Rashmika Mandanna: ಸ್ನೇಹಿತೆಯ ಮದುವೆಯಲ್ಲಿ ಮಿಂಚಿದ ಪುಷ್ಪ ಸುಂದರಿ - ಫೋಟೋ ನೋಡಿ ಕ್ಯೂಟ್ ಎಂದ ಅಭಿಮಾನಿಗಳು
Rashmika Mandanna: ರಶ್ಮಿಕಾ ಮಂದಣ್ಣ, ಬಾಲಿವುಡ್, ಕಾಲಿವುಡ್, ಟಾಲಿವುಡ್ ಎಲ್ಲಾ ಚಿತ್ರರಂಗದಲ್ಲಿ ಬ್ಯುಸಿ ಇರುವ ನಟಿ. ಆದರೂ ಕೂಡ ತನ್ನ ಸ್ನೇಹಿತೆಯ ಮದುವೆಯಲ್ಲಿ ಭಾಗವಹಿಸಿದ್ದು, ಆ ಸುಂದರ ಫೋಟೋಗಳನ್ನು ಹಚ್ಚಿಕೊಂಡಿದ್ದಾರೆ. ಇಲ್ಲಿದೆ ಆ ಫೋಟೋ ಝಲಕ್.
ಕೊಡಗಿನ ಬೆಡಗಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ‘ಪುಷ್ಪ’ ಸಿನಿಮಾ ಸಕ್ಸಸ್ನಲ್ಲಿ ತೇಲುತ್ತಿದ್ದಾರೆ. ತೆಲುಗು ಸಿನಿರಂಗದಲ್ಲಿ ಹಿಟ್ಗಳ ಮೇಲೆ ಹಿಟ್ ಸಿನಿಮಾ ಕೊಡುತ್ತಿರುವ ರಶ್ಮಿಕಾ ಮಂದಣ್ಣ ಮುಂದೆ ಸಾಲು ಸಾಲು ಆಫರ್ಗಳು ಇವೆ.
2/ 8
ತಮಿಳು ಖ್ಯಾತ ನಟ ವಿಜಯ್ ಸೇರಿದಂತೆ ಘಟಾನುಘಟಿಗಳೇ ರಶ್ಮಿಕಾಗೆ ನಾಯಕಿಯಾಗಿ ಆಫರ್ ನೀಡುತ್ತಿದ್ದಾರೆ. ಮತ್ತೊಂದೆಡೆ ಬಾಲಿವುಡ್ನಲ್ಲೂ ರಶ್ಮಿಕಾ ಜರ್ನಿ ಶುರುವಾಗಿದ್ದು, ಬಾಲಿವುಡ್ ದಂತ ಕಥೆ, ಬಿಗ್ ಬಿ ಅಮಿತಾಭ್ ಬಚ್ಚನ್ ಸೇರಿದಂತೆ ಖ್ಯಾತನಾಮರ ಜೊತೆ ರಶ್ಮಿಕಾ ತೆರೆ ಹಂಚಿಕೊಳ್ಳಲಿದ್ದಾರೆ.
3/ 8
ಇಷ್ಟೆಲ್ಲಾ ಚಿತ್ರರಂಗದಲ್ಲಿ ಬ್ಯುಸಿ ಇರುವ ರಶ್ಮಿಕಾ ಯಾರ ಕೈಗೂ ಸಿಗುವುದಿಲ್ಲ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ರಶ್ಮಿಕಾ ಸ್ನೇಹಿತೆಯ ಮದುವೆಯಲ್ಲಿ ಭಾಗವಹಿಸಿ ಫುಲ್ ಮಸ್ತಿ ಮಾಡಿದ್ದಾರೆ.
4/ 8
ಸ್ನೇಹಿತೆ ರಾಗಿಣಿ ಮದುವೆಯಲ್ಲಿ ಭಾಗವಹಿಸಿರುವ ಸುಂದರಿ, ಮದುವೆಯ ಚೆಂದದ ಫೋಟೋಗಳನ್ನು ಹಂಚಿಕೊಂಡು, ಗೆಳತಿಗೆ ವಿಶ್ ಮಾಡಿದ್ದಾರೆ.
5/ 8
ಮದುವೆಯ ಫೋಟೋ ಹಂಚಿಕೊಂಡಿರುವ ನಟಿ, ಫ್ಲೈಟ್ ಲೇಟ್ ಆದರೂ ಸಹ ನಾನು ಮದುವೆಯಲ್ಲಿ ಭಾಗವಹಿಸಲು ಸಾದ್ಯವಾಗಿದೆ. ನನ್ನ ಗೆಳತಿಯನ್ನು ವಧುವಾಗಿ ನೋಡಲು ಸಂತೋಷವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.
6/ 8
ಅಷ್ಟೇ ಅಲ್ಲದೇ, ನನಗೆ ಮದುವೆಯಲ್ಲಿ ಭಾಗವಹಿಸಿ ರಿಲೀಫ್ ಅನಿಸುತ್ತಿದೆ. ನಾನು ಮೊದಲಿನ ರಶ್ಮಿಕಾ, ಸ್ವಲ್ಪವೂ ಬದಲಾಗಿಲ್ಲ ಎಂದು ಹೇಳಿಕೊಂಡಿದ್ದಾರೆ. ಇನ್ನು ಅಭಿಮಾನಿಗಳು ಫೋಟೋ ನೋಡಿ ಫಿದಾ ಆಗಿದ್ದಾರೆ.
7/ 8
ರಶ್ಮಿಕಾ ಮಂದಣ್ಣ ಟಾಲಿವುಡ್ನಲ್ಲಿ ಬ್ಯುಸಿಯಾಗಿದ್ದರೆ, ಇನ್ನೊಂದು ಕಡೆ ಬಾಲಿವುಡ್ನಲ್ಲಿ ನೆಲೆಯೂರಲು ಯತ್ನಿಸುತ್ತಿದ್ದಾರೆ. ಈಗಾಗಲೇ ರಶ್ಮಿಕಾ ಕೈಯಲ್ಲಿ ಎರಡು ಬಾಲಿವುಡ್ ಸಿನಿಮಾಗಳಿವೆ. ಸಿದ್ದಾರ್ಥ ಮಲ್ಹೋತ್ರಾ ಜೊತೆ ನಟಿಸುತ್ತಿರುವ 'ಮಿಷನ್ ಮಜ್ನು' ಬಿಡುಗಡೆಗೆ ಸಿದ್ದವಾಗಿದೆ.
8/ 8
ಇನ್ನು ಅಮಿತಾಬ್ ಮಗಳಾಗಿ ನಟಿಸುತ್ತಿರುವ 'ಗುಡ್ ಬೈ' ಸಿನಿಮಾ ಕೈಯಲ್ಲಿವೆ. ಹೀಗಾಗಿ ಇನ್ನೂ ಹೆಚ್ಚು ಹಿಂದಿ ಸಿನಿಮಾಗಳಲ್ಲಿ ನಟಿಸಲು ರಶ್ಮಿಕಾ ಮಂದಣ್ಣ ಸಜ್ಜಾಗಿದ್ದಾರಂತೆ.