Rashmika Mandanna: 8 ವರ್ಷದ ತಂಗಿಯ ಮಾನಸಿಕ ಆರೋಗ್ಯದ ಬಗ್ಗೆ ರಶ್ಮಿಕಾ ಕಳವಳ!
ಟ್ರೋಲ್ ಬಗ್ಗೆ ಮಾತನಾಡಿದ ನಟಿ ರಶ್ಮಿಕಾ ಮಂದಣ್ಣ ಟ್ರೋಲ್ ತಮ್ಮ ಕುಟುಂಬವನ್ನು ಹೇಗೆ ಬಾಧಿಸುತ್ತಿದೆ ಎನ್ನುವುದನ್ನು ರಿವೀಲ್ ಮಾಡಿದ್ದಾರೆ. ತಂಗಿಯ ಆರೋಗ್ಯದ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ.
ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಟ್ರೋಲಿಂಗ್ ಹಾಗೂ ಇತರ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಆ ಸಂದರ್ಭ ಅವರು ತಮ್ಮ ತಂಗಿ ಶಿಮನ್ ಬಗ್ಗೆಯೂ ಮಾತನಾಡಿದ್ದಾರೆ.
2/ 7
ಟ್ರೋಲ್ ಮಾಡುವುದು, ಕಾಲೆಳೆಯುವ ಬಗ್ಗೆ ಮಾತನಾಡಿದ ನಟಿ ಅದು ಹೇಗೆ ತಮ್ಮ ಕುಟುಂಬದ ಮೇಲೆ ಪರಿಣಾಮ ಬೀರುತ್ತಿದೆ ಎನ್ನುವುದನ್ನು ಕೂಡಾ ರಿವೀಲ್ ಮಾಡಿದ್ದಾರೆ. ನಟಿ ತಂಗಿ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ.
3/ 7
ಟ್ರೋಲಿಂಗ್, ಕಾಲೆಳೆಯುವುದು ಎಲ್ಲವೂ ಓಕೆ. ನಾನು ಆ ಬಗ್ಗೆ ಸುಮ್ಮನಾಗಿದ್ದೆ. ನಾನು ಸುಮ್ಮನಿರುವುದಕ್ಕೆ ಕಾರಣ ನಾನು ಜನರನ್ನು ಗೌರವಿಸುತ್ತಿರುವುದು ಎಂದಿದ್ದಾರೆ.
4/ 7
ಅದು ನನ್ನ ಮೇಲೆ ಪರಿಣಾಮ ಬೀರುತ್ತಿತ್ತು. ಅದು ನನಗೆ ತೊಂದರೆ ಇಲ್ಲ. ಆದರೆ ಈಗ ಅದು ನನ್ನ ಕುಟುಂಬದ ಮೇಲೆ ಪರಿಣಾಮ ಬೀರುತ್ತಿದೆ. ನನ್ನ ಕುಟುಂಬ, ನನ್ನ ಸಹೋದರಿ ಮೇಲೆ ಇದೆಲ್ಲಾ ಪರಿಣಾಮ ಬೀರುತ್ತಿದೆ. ಅದನ್ನು ನಾನು ಒಪ್ಪಿಕೊಳ್ಳುವುದಿಲ್ಲ ಎಂದಿದ್ದಾರೆ.
5/ 7
ನಾನು ನನ್ನ ತಂಗಿಯ ಮಾನಸಿಕ ಆರೋಗ್ಯವನ್ನು ನಾನು ಕಾಪಾಡಬೇಕು. ಅವಳು ಯಾವಾಗ ಕಾಲ್ ಮಾಡ್ತಾಳೋ ಆಗ ಅದು ನನ್ನ ಮೇಲೆ ಪರಿಣಾಮ ಬೀರುತ್ತದೆ. ಅವಳಿನ್ನೂ ಮಗು, 8 ವರ್ಷ ಅಷ್ಟೇ ಆಗಿದೆ. ಅವಳು ಇದೆಲ್ಲವನ್ನು ಅನುಭವಿಸುವ ಅಗತ್ಯವಿಲ್ಲ ಎಂದಿದ್ದಾರೆ.
6/ 7
ರಶ್ಮಿಕಾ ಅವರ ಮೊದಲ ಸಿನಿಮಾ ಕಿರಿಕ್ ಪಾರ್ಟಿ ಹಿಟ್ ಆದಾಗ ಅವರ ತಂಗಿ ಇನ್ನೂ ತುಂಬಾ ಚಿಕ್ಕವಳಾಗಿದ್ದಳು. ಅವಳಿನ್ನೂ ಎತ್ತಿಕೊಂಡು ಓಡಾಡುವಷ್ಟು ಪುಟ್ಟ ಮಗುವಾಗಿದ್ದಳು.
7/ 7
ಈಗ ರಶ್ಮಿಕಾ ತಂಗಿಗೆ 8 ವರ್ಷ ವಯಸ್ಸಾಗಿದ್ದು ತಂದೆ ತಾಯಿಯ ಜೊತೆಗಿದ್ದಾಳೆ. ರಶ್ಮಿಕಾ ರಜೆ ಇದ್ದಾಗ ಮನೆಮಂದಿಯೊಂದಿಗೆ ಸಮಯ ಕಳೆಯುತ್ತಾರೆ.