ಇನ್ನು ಕನ್ನಡದ ಸುಂದರಿ ಗೀತಾ ಗೋವಿಂದ್ ಮೂಲಕ ಟಾಲಿವುಡ್ನಲ್ಲಿ ಹೆಸರು ಗಳಿಸಿದ ರಶ್ಮಿಕಾ, ಆ ಚಿತ್ರ ಸೂಪರ್ ಹಿಟ್ ಆಗುತ್ತಿದ್ದಂತೆ, ಮತ್ತೊಮ್ಮೆ ತೆಲುಗಿನಲ್ಲಿ ವಿಜಯ್ ಜೊತೆ ‘ಡಿಯರ್ ಕಾಮ್ರೇಡ್’ ಸಿನಿಮಾದಲ್ಲಿ ವಿಜಯ್ ಜೊತೆಯಾಗಿ ಮಿಂಚಿದ್ದಾರೆ. ನಂತರ ರಶ್ಮಿಕಾ, ಮಹೇಶ್ ಬಾಬು, ಅನಿಲ್ ರವಿಪುಡಿ ಅಭಿನಯದ 'ಸರಿಲೇರು ನೀಕೆವ್ವರು' ಸಿನಿಮಾ ಸೇರಿದಂತೆ ಸಾಲು ಸಾಲು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ರಶ್ಮಿಕಾ ಮಂದಣ್ಣ ಅವರು ಏಪ್ರಿಲ್ 5, 1996 ರಂದು ಕರ್ನಾಟಕದ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಜನಿಸಿದರು. ರಶ್ಮಿಕಾ ಓದಿದ್ದು ಕೂರ್ಗ್ ಪಬ್ಲಿಕ್ ಸ್ಕೂಲ್ ನಲ್ಲಿ. ರಶ್ಮಿಕಾ ರಾಮಾಯಣ ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ ಮತ್ತು ಕಾಮರ್ಸ್ನಿಂದ ಮನೋವಿಜ್ಞಾನ, ಪತ್ರಿಕೋದ್ಯಮ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2014 ರ ಬೆಂಗಳೂರು ಟೈಮ್ಸ್ 25 ಮೋಸ್ಟ್ ಡಿಸೈರಬಲ್ ವುಮನ್ ಪಟ್ಟಿಗೆ ರಶ್ಮಿಕಾ ಮಂದಣ್ಣ ಶಾರ್ಟ್ಲಿಸ್ಟ್ ಆಗಿದ್ದವರು. ಮಾಡೆಲಿಂಗ್ ಮೂಲಕ ಚಿತ್ರದಲ್ಲಿ ಅವಕಾಶಗಿಟ್ಟಿಸಿ ಸ್ಟಾರ್ ನಟಿ ಎನಿಸಿಕೊಂಡವರು ಇವರು.