Rashmika Mandanna: ರಷ್ಯಾದಲ್ಲಿ ಪುಷ್ಪಾ ಪ್ರಮೋಷನ್ನಲ್ಲಿ ಬ್ಯುಸಿಯಾಗಿದ್ದಾರೆ ಕನ್ನಡದ ಚೆಲುವೆ
ಕೂರ್ಗ್ ಲೇಡಿ ರಶ್ಮಿಕಾ ಮಂದಣ್ಣ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ. ಕಳೆದ ಕೆಲವು ವರ್ಷಗಳಿಂದ ತನ್ನ ನಟನೆ ಮತ್ತು ಸೌಂದರ್ಯದಿಂದ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ನಟಿ ಅಭಿನಯಿಸಿದ ಪುಷ್ಪ ಚಿತ್ರ ಡಿಸೆಂಬರ್ 8 ರಂದು ರಷ್ಯಾದಲ್ಲಿ ಬಿಡುಗಡೆಯಾಗಲಿದೆ. ಪ್ರಚಾರದ ಭಾಗವಾಗಿ ತಂಡವು ಮಾಸ್ಕೋಗೆ ತೆರಳಿತು. ಈಗ ಆ ಚಿತ್ರಗಳು ವೈರಲ್ ಆಗುತ್ತಿವೆ.
ರಶ್ಮಿಕಾ ಇತ್ತೀಚೆಗೆ ತೆಲುಗಿನಲ್ಲಿ ಸೀತಾ ರಾಮ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರ ಉತ್ತಮ ಯಶಸ್ಸು ಕಂಡಿದೆ. ಈಕೆ ನಟಿಸಿದ ಮತ್ತೊಂದು ಸಿನಿಮಾ ಗುಡ್ ಬೈ ಇತ್ತೀಚೆಗಷ್ಟೇ ಬಿಡುಗಡೆಯಾಯಿತು.
2/ 7
ರಶ್ಮಿಕಾ ಗುಡ್ ಬೈ ಜೊತೆಗೆ ಹಿಂದಿಯಲ್ಲಿ ಮಿಷನ್ ಮಜ್ನು ಎಂಬ ಸ್ಪೈ ಥ್ರಿಲ್ಲರ್ ಮಾಡುತ್ತಿದ್ದಾರೆ. ಹಿಂದಿಯ ಯಂಗ್ ಹೀರೋ ಸಿದ್ಧಾರ್ಥ್ ಮಲ್ಹೋತ್ರಾ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
3/ 7
ಆದರೆ ಮಾಹಿತಿಯ ಪ್ರಕಾರ, ಮಿಷನ್ ಮಜ್ನು ನೇರವಾಗಿ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮ್ ಆಗಲಿದೆಯಂತೆ. ಚಿತ್ರ ಜನವರಿ 18 ರಿಂದ ಸ್ಟ್ರೀಮ್ ಆಗಲಿದೆ. ಈ ಚಿತ್ರವನ್ನು ಶಾಂತನು ಬಾಗ್ಚಿ ನಿರ್ದೇಶಿಸಿದ್ದಾರೆ.
4/ 7
ನಟಿ ಸದ್ಯ ರಷ್ಯಾದಲ್ಲಿ ಪುಷ್ಪಾ ಬಿಡುಗಡೆಯಾಗುವ ಹಿನ್ನೆಲೆಯಲ್ಲಿ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಅವರ ಫೋಟೋಸ್ ವೈರಲ್ ಆಗಿದೆ.
5/ 7
ಈಗಾಗಲೇ ತ್ರಿಬಲ್ ಆರ್ ಸಿನಿಮಾ ಜಪಾನ್ನಲ್ಲಿ ಬಿಡುಗಡೆಯಾಗಿ ಸಖತ್ ಹಿಟ್ ಆಗಿತ್ತು. ಈಗ ಪುಷ್ಪಾ ಹವಾ ಹೇಗಿರಲಿದೆ ಎಂದು ಕಾದು ನೋಡಬೇಕು.
6/ 7
ಕನ್ನಡದ ಚೆಲುವೆ ಈಗ ತೆಲುಗು ಹಾಗೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತನ್ನ ಶಕ್ತಿ ತೋರಿಸುತ್ತಿದ್ದಾರೆ. ಇದಲ್ಲದೆ, 2020 ರಲ್ಲಿ, ಅವರು ನ್ಯಾಷನಲ್ ಕ್ರಷ್ ಆಗಿ ಆಯ್ಕೆಯಾದರು. ಸುಕುಮಾರ್ ನಿರ್ದೇಶನದ 'ಪುಷ್ಪ' ಸಿನಿಮಾದಲ್ಲಿ ಶ್ರೀವಲ್ಲಿಯಾಗಿ ಹಿಟ್ ಆದರು.
7/ 7
ರಶ್ಮಿಕಾ ಸದ್ಯ ತಮಿಳು ಹೀರೋ ವಿಜಯ್ ಜೊತೆ 'ವಾರಿಸು' ಚಿತ್ರದಲ್ಲಿ ನಟಿಸುತ್ತಿರುವುದು ಈಗಾಗಲೇ ಗೊತ್ತೇ ಇದೆ. ವಂಶಿ ಪೈಡಿಪಲ್ಲಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