Rashmika-Vijay Deverakonda: ಮತ್ತೆ ತೆರೆ ಮೇಲೆ ಗೀತಾ-ಗೋವಿಂದಂ ಜೋಡಿ! ವಿಜಯ್ ದೇವರಕೊಂಡ ಜೊತೆ ನಟಿಸಲು ರಶ್ಮಿಕಾ ಬಿಗ್ ಪ್ಲಾನ್!
ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಡೇಟಿಂಗ್ ವಿಚಾರದಲ್ಲಿ ಭಾರೀ ಸುದ್ದಿಯಾಗಿದ್ದಾರೆ. ರಶ್ಮಿಕಾ ಬಾಲಿವುಡ್, ಟಾಲಿವುಡ್, ಕಾಲಿವುಡ್ ಸಿನಿಮಾಗಳನ್ನು ಸಖತ್ ಬ್ಯುಸಿ ಆಗಿದ್ದಾರೆ. ಇದೀಗ ವಿಜಯ್ ದೇವರಕೊಂಡ ಜೊತೆ ಮತ್ತೆ ಸಿನಿಮಾ ಮಾಡುವ ಪ್ಲಾನ್ ನಲ್ಲಿದ್ದಾರೆ.
ಹೊಸ ವರ್ಷದ ಆರಂಭದಲ್ಲೇ ರಶ್ಮಿಕಾ ಮಂದಣ್ಣ-ವಿಜಯ್ ಡೇಟಿಂಗ್ ವಿಚಾರಕ್ಕೆ ಭಾರೀ ಸುದ್ದಿಯಾಗಿದ್ದಾರೆ. ಇಬ್ಬರು ಒಟ್ಟಿಗೆ ಒಂದೇ ವೆಕೇಷನ್ ಗೆ ತೆರಳಿದ್ದಾರೆ ಎಂದು ಹೇಳ್ತಿರೋ ಕೆಲ ಫೋಟೋಗಳು ಕೂಡ ವೈರಲ್ ಆಗಿದೆ.
2/ 8
ಈ ನಡುವೆ ಸಂದರ್ಶನವೊಂದರಲ್ಲಿ ಮಾತಾಡಿದ ನಟಿ ರಶ್ಮಿಕಾ ಮಂದಣ್ಣ ಮತ್ತೆ ನಟ ವಿಜಯ್ ದೇವರಕೊಂಡ ಜೊತೆ ಸಿನಿಮಾ ಮಾಡುವ ಪ್ಲಾನ್ ಬಗ್ಗೆ ಮಾತಾಡಿದ್ದಾರೆ.
3/ 8
ಲೈಗರ್ ಸಿನಿಮಾ ಸೋಲಿನ ಬಳಿಕ ನಟಿ ಸಮಂತಾ ಜೊತೆಗಿನ ಖುಷಿ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿ ಆಗಿರುವ ವಿಜಯ್ ದೇವರಕೊಂಡ, ಮತ್ತೆ ರಶ್ಮಿಕಾಗೆ ಜೋಡಿಯಾಗಿ ತೆರೆ ಮೇಲೆ ಮೋಡಿ ಮಾಡ್ತಾರಾ ಎನ್ನುವ ಪ್ರಶ್ನೆ ಮೂಡಿದೆ.
4/ 8
ಗುಲ್ಟೆ ವೆಬ್ ಸೈಟ್ಗೆ ನೀಡಿದ ಸಂದರ್ಶನದಲ್ಲಿ ಮಾತಾಡಿದ ರಶ್ಮಿಕಾ ಮಂದಣ್ಣ, ನಟ ವಿಜಯ್ ದೇವರಕೊಂಡ ಜೊತೆ ನಟಿಸಲು ಉತ್ತಮ ಕಥೆಗಾಗಿ ಕಾಯುತ್ತಿರೋದಾಗಿ ಹೇಳಿದ್ದಾರೆ.
5/ 8
ಸದ್ಯಕ್ಕೆ ನಾವೆಬ್ಬರೂ ಒಟ್ಟಿಗೆ ಯಾವುದೇ ಪ್ರಾಜೆಕ್ಟ್ ಮಾಡ್ತಿಲ್ಲ ಎಂದು ರಶ್ಮಿಕಾ ಮಂದಣ್ಣ ಸ್ಪಷ್ಟನೆ ನೀಡಿದ್ದಾರೆ.
6/ 8
ಚಲೋ ಸಿನಿಮಾ ಮೂಲಕ ಟಾಲಿವುಡ್ ಪ್ರವೇಶಿಸಿದ ರಶ್ಮಿಕಾ ಮಂದಣ್ಣ ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಗೀತಾ ಗೋವಿಂದಂ ಸಿನಿಮಾದಲ್ಲಿ ನಟ ವಿಜಯ್ ದೇವರಕೊಂಡ (Vijay Deverakonda), ರಶ್ಮಿಕಾ ಜೋಡಿ ಟಾಲಿವುಡ್ ಜನರನ್ನು ಮೋಡಿ ಮಾಡಿತ್ತು.
7/ 8
ಗೀತಾ ಗೋವಿಂದಂ ಸಿನಿಮಾ ಹಿಟ್ ಆದ ಬಳಿಕ ಮತ್ತೆ ವಿಜಯ್ ದೇವರಕೊಂಡ ಜೊತೆ ಡಿಯರ್ ಕಾಮ್ರೆಡ್ ಸಿನಿಮಾ ಮಾಡಿದ್ರು. ಇಬ್ಬರ ಜೋಡಿಗೆ ಭಾರೀ ಮೆಚ್ಚುಗೆ ಕೂಡ ವ್ಯಕ್ತವಾಗಿದೆ.
8/ 8
ಅಲ್ಲು ಅರ್ಜುನ್ ಜೊತೆ ಶ್ರೀವಲ್ಲಿಯಾಗಿ ಪುಪ್ಪ ಸಿನಿಮಾದಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ ಲೆವೆಲ್ ಬದಲಾಗಿ ಹೋಗಿದೆ. ಪುಪ್ಪ ಸಿನಿಮಾ ಸೂಪರ್ ಹಿಟ್ ಆದ ಬಳಿಕ ರಶ್ಮಿಕಾ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು, ಬಾಲಿವುಡ್ ನಲ್ಲಿ ಸಾಲು ಸಾಲು ಸಿನಿಮಾ ಮಾಡ್ತಿದ್ದಾರೆ.