ನ್ಯಾಷನಲ್ ಕ್ರಶ್, ಕಿರಿಕ್ ಬೆಡಗಿ, ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಬಹುಭಾಷಾ ನಟಿಯಾಗಿ ಬೆಳೆಯುತ್ತಿರುವ ರಶ್ಮಿಕಾ ಮಂದಣ್ಣಗೆ ಭಾರೀ ಡಿಮ್ಯಾಂಡ್. ಸ್ಯಾಂಡಲ್ವುಡ್ ಮಾತ್ರವಲ್ಲದೇ, ಟಾಲಿವುಡ್ ಮತ್ತು ಹಾಲಿವುಡ್ನಲ್ಲೂ ಮೋಡಿ ಮಾಡುತ್ತಿದ್ದಾರೆ ರಶ್ಮಿಕಾ. ಹೀಗಾಗಿ ಇವರು ದಕ್ಷಿಣ ಭಾರತ ಚಿತ್ರರಂಗ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗದಲ್ಲಿ ಜನಪ್ರಿಯ ನಾಯಕಿಯಾಗಿದ್ದಾರೆ.
ಡಿಯರ್ ಕಾಮ್ರೇಡ್ ತಾರೆ ರಶ್ಮಿಕಾ ಮಂದಣ್ಣ ಸದಾ ಒಂದಲ್ಲೊಂದು ವಿಷಯಕ್ಕೆ ಟ್ರೋಲಿಗರಿಗೆ ಆಹಾರವಾಗುತ್ತಲೇ ಇರುತ್ತಾರೆ. ತೆಲುಗಿನ ಪುಷ್ಪ ಸಿನಿಮಾ ಪೋಸ್ಟರ್ ರಿಲೀಸ್ ವೇಳೆಯೂ ರಶ್ಮಿಕಾ ಸಾಕಷ್ಟು ಟ್ರೋಲ್ ಆಗಿದ್ದರು. ರಶ್ಮಿಕಾ ನೀಡಿದ್ದ ಪೋಸ್ಗೆ ನೆಟ್ಟಿಗರು ಕಾಲೆಳೆದಿದ್ದರು. ಏನೇ ಆದರೂ ಸ್ವಂತ ಪರಿಶ್ರಮ ಮತ್ತು ಪ್ರತಿಭೆಯಿಂದಾಗಿ ರಶ್ಮಿಕಾ ಚಿತ್ರರಂಗದಲ್ಲಿ ಬೆಳೆಯುತ್ತಿದ್ದಾರೆ.