Rashmika Mandanna: ರಶ್ಮಿಕಾ ಚಿತ್ರರಂಗಕ್ಕೆ ಬಂದು 6 ವರ್ಷ! ಕಿರಿಕ್ ಚೆಲುವೆಯ ಸಿನಿಜರ್ನಿ
ಬಣ್ಣದ ಲೋಕದಲ್ಲಿ ರಶ್ಮಿಕಾ ಸಿನಿ ಜರ್ನಿ ಆರಂಭಿಸಿ 6 ವರ್ಷ ಆಗಿದೆ. ರಶ್ಮಿಕಾ ಮಂದಣ್ಣ ಅವರ ಹೆಸರು ಈಗ ಎಲ್ಲರಿಗೂ ಗೊತ್ತು. ಕನ್ನಡದ ಈ ನಟಿ ಸ್ಟಾರ್ ಪಟ್ಟಕ್ಕೆ ಏರಿದಾಗ ದೊಡ್ಡ ಹೀರೋಗಳ ಸಿನಿಮಾಗೆ ಮೊದಲ ಆಯ್ಕೆಯಾಗಿ ಬದಲಾದರು.
ಸಿನಿಮಾ ಎಂಬ ಕಲರ್ ಫುಲ್ ಲೋಕದಲ್ಲಿ ರಶ್ಮಿಕಾ ಪ್ರಯಾಣ ಆರಂಭಿಸಿ 6 ವರ್ಷಗಳಾದವು. ನಟಿಯ ಟ್ರ್ಯಾಕ್ ಆಕಾಶದೆತ್ತರಕ್ಕೇರಿದೆ. ಕನ್ನಡದ ಈ ನಟಿ ಸ್ಟಾರ್ ಪಟ್ಟಕ್ಕೆ ಏರಿದಾಗ ದೊಡ್ಡ ಹೀರೋಗಳಿಗೆ ಫಸ್ಟ್ ಚಾಯ್ಸ್ ಆದರು.
2/ 7
ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸಿನಿಲೋಕಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ ಅವರ ಸಿನಿಮಾ ಕೆರಿಯರ್ ಇಂದಿಗೆ ಆರು ವರ್ಷ ಪೂರೈಸಿದೆ. ಕಿರಿಕ್ ಪಾರ್ಟಿ ಬಿಡುಗಡೆಯಾಗಿ ಇಂದಿಗೆ ಆರು ವರ್ಷ. ಈ ಸಂದರ್ಭದಲ್ಲಿ ನೆಟ್ಟಿಗರು ಅವರಿಗೆ ವಿಶೇಷ ಶುಭಾಶಯಗಳನ್ನು ಕೋರುತ್ತಿದ್ದಾರೆ.
3/ 7
ಚಲೋ ಚಿತ್ರದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ರಶ್ಮಿಕಾ ಕೆಲವೇ ದಿನಗಳಲ್ಲಿ ಸ್ಟಾರ್ ಹೀರೋಯಿನ್ ಆದರು. ನಟಿಯ ಲುಕ್ ಮತ್ತು ನಟನೆ ಪ್ರೇಕ್ಷಕರನ್ನು ಫಿದಾ ಆಗುವಂತೆ ಮಾಡಿದೆ.
4/ 7
ವಿಜಯ್ ದೇವರಕೊಂಡ ಜೊತೆ ಗೀತಾ ಗೋವಿಂದಂ, ಮಹೇಶ್ ಬಾಬು ಜೊತೆ ಸರಿಲೇರು ನೀಕೆವರು ಮತ್ತು ನಿತಿನ್ ಜೊತೆ ಭೀಷ್ಮ ಸಿನಿಮಾಗಳು ರಶ್ಮಿಕಾ ಅವರ ವೃತ್ತಿಜೀವನಕ್ಕೆ ದಾರಿ ಮಾಡಿಕೊಟ್ಟಿತು. ಅದಾದ ಬಳಿಕ ರಶ್ಮಿಕಾ ಮಂದಣ್ಣ ಜೆಟ್ ಸ್ಪೀಡ್ ನಲ್ಲಿ ಧಾವಿಸುತ್ತಿದ್ದಾರೆ.
5/ 7
ಇನ್ನು ಸಿನಿಮಾಗಳ ವಿಷಯದಲ್ಲಿ ರಶ್ಮಿಕಾ ಸದ್ಯ ಪುಷ್ಪ 2, ಅನಿಮಲ್, ವಾರಿಸು ಮತ್ತು ಮಿಷನ್ ಮಜ್ನು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲು ಅರ್ಜುನ್ ಪುಷ್ಪ 2 ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಮಿಷನ್ ಮಜ್ನು ಚಿತ್ರದಲ್ಲಿ ನಟಿಸುತ್ತಿದ್ದಾರೆ.
6/ 7
ಪುಷ್ಪ ಚಿತ್ರದಲ್ಲಿ ಶ್ರೀವಲ್ಲಿ ಪಾತ್ರದಲ್ಲಿ ರಶ್ಮಿಕಾ ಅಭಿನಯ ಪ್ರೇಕ್ಷಕರಿಂದ ವ್ಯಾಪಕ ಮೆಚ್ಚುಗೆ ಗಳಿಸಿತು. ಆದರೆ, ಇದರ ಮುಂದುವರಿದ ಭಾಗವಾಗಿ ಬರುತ್ತಿರುವ ಪುಷ್ಪ 2 ಚಿತ್ರದಲ್ಲಿ ರಶ್ಮಿಕಾ ಲುಕ್ ಹೆಚ್ಚು ಆಕರ್ಷಕವಾಗಿ ಮೂಡಿಬರಲು ನಿರ್ದೇಶಕ ಸುಕುಮಾರ್ ಪ್ಲಾನ್ ಮಾಡಿದ್ದಾರೆ.
7/ 7
ಟಾಲಿವುಡ್ ಜೊತೆಗೆ ಬಾಲಿವುಡ್ ಸಿನಿಮಾಗಳನ್ನೂ ಮಾಡುತ್ತಿರುವ ರಶ್ಮಿಕಾ ``ಗುಡ್ ಬೈ'' ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಗಿಳಿದಿದ್ದರು. ಬಿಗ್ ಬಿ ಅಮಿತಾಭ್ ಬಚ್ಚನ್ ಜೊತೆಗೆ ನಟಿಸಿದ ಈ ಚಿತ್ರ ಸಕ್ಸಸ್ ಆಗಲಿಲ್ಲ.