ಬಾಲಿವುಡ್ ತಾರೆ ಶ್ರೀದೇವಿ ಅವರ ಅಪರೂಪದ ಫೋಟೋ.   ಶ್ರೀದೇವಿ ತನ್ನ ಪತಿ ಬೋನಿ ಕಪೂರ್ ಜತೆ ಕುಳಿತುಕೊಂಡಿರುವ ದೃಶ್ಯ. ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಶ್ರೀದೇವಿ ತನ್ನ ಪತಿ ಬೋನಿ ಕಪೂರ್ ಹಾಗೂ ಮಕ್ಕಳ ಜತೆ ಪಾಲ್ಗೊಂಡ ಕ್ಷಣ. ಮುಂಬೈನಲ್ಲಿ ನಡೆದ ಸೌಂದರ್ಯ ಉತ್ಪನ್ನ ಸಮಾರಂಭದಲ್ಲಿ ಬಾಲಿವುಡ್ ನಟಿಯರಾದ ಹೇಮಾ ಮಾಲಿನಿ, ಜೂಹಿ ಚಾವ್ಲಾ, ಕರೀನಾ ಕಪೂರ್ ಜತೆ ಶ್ರೀದೇವಿ. ಮುಂಬೈನಲ್ಲಿ ಬೋನಿ ಕಪೂರ್ ಅವರ ‘ವಾಂಟೆಡ್’ ಚಿತ್ರದ ಪತ್ರಿಕಾಗೋಷ್ಠಿ ಸಂದರ್ಭ ಶ್ರೀದೇವಿ ತನ್ನ ಪತಿ ಬೋಮಿ ಕಪೂರ್ ಹಾಗೂ ಮಗಳ ಜತೆ ತೆಗೆದ ಫೋಟೋ. ಬಾಲಿವುಡ್ ನಟ ರಿಷಿ ಕಪೂರ್ ಹಾಗೂ ಶ್ರೀದೇವಿ ಮುಂಬೈನಲ್ಲಿ ನಡೆದ Ficci-Frames 2008 ಸಮಾರಂಭದಲ್ಲಿ ಜೀವಮಾನದ ಸಾಧನ ಪ್ರಶಸ್ತಿಯನ್ನು ಪಡೆದ ಕ್ಷಣ. ಮಾರ್ಕೋದಲ್ಲಿ ನಡೆದ 12ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಸಂದರ್ಭ ಶ್ರೀದೇವಿ ಅವರು ಸ್ಥಳೀಯ ಆಸ್ಪತ್ರೆಗೆ ಭೇಟಿನೀಡಿ ರೋಗಿಗಳ ಆರೋಗ್ಯವನ್ನು ವಿಚಾರಿಸಿದ ಕ್ಷಣ. ಶ್ರೀದೇವಿ ಅವರು ಅಟಲ್ ಬಿಹಾರಿ ವಾಜಪೇಯಿ ಹಾಗೂ ನಟಿ ಐಶ್ವರ್ಯ ರೈ ಜತೆ. 14ನೇ IIFA ಸಮಾರಂಭದಲ್ಲಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರಿಗೆ ಶ್ರೀದೇವಿ ಅವರು ಪ್ರಶಸ್ತಿ ವಿತರಿಸಿದ ಕ್ಷಣ.