ಕಾಲಿವುಡ್ ನಟ ದಳಪತಿ ವಿಜಯ್ ಹಾಗೂ ಸಂಗೀತಾ ಅವರ ವಿಚ್ಛೇದನೆ ಚರ್ಚೆ ಜೋರಾಗಿದೆ. ಇವರಿಬ್ಬರು ಶೀಘ್ರ ಬೇರೆಯಾಗಲಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ.
2/ 9
ತಮ್ಮ ಫ್ಯಾನ್ ಗರ್ಲ್ ಸಂಗೀತಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ವಿಜಯ್ ಅವರು ಈಗ ವಿಚ್ಛೇದನೆಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ.
3/ 9
ಇದಕ್ಕೆ ಪುಷ್ಠಿ ನೀಡುವಂತೆ ವಿಜಯ್ ಅವರ ಮುಂಬರುವ ಚಿತ್ರ ವಾರಿಸು ಆಡಿಯೋಲಾಂಚ್ ಕಾರ್ಯಕ್ರಮದಲ್ಲಿ ಸಂಗೀತಾ ಅವರು ಗೈರಾಗಿದ್ದರು. ಅಷ್ಟೇ ಅಲ್ಲದೆ ವಿಜಯ್ ಹಾಗೂ ರಶ್ಮಿಕಾ ಅವರ ಕ್ಲೋಸಪ್ ಫೋಟೋಸ್ ವೈರಲ್ ಆಗಿದ್ದವು.
4/ 9
ರಶ್ಮಿಕಾ ಅವರು ಕ್ರೀಂ ಕಲರ್ ಸೀರೆ ಉಟ್ಟು ಕಾಣಿಸಿಕೊಂಡರೆ ವಿಜಯ್ ಅವರ ಕ್ಯಾಶುವಲ್ ಲುಕ್ನಲ್ಲಿ ವೇದಿಕೆ ಮೇಲೆ ಕಾಣಿಸಿಕೊಂಡಿದ್ದರು.
5/ 9
ಸಾಧಾರಣವಾಗಿ ಸಂಗೀತಾ ಪತಿಯ ಸಿನಿಮಾ ಸಂಬಂಧಿಸಿದ ಯಾವುದೇ ಕಾರ್ಯಕ್ರಮ ಮಿಸ್ ಮಾಡುವುದಿಲ್ಲ. ಆದರೆ ಈ ಬಾರಿ ಮಿಸ್ ಆಗಿರುವುದು ಚರ್ಚೆಗೆ ದಾರಿ ಮಾಡಿದೆ.
6/ 9
ಇದೇ ಕಾರಣಕ್ಕೆ ಈಗ ನೆಟ್ಟಿಗರು ರಶ್ಮಿಕಾ ಅವರ ಹೆಸರನ್ನು ಮಧ್ಯೆ ಎಳೆದು ತರುತ್ತಿದ್ದಾರೆ. ರಶ್ಮಿಕಾಗೆ ಇದು ವಿಜಯ್ ದೇವರಕೊಂಡ ಜೊತೆ ಮೊದಲ ಸಿನಿಮಾ. ಈಗಲೇ ವಿಚ್ಛೇದನೆ ರೂಮರ್ಸ್ ಶುರುವಾಗಿರುವುದು ದಳಪತಿ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
7/ 9
ವಿಜಯ್ ಹಾಗೂ ಸಂಗೀತಾ ಅವರು ಮದುವೆಯಾಗಿ ಸುಮಾರು 22 ವರ್ಷಗಳಾಗಿವೆ. ಇವರ ನಡುವೆ ಯಾವುದೇ ಮನಸ್ತಾಪ, ವಿಚ್ಛೇದನೆ ಇಲ್ಲ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
8/ 9
ಈಗ ವಿಜಯ್ ಹಾಗೂ ಸಂಗೀತಾ ಅವರ ವಿಚ್ಛೇದನೆ ಬಗ್ಗೆ ಅವರ ಆಪ್ತ ಮೂಲಗಳೇ ಪ್ರತಿಕ್ರಿಯಿಸಿ ಈ ಥರ ಯಾವುದೇ ಬೆಳವಣಿಗೆ ಇಲ್ಲ ಎಂದಿದ್ದಾರೆ. ಅಸಲಿಗೆ ಸಂಗೀತಾ ಹಾಗೂ ಮಕ್ಕಳು ವಿದೇಶದಲ್ಲಿದ್ದಾರೆ ಎನ್ನಲಾಗಿದೆ.
9/ 9
ಆದರೆ ವಿಚ್ಛೇದನೆ ಊಹಾಪೋಹಗಳ ಮಧ್ಯೆ ರಶ್ಮಿಕಾ ಅವರ ಹೆಸರು ಎಳೆದು ತಂದಿದ್ದಕ್ಕೆ ರಚ್ಚು ಅಭಿಮಾನಿಗಳು ಸಹಾ ಬೇಸರಗೊಂಡಿದ್ದಾರೆ. ಆದರೆ ಅಸಲಿಗೆ ವಿಜಯ್ ದಂಪತಿ ಮಧ್ಯೆ ಎಲ್ಲವೂ ಸರಿಯಾಗಿದೆ ಎನ್ನಲಾಗಿದೆ.