ ಆರ್ಯನ್ ಜೊತೆ ರಿಮೇಕ್ ಆಗುತ್ತಿದೆ. ಚಿತ್ರದಲ್ಲಿ ನಟಿಸಲು ರಶ್ಮಿಕಾ ನೋ ಎಂದಿದ್ದಾರೆ ಬಳಿಕ ಕೃತಿ ಸನನ್ ಆಯ್ಕೆಯಾಗಿದ್ದಾರೆ.
8/ 10
ತೆಲುಗಿನ ಹಿಟ್ ಚಿತ್ರ ಜೆರ್ಸಿಯನ್ನು ಹಿಂದಿಯಲ್ಲಿ ಶಾಹಿದ್ ಕಪೂರ್ ಜೊತೆ ಅದೇ ಶೀರ್ಷಿಕೆಯೊಂದಿಗೆ ರಿಮೇಕ್ ಮಾಡಿರುವುದು ಗೊತ್ತೇ ಇದೆ. ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಲು ರಶ್ಮಿಕಾ ಮಂದಣ್ಣ ನೋ ಎಂದಿದ್ದಾರೆ. ಈ ಸಿನಿಮಾದಲ್ಲಿ ಸಾಕಷ್ಟು ಕಿಸ್ಸಿಂಗ್ ಸೀನ್ ಎಂದು ರಶ್ಮಿಕಾ ತಿರಸ್ಕರಿಸಿದ್ದಾರೆ.
9/ 10
ತಮಿಳಿನ ಹೀರೋ ವಿಜಯ್ ಮತ್ತು ಲೋಕೇಶ್ ಕನಕರಾಜ್ ಕಾಂಬಿನೇಷನ್ ಸಿನಿಮಾ 'ಮಾಸ್ಟರ್'. ಈ ಸಿನಿಮಾದಲ್ಲಿ ನಾಯಕಿಯ ಪಾತ್ರ ಮೊದಲು ಬಂದಿದ್ದು ರಶ್ಮಿಕಾಗೆ. ಅವರು ಪಾತ್ರ ತುಂಬಾ ಚಿಕ್ಕದಾಗಿದೆ ಎಂದು ಈ ಸಿನಿಮಾ ಮಾಡಲು ಓಕೆ ಹೇಳಲಿಲ್ಲ. ಆ ನಂತರ ಈ ಸಿನಿಮಾಗೆ ಮಾಳವಿಕಾ ಮೋಹನನ್ ನಾಯಕಿಯಾದ್ರು.
10/ 10
ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ವಿಜಯ್ ಅವರ ಇತ್ತೀಚಿನ ಚಿತ್ರ 'ಮೃಗ'ದಲ್ಲಿ ನಾಯಕಿ ಪಾತ್ರಕ್ಕಾಗಿ ರಶ್ಮಿಕಾ ಕೇಳಿದ್ದಾರೆ. ಆದ್ರೆ ಕಥೆ ಇಷ್ಟವಾಗದೆ ಬೇರೆ ಕಾರಣಗಳಿಂದ ರಶ್ಮಿಕಾ ಈ ಸಿನಿಮಾ ಮಾಡಲು ನಿರಾಕರಿಸಿದ್ದಾರೆ. ಆ ಪಾತ್ರಕ್ಕೆ ಪೂಜಾ ಹೆಗಡೆಯನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು..