ನಟಿ ರಶ್ಮಿಕಾ ಮಂದಣ್ಣ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ರಕ್ಷಿತ್ ಹಾಗೂ ರಿಷಬ್ ಶೆಟ್ಟಿ ನನಗೆ ಇಂಡಸ್ಟ್ರಿಗೆ ದಾರಿ ತೋರಿಸಿದರು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅವರ ಈ ಸಂದರ್ಶನ ವೈರಲ್ ಆಗಿದ್ದು ಅವರು ಅಲ್ಲಿ ಏನೇನು ಮಾತನಾಡಿದ್ರು ಅನ್ನೋ ಡೀಟೆಲ್ಸ್ ಇಲ್ಲಿದೆ.
2/ 7
ಸಂದರ್ಶಕಿ ಅವರು ನಿಮ್ಮ ಮೊದಲ ಸಿನಿಮಾಗಳ ಬಗ್ಗೆ ನಿಮಗೆ ಏನನಿಸುತ್ತದೆ ಎಂದು ಪ್ರಶ್ನೆ ಕೇಳುತ್ತಾರೆ. ಇದಕ್ಕೆ ಉತ್ತರಿಸಿದ ನಟಿ, ಪ್ರಾಮಾಣಿಕವಾಗಿ ಹೇಳುವುದಾದರೆ ರಕ್ಷಿತ್ ಹಾಗೂ ರಿಷಬ್ ಅವರು ಇಂಡಸ್ಟ್ರಿಗೆ ದಾರಿ ತೋರಿಸಿದ್ದಾರೆ ಎಂದು ಹೇಳಿದ್ದಾರೆ.
3/ 7
ಅದೇ ರೀತಿ ನನಗೆ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಅವರು ಅವಕಾಶ ಕೊಟ್ಟರು ಎಂದು ಹೇಳಿದ್ದಾರೆ. ರಶ್ಮಿಕಾ ಅವರು ಈ ರೀತಿ ಓಪನ್ ಆಗಿ ಹೇಳಿದ್ದು ಕನ್ನಡಿಗರಿಗೆ ಮೆಚ್ಚುಗೆಯಾಗಿದೆ.
4/ 7
ಇಲ್ಲಿಯವರೆಗೂ ತನಗೆ ಮೊದಲ ಸಿನಿಮಾ ಕೊಟ್ಟವರನ್ನೇ ಮರೆತಿದ್ದಾರೆ ಎಂದು ಎಲ್ಲರೂ ರಶ್ಮಿಕಾ ಅವರನ್ನು ಟ್ರೋಲ್ ಮಾಡುತ್ತಿದ್ದರು. ಆದರೆ ನಟಿಯ ಇತ್ತೀಚಿನ ಹೇಳಿಕೆಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.
5/ 7
ರಶ್ಮಿಕಾ ಮಂದಣ್ಣ ಅಭಿನಯದ ಎರಡನೇ ತಮಿಳು ಸಿನಿಮಾ ವಾರಿಸು ಇತ್ತೀಚೆಗಷ್ಟೇ ರಿಲೀಸ್ ಆಗಿದ್ದು ತಕ್ಕಮಟ್ಟಿಗೆ ಸಕ್ಸಸ್ಫುಲ್ ಆಗಿಯೇ ಓಡುತ್ತಿದೆ. ದಳಪತಿ ವಿಜಯ್ ಜೊತೆ ರಶ್ಮಿಕಾ ಇದು ಮೊದಲ ಸಿನಿಮಾ.
6/ 7
ರಶ್ಮಿಕಾ ಅವರು ಈಗ ಬಾಲಿವುಡ್ನಲ್ಲಿಯೂ ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಿದ್ದು ಸಖತ್ತಾಗಿ ಮಿಂಚುತ್ತಿದ್ದಾರೆ. ಅವರ ಮಿಷನ್ ಮಜ್ನು ಸಿನಿಮಾ ಸದ್ಯದಲ್ಲಿಯೇ ರಿಲೀಸ್ ಆಗಲಿದೆ.
7/ 7
ರಶ್ಮಿಕಾ ಮಂದಣ್ಣ ಅವರು ಪುಷ್ಪಾ 2 ಸಿನಿಮಾದಲ್ಲಿಯೂ ಕಾಣಿಸಿಕೊಳ್ಳಲಿದ್ದು ಅವರ ಶ್ರೀವಲ್ಲಿ ಪಾತ್ರ ನೋಡಲು ಮತ್ತೊಮ್ಮೆ ಸಿನಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.