ತೆಲುಗಿನ ಪುಷ್ಪ ಸಿನಿಮಾ ಮೂಲಕ ನಟಿ ರಶ್ಮಿಕಾ ಮಂದಣ್ಣ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಇದೀಗ ಪುಷ್ಪ 2 ಚಿತ್ರದಲ್ಲೂ ರಶ್ಮಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ.
2/ 8
ಪುಷ್ಪ ಸಿನಿಮಾಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ. ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಸಿನಿಮಾ ಶೂಟಿಂಗ್ ಆರಂಭಗೊಂಡಿದೆ. ಈ ಬಗ್ಗೆ ರಶ್ಮಿಕಾ ಕೂಡ ಹೊಸ ಅಪ್ಡೇಟ್ ನೀಡಿದ್ದಾರೆ.
3/ 8
ಚಿತ್ರತಂಡ ಈಗಾಗಲೇ ಶೂಟಿಂಗ್ ಶುರು ಮಾಡಿದೆ. ಚಿತ್ತೀಕರಣ ಭರದಿಂದ ಸಾಗಿದ್ದು ನಾನು ಫೆಬ್ರವರಿಯಲ್ಲಿ ಚಿತ್ರೀಕರಣದಲ್ಲಿ ಭಾಗಿ ಆಗುತ್ತೇನೆ ಎಂದು ರಶ್ಮಿಕಾ ಹೇಳಿದ್ದಾರೆ.
4/ 8
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತಾಡಿದ ರಶ್ಮಿಕಾ ಮಂದಣ್ಣ, ಫೆಬ್ರವರಿಯಲ್ಲಿ ಶೂಟಿಂಗ್ ನಲ್ಲಿ ಭಾಗಿಯಾಗೋದಾಗಿ ಹೇಳಿದ್ದಾರೆ.
5/ 8
ಅಲ್ಲು ಅರ್ಜುನ್ ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ‘ಪುಷ್ಪ’ ಸಿನಿಮಾದಲ್ಲಿ ಮಿಂಚಿದ್ದರು. ಈಗ ಸೀಕ್ವೆಲ್ನಲ್ಲಿ ರಶ್ಮಿಕಾ ಪಾತ್ರ ಅನೇಕ ತಿರುವುಗಳನ್ನು ಪಡೆದುಕೊಳ್ಳಲಿದೆಯಂತೆ.
6/ 8
ಪುಪ್ಪ ಚಿತ್ರದಲ್ಲಿ ಶ್ರೀವಲ್ಲಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಮಿಂಚಿದ್ರು. 2ನೇ ಪಾರ್ಟ್ನಲ್ಲಿ ಆ ಪಾತ್ರದ ಸ್ಕ್ರೀನ್ ಸ್ಪೇನ್ ಕಡಿಮೆ ಇರಲಿದೆ ಎಂಬ ಗಾಸಿಪ್ ಕೂಡ ಹರಿದಾಡಿದೆ. ಆ ಬಗ್ಗೆ ಇನ್ನಷ್ಟೇ ಸ್ಪಷ್ಟನೆ ಸಿಗಬೇಕಿದೆ.
7/ 8
ಪುಪ್ಪಾ ಸಿನಿಮಾದಲ್ಲಿ ನಾಯಕಿಯಾಗಿ ಸಾಯಿ ಪಲ್ಲವಿ ಅಭಿನಯಿಸುತ್ತಾರೆ ಎನ್ನುವ ಸುದ್ದಿ ಹರಡಿತ್ತು ಗಾಸಿಪ್ ಗೆ ನಟಿ ರಶ್ಮಿಕಾ ಮಂದಣ್ಣ ತೆರೆ ಎಳೆದಿದ್ರು.
8/ 8
ನಾನೇ ಸಿನಿಮಾ ನಾಯಕಿಯಾಗಿ ಮುಂದುವರಿಯೋದಾಗಿ ಹೇಳಿದ್ದಾರೆ. ಈ ವರ್ಷ ರಶ್ಮಿಕಾ ಅಭಿನಯದ ಮೂರು ಸಿನಿಮಾಗಳು ರಿಲೀಸ್ ಆಗಲಿದ್ದು, ತೆರೆ ಮೇಲೆ ರಶ್ಮಿಕಾ ನೋಡಲು ಅಭಿಮಾನಗಳು ಕಾಯ್ತಿದ್ದಾರೆ.