Kannadathi Bhuvi: ಸಕ್ಸಸ್​ಗೆ ಕಾರಣರಾದವರನ್ನು ಎಂದೂ ಮರಿಬೇಡಿ; ಕನ್ನಡತಿ ಉವಾಚ

ಭುವಿ ಮಹಾರಾಷ್ಟ್ರದ ಶನಿವಾರ್ ವಾಡಾಗೆ ಭೇಟಿ ನೀಡಿದ್ದು, ಮಹಾರಾಷ್ಟ್ರದ ಮಣ್ಣಲ್ಲೂ ಕನ್ನಡದ ಅಭಿಮಾನವನ್ನು ಹಂಚಿದ್ದಾರೆ. ಇನ್ನೂ ಫೇಸ್ ಬುಕ್ ಪೇಜ್ ನಲ್ಲಿ ತಮ್ಮ ಪೋಟೋ ಶೇರ್ ಮಾಡುವಾಗ ಸಕ್ಷಸ್ ನ ಬಗ್ಗೆ ಸಂದೇಶವನ್ನು ಹಂಚಿಕೊಂಡಿದ್ದಾರೆ.

First published:

 • 18

  Kannadathi Bhuvi: ಸಕ್ಸಸ್​ಗೆ ಕಾರಣರಾದವರನ್ನು ಎಂದೂ ಮರಿಬೇಡಿ; ಕನ್ನಡತಿ ಉವಾಚ

  ಸ್ಪಷ್ಟವಾದ ಕನ್ನಡ, ಮನಸೆಳೆಯುವ ಅಭಿನಯ, ಮುಗ್ಧ ನಗು, ಅದ್ಭುತ ಬರವಣಿಗೆಗಳ ಮೂಲಕ ಕರ್ನಾಟಕದ ಜನತೆಯ ಮನಸ್ಸು ಗೆದ್ದವರು ಕನ್ನಡತಿ ಖ್ಯಾತಿಯ ರಂಜನಿ ರಾಘವನ್. ರಂಜನಿ ಕನ್ನಡತಿ ಸಿರಿಯಲ್ ನಲ್ಲಿ ಭುವಿ ಪಾತ್ರದ ಅಭಿಯನದ ನಂತರ ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶದ ಇನ್ನಿತರೆ ಭಾಗದಲ್ಲೂ ಅಪಾರವಾದ ಅಭಿಮಾನಿಗಳನ್ನು ಹೊಂದಿದ್ದಾರೆ.

  MORE
  GALLERIES

 • 28

  Kannadathi Bhuvi: ಸಕ್ಸಸ್​ಗೆ ಕಾರಣರಾದವರನ್ನು ಎಂದೂ ಮರಿಬೇಡಿ; ಕನ್ನಡತಿ ಉವಾಚ

  ರಂಜನಿ ಇತ್ತೀಚಿಗೆ ಮಹಾರಾಷ್ಟ್ರಕ್ಕೆ ಹೋದ ರಂಜನಿ ಅಲ್ಲಿ ಪುಣೆಯ ಶನಿವಾರ್ ವಾಡಾಗೆ ಬೇಟಿ ನೀಡಿದ್ದು ಅಲ್ಲಿ ಕ್ಲಿಕ್ಕಿಸಿದ ಫೋಟೋಗಳನ್ನು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ಆ ಫೋಟೋ ಜೊತೆಗೆ ಸಕ್ಸಸ್ ನ ಬಗ್ಗೆ ಸಂದೇಶವನ್ನು ನೀಡಿದ್ದಾರೆ.

  MORE
  GALLERIES

 • 38

  Kannadathi Bhuvi: ಸಕ್ಸಸ್​ಗೆ ಕಾರಣರಾದವರನ್ನು ಎಂದೂ ಮರಿಬೇಡಿ; ಕನ್ನಡತಿ ಉವಾಚ

  ಎರಡು ಪೋಟೋಗಳನ್ನು ಹಂಚಿಕೊಂಡ ಅವರು "ಒಂದು ಸಕ್ಸಸ್ ಹಿಂದೆ ಎಷ್ಟೋ ಜನರಿರ್ತಾರೆ, ನಾವು ಅವರನ್ನ ಮರೆ ಮಾಡಿ ನಮ್ದೇ ಎಲ್ಲ ಅಂತಿರ್ತೀವಿ, ಹೇಗೆ ಅಂದ್ರೆ, ನನ್ನ ಎರಡೂ ಫೋಟೋಗಳನ್ನ ಕಂಪೇರ್ ಮಾಡಿ ನೋಡಿ" ಎಂದು ಬರೆದಿದ್ದಾರೆ.

  MORE
  GALLERIES

 • 48

  Kannadathi Bhuvi: ಸಕ್ಸಸ್​ಗೆ ಕಾರಣರಾದವರನ್ನು ಎಂದೂ ಮರಿಬೇಡಿ; ಕನ್ನಡತಿ ಉವಾಚ

  ಒಂದು ಪೋಟೋ ಹಿಂದೆ ಯಾರೂ ಬೇರೆ ಜನರು ಕಾಣುವುದಿಲ್ಲ ಆದರೆ ಇನ್ನೊಂದು ಪೋಟೋದ ಹಿಂದೆ ಜನ ಇದ್ದಾರೆ. ಇಲ್ಲಿ ಅವರು ನಮ್ಮ ಸಕ್ಸಸ್ ನ ಹಿಂದೆ ಇರುವವರನ್ನು ನಾವು ಮರಿಬಾರದು ಎನ್ನುವ ಸಂದೇಶವನ್ನು ತಮ್ಮ ಎರಡು ಪೋಟೋಗಳ ಮೂಲಕ ವಿವರಿಸಿದ್ದಾರೆ.

