Rashmika Mandanna: ಫ್ಯಾನ್ಸ್ ಬಳಿ ಕ್ಷಮೆಯಾಚಿಸಿದ ರಶ್ಮಿಕಾ ಮಂದಣ್ಣ? ಕಾರಣ ಏನು?
ವಾರಿಸು ಸಿನಿಮಾ ಸಕ್ಸಸ್ ಖುಷಿಯಲ್ಲಿರುವ ನಟಿ ರಶ್ಮಿಕಾ ಮಂದಣ್ಣ, ಬಿಡುಗಡೆಗೆ ರೆಡಿಯಾಗಿರುವ ಮಿಷನ್ ಮಜ್ನು ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಫ್ಯಾನ್ಸ್ ಬಳಿ ರಶ್ಮಿಕಾ ಮಂದಣ್ಣ ಕ್ಷಮೆಯಾಚಿಸಿದ್ದಾರೆ. ಕಾರಣ ಏನು ಗೊತ್ತಾ?
ಗುಡ್ ಬೈ ಸಿನಿಮಾ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟ ನಟಿ ರಶ್ಮಿಕಾ ಮಂದಣ್ಣ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಗುಡ್ ಬೈ ಸಿನಿಮಾ ನಿರೀಕ್ಷಿತ ಗಳಿಕೆ ಪಡೆದಿಲ್ಲ. ಇದೀಗ ಮಿಷನ್ ಮಜ್ನು ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ.
2/ 8
ಬಾಲಿವುಡ್ ನಲ್ಲಿ ನೆಲೆ ನಿಲ್ಲಲು ರಶ್ಮಿಕಾ ಮಂದಣ್ಣಗೆ ಮಿಷನ್ ಮಜ್ನು ಸಿನಿಮಾ ಗೆಲುವು ಬಹುಮುಖ್ಯವಾಗಿದೆ. ಸಿನಿಮಾ ಗೆದ್ರೆ ಬಾಲಿವುಡ್ ನ ಇನ್ನಷ್ಟು ಸಿನಿಮಾ ರಶ್ಮಿಕಾ ಕೈ ಸೇರಲಿದೆ.
3/ 8
ಮಿಷನ್ ಮಜ್ನು ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದು, ಈ ಚಿತ್ರದ ವಿಶೇಷ ಸ್ಕ್ರೀನಿಂಗ್ ಮಂಗಳವಾರ (ಜನವರಿ 17) ನಡೆದಿದೆ. ಪ್ರಚಾರದ ವೇಳೆ ಅವರು ಫ್ಯಾನ್ಸ್ ಬಳಿ ಕ್ಷಮೆ ಕೋರಿದ್ದಾರೆ.
4/ 8
ರಶ್ಮಿಕಾ ಮಂದಣ್ಣ ಹಾಗೂ ಸಿದ್ದಾರ್ಥ್ ಮಲ್ಹೋತ್ರ ಅವರು ಮಿಷನ್ ಮಜ್ನು ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. ನಿನ್ನೆ ಸೆಲೆಬ್ರಿಟಿಗಳಿಗಾಗಿ ವಿಶೇಷ ಶೋ ಆಯೋಜನೆ ಮಾಡಲಾಗಿತ್ತು.
5/ 8
ಸ್ಪೆಷಲ್ ಶೋ ವೇಳೆ ನಟಿ ರಶ್ಮಿಕಾ ಮಂದಣ್ಣ, ನಟ ಸಿದ್ದಾರ್ಥ್, ಕಿಯಾರಾ ಅಡ್ವಾಣಿ, ನಿರ್ಮಾಪಕ ಕರಣ್ ಜೋಹರ್ ಮೊದಲಾದವರು ಭಾಗಿ ಆಗಿದ್ದರು.
6/ 8
ಈ ಶೋ ಮುಗಿಸಿಕೊಂಡು ರಶ್ಮಿಕಾ ಹೊರ ಬರುತ್ತಿದ್ದಂತೆ ಹೊರಬರುವಾಗ ಅಭಿಮಾನಿಗಳು ಹಾಗೂ ಪಾಪರಾಜಿಗಳು ಮುತ್ತಿಕೊಂಡ್ರು. ಬಳಿಕ ರಶ್ಮಿಕಾ ಕಾರು ಏರಲು ಹರಸಾಹಸಪಟ್ರು.
7/ 8
ಕಾರು ಮುಂದೆ ಹೋಗಲು ಆಗದಂತೆ ಅಭಿಮಾನಿಗಳು ಮುತ್ತಿಕೊಂಡಿದ್ರು. ಕಾರು ನಿಧಾನವಾಗಿ ಚಲಿಸುತ್ತಿದ್ದಂತೆ ರಶ್ಮಿಕಾಗೆ ಆತಂಕ ಶುರುವಾಯ್ತು. ಅಭಿಮಾನಿಗೆ ಹುಷಾರ್ ಎಂದು ಸಂದೇಶ ನೀಡಿದ್ರು.
8/ 8
ಕಾರು ನಿಧಾನವಾಗಿ ಮುಂದಕ್ಕೆ ಹೋಗ್ತಿದ್ದಂತೆ ನೆರೆದಿದ್ದ ಫ್ಯಾನ್ಸ್ ರಶ್ಮಿಕಾ ನೋಡಿ ಕೂಗಿದ್ರು. ಈ ವೇಳೆ ನಟಿ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದಾರೆ. ಬಳಿಕ ಪಾಪರಾಜಿಗಳು ಹಾಗೂ ಫ್ಯಾನ್ಸ್ ಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ.