Rashmika Mandanna: ರೊಮ್ಯಾಂಟಿಕ್ ಸಾಂಗ್ಗೆ ಬಾಲಿವುಡ್ ಬೆಸ್ಟ್ ಎಂದ ರಶ್ಮಿಕಾ ಮಂದಣ್ಣ; ಶ್ರೀವಲ್ಲಿ ವಿರುದ್ಧ ತಿರುಗಿಬಿದ್ದ ಫ್ಯಾನ್ಸ್
Rashmika Mandanna : ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸ್ಯಾಂಡಲ್ವುಡ್ ನ ಕಿರಿಕ್ ಪಾರ್ಟಿ ಚಿತ್ರದಿಂದ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು, ಟಾಲಿವುಡ್ ಸಿನಿಮಾಗಳಲ್ಲಿ ನಟಿಸಿ ದುಪ್ಪಟ್ಟು ಜನಪ್ರಿಯತೆ ಪಡೆದ್ರು. ಇದೀಗ ಬಾಲಿವುಡ್ಗೆ ಹಾರಿರೋ ರಶ್ಮಿಕಾ, ಸೌತ್ ಸಿನಿಮಾ ಬಗ್ಗೆ ಟ್ರೋಲ್ ಆಗುವಂತ ಹೇಳಿಕೆ ನೀಡಿದ್ದಾರೆ.
ಅಮಿತಾಭ್ ಜೊತೆ ಗುಡ್ ಬೈ ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ, 2ನೇ ಸಿನಿಮಾ ಮಿಷನ್ ಮಜ್ನು ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ.
2/ 8
ಮಿಷನ್ ಮಜ್ನು ಸಿನಿಮಾ ಪ್ರಚಾರದ ವೇಳೆ ರಶ್ಮಿಕಾ ಮಂದಣ್ಣ ಮಾಡಿರುವ ಕೆಲ ಕಮೆಂಟ್ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
3/ 8
ಸಿನಿಮಾ ಪ್ರಚಾರದ ವೇಳೆ ರಶ್ಮಿಕಾ, ರೊಮ್ಯಾಂಟಿಕ್ ಹಾಡುಗಳನ್ನು ತೋರಿಸುವಲ್ಲಿ ಬಾಲಿವುಡ್ ಬೆಸ್ಟ್ ಎಂದು ಹೇಳಿದ್ದಾರೆ
4/ 8
ಸೌತ್ ಸಿನಿಮಾಗಳು ಆಗಲ್ಲ, ಸೌತ್ ನಲ್ಲಿ ಮಾಸ್ ಮಸಾಲಾ ಮತ್ತು ಐಟಂ ಸಾಂಗ್ ಗಳೇ ಹೆಚ್ಚಾಗಿರುತ್ತೆ ಎಂದು ರಶ್ಮಿಕಾ ಹೇಳಿಕೆ ನೀಡಿದ್ದು, ಸೌತ್ ಸಿನಿಮಾ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
5/ 8
ರಶ್ಮಿಕಾ ಮಂದಣ್ಣ ವಿರುದ್ಧ ಮತ್ತೊಮ್ಮೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಅವರನ್ನು ವಿಪರೀತವಾಗಿ ಟ್ರೋಲ್ ಮಾಡಲಾಗುತ್ತಿದೆ.
6/ 8
ಕನ್ನಡದಿಂದ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸುವಾಗ ಕನ್ನಡ ಚಿತ್ರಗಳನ್ನು ಕೀಳಾಗಿ ಕಾಣುತ್ತಿದ್ದ ನೀವು ಈಗ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಾ ಸೌತ್ ಇಂಡಸ್ಟ್ರಿಯನ್ನು ಕೀಳಾಗಿ ಕಾಣುತ್ತಿದ್ದಾರಾ ಎಂದು ಪ್ರಶ್ನೆ ಮಾಡಿ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
7/ 8
ರಶ್ಮಿಕಾ ನಿಮ್ಮ ಮಾತು ಸರಿಯಲ್ಲ, ಬಾಯಿಗೆ ಬಂದಂತೆ ಮಾತಾಡ್ಬೇಡಿ ಎಂದು ನೆಟ್ಟಿಗರು ಕಮೆಂಟ್ ಮಾಡಿ, ರಶ್ಮಿಕಾ ಮಂದಣ್ಣರನ್ನು ಟ್ರೋಲ್ ಮಾಡುತ್ತಿದ್ದಾರೆ.
8/ 8
ರಶ್ಮಿಕಾ ಮಿಷನ್ ಮಜ್ನು ಚಿತ್ರದ ಶೂಟಿಂಗ್ ನಲ್ಲೂ ಬ್ಯುಸಿ ಆಗಿದ್ದಾರೆ. ಇದು ಸ್ಪೈ ಥ್ರಿಲ್ಲರ್ ಸಿನಿಮಾ ಆಗಿದೆ. ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.