Rashmika Mandanna: ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಇಂದು ಮಧ್ಯರಾತ್ರಿ ಸಿಗಲಿದೆ ಹೊಸ ವರ್ಷದ ಗಿಫ್ಟ್!
ಬಾಲಿವುಡ್ ನತ್ತ ಮುಖ ಮಾಡಿರುವ ನಟಿ ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇದೀಗ ಹೊಸ ವರ್ಷದ ಆರಂಭದಲ್ಲೇ ಅಭಿಮಾನಿಗಳಿಗೆ ಹೊಸ ಗಿಫ್ಟ್ ನೀಡಲಿದ್ದಾರೆ. ಅದು ಇಂದು ಮಧ್ಯರಾತ್ರಿ ತಿಳಿಯಲಿದೆ.
ಗುಡ್ ಬೈ ಸಿನಿಮಾ ಮೂಲಕ ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ಗುಡ್ ಬೈ ಸಿನಿಮಾ ನಿರೀಕ್ಷಿಸಿದ ಮಟ್ಟಕ್ಕೆ ಹಿಟ್ ಆಗಿಲ್ಲ. ಇದೀಗ ರಶ್ಮಿಕಾ ಅಭಿನಯದ 2ನೇ ಸಿನಿಮಾ ಮಿಷನ್ ಮಜ್ನು ಬಿಡುಗಡೆಗೆ ಸಜ್ಜಾಗಿದೆ.
2/ 8
ಜನವರಿ 20ರಂದು ನೆಟ್ಫ್ಲಿಕ್ಸ್ ನಲ್ಲಿ ಚಿತ್ರ ರಿಲೀಸ್ ಆಗಲಿದೆ. ಇದರ ನಡುವೆ ರಶ್ಮಿಕಾ ಮಂದಣ್ಣ ಅವರ ಮತ್ತೊಂದು ಸಿನಿಮಾ ಅನಿಮಲ್ ಚಿತ್ರತಂಡ ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ಸರ್ಪ್ರೈಸ್ ಗಿಫ್ಟ್ ನೀಡಲು ಸಿದ್ಧವಾಗಿದೆ.
3/ 8
ಡಿಸೆಂಬರ್ 31ರ ಮಧ್ಯರಾತ್ರಿ! 2022ರ ವರ್ಷಕ್ಕೆ ವಿದಾಯ ಹೇಳಿ, ಹೊಸ ವರ್ಷವನ್ನು ಸ್ವಾಗತಿಸುವಂತಹ ಸಮಯಕ್ಕೆ ಸರಿಯಾಗಿ ‘ಅನಿಮಲ್’ ಚಿತ್ರದಿಂದ ಫಸ್ಟ್ ಲುಕ್ (Animal Movie First Look) ರಿಲೀಸ್ ಆಗಲಿದೆ
4/ 8
ಅನಿಮಲ್ ಚಿತ್ರದ ಫಸ್ಟ್ ಲುಕ್ ನೋಡಲು ರಶ್ಮಿಕಾ ಮಂದಣ್ಣ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಅರ್ಜುನ್ ರೆಡ್ಡಿ ಸಿನಿಮಾ ಖ್ಯಾತಿಯ ಸಂದೀಪ್ ರೆಡ್ಡಿ ವಂಗ ಅವರು ‘ಅನಿಮಲ್’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.
5/ 8
ಈ ಸಿನಿಮಾದಲ್ಲಿ ರಣಬೀರ್ ಕಪೂರ್ಗೆ ರಶ್ಮಿಕಾ ಮಂದಣ್ಣ ಜೋಡಿಯಾಗಿದ್ದು, ಅವರ ಲುಕ್ ಹೇಗಿರಬಹುದು ಎಂಬ ಕುತೂಹಲ ಮೂಡಿದೆ. 2023ರ ಆಗಸ್ಟ್ 11ರಂದು ಅನಿಮಲ್ ಚಿತ್ರ ರಿಲೀಸ್ ಆಗಲಿದೆ.
6/ 8
ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ತನ್ನ ಸಿನಿಮಾ ಕೆರಿಯರ್ ಆರಂಭಿಸಿದ ನಟಿ ರಶ್ಮಿಕಾ ಮಂದಣ್ಣ, ಟಾಲಿವುಡ್ ನತ್ತ ಮುಖ ಮಾಡಿದ್ರು.
7/ 8
ಚಲೋ ಸಿನಿಮಾ ಮೂಲಕ ಟಾಲಿವುಡ್ ಪ್ರವೇಶಿಸಿದ ರಶ್ಮಿಕಾ ಮಂದಣ್ಣ, ಟಾಲಿವುಡ್ನಲ್ಲಿ ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳನ್ನು ಮಾಡಿದ್ದಾರೆ.
8/ 8
ನಟ ಅಲ್ಲು ಅರ್ಜುನ್ ಜೊತೆ ನಟಿಸಿದ ಪುಪ್ಪಾ ಸಿನಿಮಾ ಮೂಲಕ ರಶ್ಮಿಕಾ ಮಂದಣ್ಣ ಪ್ಯಾನ್ ಇಂಡಿಯಾ ನಟಿಯಾದ್ರು. ಸ್ಯಾಂಡಲ್ವುಡ್, ಟಾಲಿವುಡ್, ಕಾಲಿವುಡ್ ಗಳಲ್ಲಿ ಮಿಂಚುತ್ತಿರುವ ನಟಿ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ.