ಈ ವರ್ಷ ಅನೇಕ ನಾಯಕಿಯರ ಪಾಲಿಗೆ ಲಕ್ಕಿ ಇಯರ್ ಆಗಿದೆ. 2022ರಲ್ಲಿ ಮಿಂಚಿದ ನಟಿ ಮಣಿಯರು ಯಾರ್ಯಾರು ಎಂದು ತಿಳಿದುಕೊಳ್ಳೋಣ
2/ 8
ರಶ್ಮಿಕಾ ಮಂದಣ್ಣ, ಪೂಜಾ ಹೆಗ್ಡೆ, ಸಾಯಿ ಪಲ್ಲವಿ ಮತ್ತು ಕೀರ್ತಿ ಸುರೇಶ್ ಈ ವರ್ಷ ಹೆಚ್ಚು ಗಮನಸೆಳೆದ ನಾಯಕಿಯರ ಪಟ್ಟಿಯಲ್ಲಿದ್ದಾರೆ. ಟಾಪ್ ಸ್ಟಾರ್ ಗಳಾದ ಸಮಂತಾ, ನಯನತಾರಾ, ಅನುಷ್ಕಾ ಹವಾ ಕೊಂಚ ಕಡಿಮೆಯಾದ್ರು ಈ ನಟಿಯರ ಟ್ರೆಂಡ್ ಮುಂದುವರೆದಿದೆ.
3/ 8
ಈ ವರ್ಷ ಮೃಗ ಸಿನಿಮಾ ಸೇರಿದಂತೆ 4 ಸಿನಿಮಾಗಳಲ್ಲಿ ಪೂಜಾ ಹೆಗಡೆ ಸದ್ದು ಮಾಡಿದ್ದಾರೆ. ಪೂಜಾ ಅಭಿನಯದ ಸರ್ಕಸ್, ರಾಧೆ ಶ್ಯಾಮ್, ಮೃಗ, ಆಚಾರ್ಯ ಮುಂತಾದ ಎಲ್ಲಾ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿಲ್ಲ. ಹೀಗಾಗಿ ಈ ನಟಿ ಬ್ಯಾಡ್ ಲಕ್ ಲಿಸ್ಟ್ ನಲ್ಲಿದ್ದಾರೆ.
4/ 8
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣಗೆ ಈ ವರ್ಷ ಕೊಂಚ ಮಟ್ಟಿಗೆ ಲಕ್ಕಿ ಇಯರ್ ಆಗಿದೆ. ಬಾಲಿವುಡ್ಗೆ ಎಂಟ್ರಿ ಕೊಟ್ಟ ರಶ್ಮಿಕಾಗೆ ಜನಪ್ರಿಯತೆ ಹೆಚ್ಚಾಗಿದೆ. ಅಮಿತ್ ಜೊತೆ ನಟಿಸಿದ ರಶ್ಮಿಕಾ ಗುಡ್ ಬೈ ಸಿನಿಮಾ ಹೆಚ್ಚೇನು ಸದ್ದು ಮಾಡಿಲ್ಲ. ಸೀತಾರಾಮಂ ಸಿನಿಮಾದಲ್ಲೂ ರಶ್ಮಿಕಾ ನಟಿಸಿದ್ರು. ಸಿನಿಮಾ ಕೂಡ ಸೂಪರ್ ಹಿಟ್ ಆಗಿದೆ.
5/ 8
ನ್ಯಾಚುರಲ್ ಬ್ಯುಟಿ ಸಾಯಿ ಪಲ್ಲವಿಗೆ ಈ ವರ್ಷ ಲಕ್ಕಿ ಇಯರ್ ಆಗಿದೆ. ರಾಣಾ ಜೊತೆ ವಿರಾಟಪರ್ವಂ ಸಿನಿಮಾ ಮಾಡಿದ್ರು. ಆದ್ರೆ ಈ ಸಿನಿಮಾ ಕಮರ್ಷಿಯಲ್ ಆಗಿ ಯಶಸ್ಸು ಕಾಣದಿದ್ದರೂ ಸಾಯಿ ಪಲ್ಲವಿ ತಮ್ಮ ರೇಂಜ್ ಹೆಚ್ಚಿಸಿಕೊಂಡಿದ್ದಾರೆ. .
6/ 8
ಯಶೋದಾ ಸಿನಿಮಾ ಸಕ್ಸಸ್ ಆಗಿದ್ದು, ಸಮಂತಾಗೆ ಒಳ್ಳೆ ಹೆಸರು ತಂದುಕೊಟ್ಟಿದೆ. ಸಮಂತಾ ಅಭಿನಯದ ಶಾಕುಂತಲಂ ಚಿತ್ರ 2023ರಲ್ಲಿ ಬಿಡುಗಡೆಯಾಗಲಿದೆ. ಸ್ಯಾಮ್ ಸದ್ಯ ವಿಜಯ್ ದೇವರಕೊಂಡ ಜೊತೆ ಖುಷಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಈ ವರ್ಷ ಮಯೋಟಿಟಿಸ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುವಂತಾಗಿದೆ.
7/ 8
ಲೇಡಿ ಸೂಪರ್ ಸ್ಟಾರ್ ನಯನತಾರಾ 2022ರಲ್ಲಿ ಬೆಳ್ಳಿತೆರೆ ಮೇಲೆ ಮಿಂಚಲಿಲ್ಲ. ಮದುವೆ ಹಾಗೂ ಮಕ್ಕಳ ವಿಚಾರದಲ್ಲೇ ನಯನತಾರಾ ಹೆಚ್ಚು ಸುದ್ದಿಯಾಗಿದ್ದರು. ನಯನತಾರಾ, ಚಿರಂಜೀವಿ ಜೊತೆ ಗಾಡ್ ಫಾದರ್ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಕೂಡ ಅಷ್ಟೇನು ಹಿಟ್ ಆಗಿಲ್ಲ
8/ 8
ನಟಿ ಶ್ರೀಲೀಲಾ ಅವರಿಗೆ ಈ ವರ್ಷ ಅದೃಷ್ಟದ ವರ್ಷವಾಗಿದೆ. ಆಕೆ ಅಭಿನಯಿಸಿದ ಧಮಾಕಾ ಚಿತ್ರ ಸೂಪರ್ ಹಿಟ್ ಆಗಿದೆ. ಇದರೊಂದಿಗೆ ಶ್ರೀಲೀಲಾ ಟಾಲಿವುಡ್ ನ ಟಾಪ್ ಹೀರೋಯಿನ್ ಆಗುವ ಸಾಧ್ಯತೆಗಳಿವೆ.