ಬಾಲಿವುಡ್ ನಟ ರಣದೀಪ್ ಹೂಡಾ ಬಗ್ಗೆ ಶಾಕಿಂಗ್ ಮಾಹಿತಿ ಹೊರಬಿದ್ದಿದೆ. ನಟ ರಣದೀಪ್ ಹೂಡಾ ಕುದುರೆ ಸವಾರಿ ಮಾಡುವಾಗ ಪ್ರಜ್ಞಾಹೀನರಾದರು. ಕೆಳಗೆ ಬಿದ್ದು ಗಾಯಗೊಂಡಿದ್ದಾರೆ.
2/ 8
ರಣದೀಪ್ ಕಾಲಿಗೆ ತೀವ್ರ ಪೆಟ್ಟಾಗಿದ್ದು, ತಕ್ಷಣ ಅವರನ್ನು ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಚಿಕಿತ್ಸೆ ಪಡೆಯುತ್ತಿದ್ದು, ಸಂಪೂರ್ಣ ಬೆಡ್ ರೆಸ್ಟ್ ತೆಗೆದುಕೊಳ್ಳುವಂತೆ ವೈದ್ಯರು ತಿಳಿಸಿದ್ದಾರೆ.
3/ 8
ನಟ ರಣದೀಪ್ ಹೂಡಾ ಪ್ರಸ್ತುತ ಮುಂಬರುವ ಚಿತ್ರ ಸಾವರ್ಕರ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದರು.
4/ 8
ಸಾವರ್ಕರ್ ಚಿತ್ರದಲ್ಲಿ ರಣದೀಪ್ ಹೂಡಾ ವೀರ ಸಾವರ್ಕರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಪಾತ್ರಕ್ಕಾಗಿ ಅವರು 22 ಕೆಜಿ ತೂಕ ಇಳಿಸಿಕೊಳ್ಳುತ್ತಿದ್ದಾರೆ.
5/ 8
ತೂಕ ಇಳಿಸಿಕೊಳ್ಳಲು ದಿನವೂ ರಣದೀಪ್ ಹೂಡಾ ವರ್ಕೌಟ್ ಮಾಡ್ತಿದ್ದಾರೆ. ಇದಕ್ಕಾಗಿ ನಿತ್ಯ ಕುದುರೆ ಸವಾರಿಯನ್ನ ಮಾಡುತ್ತಾರೆ.
6/ 8
ಆದರೆ ನಿನ್ನೆ (ಜ.14) ಕುದುರೆ ಸವಾರಿ ಮಾಡುವಾಗ ಗಂಭೀರವಾಗಿ ಅಪಘಾತಕ್ಕೆ ಒಳಗಾಗಿದ್ದಾರೆ.
7/ 8
ರಣದೀಪ್ ಹೂಡಾ ಇಂತಹ ಅಪಘಾತಕ್ಕೆ ಒಳಗಾಗಿರುವುದು ಇದೇ ಮೊದಲಲ್ಲ. ಈ ಹಿಂದೆ ಸಲ್ಮಾನ್ ಖಾನ್ ಅಭಿನಯದ ರಾಧೆ ಚಿತ್ರದ ಶೂಟಿಂಗ್ ವೇಳೆಯೂ ಗಾಯಗೊಂಡಿದ್ದರು.