ಇನ್ನು ಕೋಲುಮಂಡೆ ಹಾಡಿನ ವಿಡಿಯೋ ಯೂಟ್ಯೂಬ್ನಲ್ಲಿ ಸಖತ್ ವೈರಲ್ ಆಗುತ್ತಿದ್ದಂತೆಯೇ ಕೆಲವು ಕಾರಣಗಳಿಂದಾಗಿ ಅದನ್ನು ಯೂಟ್ಯೂಬ್ನಿಂದ ಡಿಲೀಸ್ ಮಾಡಿಸಲಾಯಿತು. ಹೌದು, ಈ ಹಾಡು ರಿಲೀಸ್ ಆದ ಮೂರೇ ದಿನಗಳಲ್ಲಿ 30 ಲಕ್ಷಕ್ಕೂ ಅಧಿಕ ವೀವ್ಸ್ ಪಡೆದುಕೊಂಡಿತ್ತು. ಆದರೆ, ಈ ಹಾಡಿನಲ್ಲಿ ಇತಿಹಾಸ ತಿರುಚಲಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಚಾಮರಾಜನಗರದ ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅದಕ್ಕೆ ಚಂದನ್ ಆಗ ಕ್ಷಮೆ ಯಾಚಿಸಿ, ಹಾಡಿನ ವಿಡಿಯೋವನ್ನು ಡಿಲೀಸ್ ಮಾಡಿಸಿದರು.