ತೆಲುಗಿನ ಹಿಟ್ ಚಿತ್ರ ಜೆರ್ಸಿಯನ್ನು ಹಿಂದಿಯಲ್ಲಿ ಶಾಹಿದ್ ಕಪೂರ್ ಜೊತೆ ಅದೇ ಟೈಟಲ್ನಲ್ಲಿ ರಿಮೇಕ್ ಮಾಡಲಾಗಿದೆ. ಈ ಚಿತ್ರದಲ್ಲಿ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಅವರನ್ನು ಮೊದಲು ಸಂಪರ್ಕಿಸಲಾಯಿತು. ಆದರೆ ಈ ಸಿನಿಮಾದಲ್ಲಿ ಸಾಕಷ್ಟು ಚುಂಬನದ ದೃಶ್ಯಗಳಿವೆ ಎಂದು ರಶ್ಮಿಕಾ ಆಫರ್ ತಿರಸ್ಕರಿಸಿದ್ದಾರೆ. ನಂತರ ಈ ಪಾತ್ರಕ್ಕೆ ಮೃಣಾಲ್ ಸೇನ್ ಅವರನ್ನು ಆಯ್ಕೆ ಮಾಡಲಾಯಿತು.