ರಾಣಿ ಮುಖರ್ಜಿ ತಮ್ಮ ಮೊದಲ ಚಿತ್ರ ‘ರಾಜಾ ಕಿ ಆಯೇಗಿ ಬಾರಾತ್’ ಮೂಲಕ ಪ್ರೇಕ್ಷಕರ ಮನ ಗೆದ್ದರು. ಅಂದಿನಿಂದ ಇಂದಿನವರೆಗೂ ಈ ನಟಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಆದಿತ್ಯ ಚೋಪ್ರಾ ಜೊತೆ ಮದುವೆಯಾದ ನಂತರ ಸ್ವಲ್ಪ ಮಟ್ಟಿಗೆ ಚಿತ್ರರಂಗದಿಂದ ದೂರವೇ ಉಳಿದಿದ್ದರು. ಆದರೆ ಇನ್ನೂ ಇವರ ಜನಪ್ರಿಯತೆಯಲ್ಲಿ ಯಾವುದೇ ಕಡಿಮೆಯಾಗಿಲ್ಲ. ಆದರೆ ಚಿತ್ರರಂಗದಿಂದ ದೂರವಿದ್ದರೂ ಆಡಂಬರದಿಂದ ಜೀವನ ಸಾಗಿಸುತ್ತಿದ್ದಾರೆ ನಟಿ.