Rashmika Mandanna: ಒಂದು ಸಾಂಗ್ಗೆ 5 ಕೋಟಿ ಬೇಡಿಕೆ ಇಟ್ಟ ರಶ್ಮಿಕಾ!
ಸೌತ್ ನಟಿ ರಶ್ಮಿಕಾ ಮಂದಣ್ಣ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಸೌತ್ ಟು ನಾರ್ತ್ ಎಲ್ಲೆಡೆ ಅಭಿಮಾನಿಗಳನ್ನು ಹೊಂದಿರೋ ನಟಿ ಕುರಿತು ಈಗ ಹೊಸ ಸುದ್ದಿ ಕೇಳಿ ಬಂದಿದೆ. ಸಿನಿಮಾವೊಂದರ ಸಾಂಗ್ ಮಾಡೋಕೆ 5 ಕೋಟಿ ಕೇಳಿದ್ದಾರಂತೆ ಕಿರಿಕ್ ಚೆಲುವೆ.
ನಟಿ ರಶ್ಮಿಕಾ ಮಂದಣ್ಣ ಅವರಿಗೆ ಅವಕಾಶಗಳಿಗೆ ಕೊರತೆ ಇಲ್ಲ. ಪುಷ್ಪಾ ನಟಿಗೆ ಕನ್ನಡದಲ್ಲಿ ಬೇಡಿಕೆ ಇಲ್ಲದಿದ್ದರೂ ಬೇರೆ ಭಾಷೆಗಳಲ್ಲಿ ಡಿಮ್ಯಾಂಡ್ಗೆ ಕೊರತೆ ಇಲ್ಲ.
2/ 8
ಪುಷ್ಪಾ 2, ವಾರಿಸು ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿರುವ ರಶ್ಮಿಕಾ ಅವರು ಸದ್ಯ ಬಾಲಿವುಡ್ನಲ್ಲಿಯೂ ಆಫರ್ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಆದರೆ ಅವರ ಗುಡ್ ಬೈ ಸಿನಿಮಾ ಫ್ಲಾಪ್ ಆಗಿದೆ.
3/ 8
ಈ ಮಧ್ಯೆ ರಶ್ಮಿಕಾ ಅವರು ಸ್ಪೆಷಲ್ ಸಾಂಗ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಟಾಪ್ ನಟಿಯರು ಐಟಂ ಸಾಂಗ್ ಮಾಡುವುದು ಟ್ರೆಂಡ್ ಆಗಿ ಬದಲಾಗಿದೆ.
4/ 8
ಹೀಗಿರುವಾಗ ನಟಿ ರಶ್ಮಿಕಾ ಅವರು ಐಟಂ ಸಾಂಗ್ನಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷವೇನಲ್ಲ. ಆದರೆ ಈ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ.
5/ 8
ಇದೀಗ ರಶ್ಮಿಕಾ ಮಂದಣ್ಣ ಅವರು ಮಹೇಶ್ ಹಾಗೂ ತ್ರಿವಿಕ್ರಮ್ ಅವರ ಸಿನಿಮಾದಲ್ಲಿ ಸಾಂಗ್ ಮಾಡೋದಕ್ಕೆ 5 ಕೋಟಿ ಸಂಭಾವನೆ ಕೇಳಿದ್ದಾರೆ ಎನ್ನಲಾಗಿದೆ.
6/ 8
ನಟಿ ಪುಷ್ಪಾ ಸಿನಿಮಾ ಸಕ್ಸಸ್ ನಂತರ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ಅದೇ ರೀತಿ ಆ ಸಿನಿಮಾದಲ್ಲಿ ನಟಿಸಿದ್ದವರ ಸಂಭಾವನೆ ಹೆಚ್ಚಾಗಿದೆ.
7/ 8
ಆದರೆ ದಿಢೀರ್ ಆಗಿ ನಟಿ ಸಾಂಗ್ ಒಂದಕ್ಕೆ 5 ಕೋಟಿ ಕೇಳಿರೋದು ಸ್ವಲ್ಪ ಶಾಕಿಂಗ್ ಆಗಿದೆ ಎನ್ನುವ ವಿಚಾರ ಕೇಳಿಬಂದಿದೆ. ಈ ಬಗ್ಗೆ ಇನ್ನಷ್ಟೇ ಸ್ಪಷ್ಟನೆ ಸಿಗಬೇಕಾಗಿದೆ.
8/ 8
ಸದ್ಯ ನಟಿ ಕನ್ನಡ ಚಿತ್ರರಂಗದಲ್ಲಿ ಬಾಯ್ಕಾಟ್ ಭೀತಿ ಎದುರಿಸುತ್ತಿದ್ದು ಕಝಾನಾ ಜ್ಯುವೆಲ್ಲರಿ ಬ್ರಾಂಡ್ ಅಂಬಾಸಿಡರ್ ಸ್ಥಾನದಿಂದಲೂ ವಜಾಗೊಂಡಿದ್ದಾರೆ.