  MORE
  GALLERIES

 • 58

  Kannadathi Bhuvi: ಸಕ್ಸಸ್​ಗೆ ಕಾರಣರಾದವರನ್ನು ಎಂದೂ ಮರಿಬೇಡಿ; ಕನ್ನಡತಿ ಉವಾಚ

  ಇವರ ಪೋಟೋಗೆ ಕಮೆಂಟ್ ಮಾಡಿದ ಹೆಚ್ಚಿನ ಜನರು ಸಕ್ಸಸ್ ಬಗ್ಗೆ ರಂಜನಿ ರಾಘವನ್ ಹೊಂದಿರುವ ಅಭಿಪ್ರಾಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಜೀವನ ಅಂದ್ರೇನೆ ಹಾಗೇ ಒಂದಷ್ಟು ಜನ ಬರ್ತಾರೆ ಇರ್ತಾರೆ, ನಮ್ಮ ಸಕ್ಸಸ್ ಗೆ ಕಾರಣ ಆಗ್ತಾರೆ ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ.

  MORE
  GALLERIES

 • 68

  Kannadathi Bhuvi: ಸಕ್ಸಸ್​ಗೆ ಕಾರಣರಾದವರನ್ನು ಎಂದೂ ಮರಿಬೇಡಿ; ಕನ್ನಡತಿ ಉವಾಚ

  ಪುಣೆಯ ಶನಿವಾರ್ ವಾಡಾ ಅಂದ್ರೆ ನಂಗೆ 'ಬಾಜಿರಾವ್ ಮಸ್ತಾನಿ' ಸಿನಿಮಾ ನೆನಪಾಗುತ್ತೆ ನಿಮಗೆ ಏನು ನೆನಪಾಗುತ್ತೆ ಅಂತ ತಮ್ಮ ಫಾಲೋವರ್ಸ್ ಗೂ ಕೇಳಿದ್ದಾರೆ. ಹೆಚ್ಚಿನವರು ಮರಾಠ ಸಾಮ್ರಾಟ ಶಿವಾಜಿಯನ್ನು ನೆನಪಿಸಿಕೊಂಡರು.

  MORE
  GALLERIES

 • 78

  Kannadathi Bhuvi: ಸಕ್ಸಸ್​ಗೆ ಕಾರಣರಾದವರನ್ನು ಎಂದೂ ಮರಿಬೇಡಿ; ಕನ್ನಡತಿ ಉವಾಚ

  ರಂಜನಿಯವರು ತಮ್ಮ ಅಭಿಮಾನಗಳ ಬಗ್ಗೆ ಹೊಂದಿರುವ ಪ್ರೀತಿ, ಅವರ ಸರಳತೆ ಮತ್ತು ಕನ್ನಡದ ಮೇಲಿರುವ ಅವರ ಅಭಿಮಾನವೇ ಬಹುಷ: ಅವರ ಸಕ್ಸಸ್ ಗೆ ಮುಖ್ಯ ಕಾರಣ ಎಂದು ಹೇಳಬಹುದು. ಈ ಪೋಸ್ಟ್ ನಲ್ಲಿ ಅವರು ತಮ್ಮ ಸಕ್ಸಸ್ ಗೆ ಕಾರಣರಾದವರ ಮೇಲೆ ಹೊಂದಿರುವ ಅಭಿಮಾನವನ್ನು ಪ್ರಮುಖವಾಗಿ ಗಮನಿಸಬಹುದು.

  MORE
  GALLERIES

 • 88

  Kannadathi Bhuvi: ಸಕ್ಸಸ್​ಗೆ ಕಾರಣರಾದವರನ್ನು ಎಂದೂ ಮರಿಬೇಡಿ; ಕನ್ನಡತಿ ಉವಾಚ

  ರಂಜನಿಯವರು ಕರ್ನಾಟಕದಲ್ಲಿ ಮಾತ್ರವಲ್ಲದೆ ಮಹಾರಾಷ್ಟ್ರದಲ್ಲೂ ಅಪಾರವಾದ ಅಭಿಮಾನಿಗಳನ್ನು ಹೊಂದಿದ್ದಾರೆ. "ಪ್ರೀತಿಯ ಕನ್ನಡತಿಗೆ ಮಹಾರಾಷ್ಟ್ರದ ಸಾಂಸ್ಕೃತಿಕ ರಾಜಧಾನಿ ನಮ್ಮ ಪುಣೆಗೆ ಸ್ವಾಗತ" ಎಂದು ಕಮೆಂಟ್ ಕೂಡ ಮಾಡಿದ್ದಾರೆ. ಹೀಗೆ ಮಹಾರಾಷ್ಟ್ರಕ್ಕೆ ಆಗಮಿಸಿದ ಅವರನ್ನು ಅಲ್ಲಿನ ಅವರ ಅಭಿಮಾನಿಗಳು ಬಹಳ ಪ್ರೀತಿಯಿಂದ ಸ್ವಾಗತಿಸಿದ್ದಾರೆ.

  MORE
  GALLERIES