Ranbir Kapoor: ಪಾಕಿಸ್ತಾನಿ ಸಿನಿಮಾದಲ್ಲಿ ನಟಿಸ್ತೀನಿ ಎಂದರಾ ರಣಬೀರ್? ಆಲಿಯಾ ಪತಿ ಹೇಳಿದ್ದೇನು?

ಬಾಲಿವುಡ್ ನಟ ರಣಬೀರ್ ಕಪೂರ್ ಅವರು ವಿವಾದಾತ್ಮಕ ಹೇಳಿಕೆ ಕೊಡೋದು ಇದೇ ಮೊದಲಲ್ಲ. ಇದೀಗ ನಟ ಪಾಕಿಸ್ತಾನಿ ಸಿನಿಮಾದಲ್ಲಿ ನಟಿಸೋ ಬಗ್ಗೆ ಮಾತನಾಡಿ ಟೀಕೆಗೆ ಗುರಿಯಾಗಿದ್ದಾರೆ.

First published:

  • 19

    Ranbir Kapoor: ಪಾಕಿಸ್ತಾನಿ ಸಿನಿಮಾದಲ್ಲಿ ನಟಿಸ್ತೀನಿ ಎಂದರಾ ರಣಬೀರ್? ಆಲಿಯಾ ಪತಿ ಹೇಳಿದ್ದೇನು?

    ನನಗೆ ಪಾಕಿಸ್ತಾನಿ ಸಿನಿಮಾಗಳಲ್ಲಿ ನಟಿಸಲು ಯಾವುದೇ ಸಂಕೋಚ ಇಲ್ಲ ಎಂದು ನಟ ರಣಬೀರ್ ಕಪೂರ್ ಹೇಳಿದ್ದರು. ಸೌದಿ ಅರೆಬಿಯಾದಲ್ಲಿ ನಡೆದ ರೆಡ್ ಸೀ ಇಂಟರ್​ನ್ಯಾಷನಲ್ ಫಿಲ್ಮ್ ಅವಾರ್ಡ್ಸ್​ನಲ್ಲಿ ನಟ ಈ ಮಾತನ್ನು ಹೇಳಿದ್ದರು. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು.

    MORE
    GALLERIES

  • 29

    Ranbir Kapoor: ಪಾಕಿಸ್ತಾನಿ ಸಿನಿಮಾದಲ್ಲಿ ನಟಿಸ್ತೀನಿ ಎಂದರಾ ರಣಬೀರ್? ಆಲಿಯಾ ಪತಿ ಹೇಳಿದ್ದೇನು?

    ಬಹಳಷ್ಟು ಜನರು ನಟನಿಗೆ ದೇಶಭಕ್ತಿ ಇಲ್ಲ ಎಂದು ಟ್ರೋಲ್ ಮಾಡಿದ್ದರು. ಆದರೆ ನಟ ಮಾತ್ರ ತನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ ಎಂದು ಸ್ಪಷ್ಟನೆ ಕೊಟ್ಟಿದ್ದರು.

    MORE
    GALLERIES

  • 39

    Ranbir Kapoor: ಪಾಕಿಸ್ತಾನಿ ಸಿನಿಮಾದಲ್ಲಿ ನಟಿಸ್ತೀನಿ ಎಂದರಾ ರಣಬೀರ್? ಆಲಿಯಾ ಪತಿ ಹೇಳಿದ್ದೇನು?

    ಪಾಕಿಸ್ತಾನಿ ಚಿತ್ರ ನಿರ್ದೇಶಕರೊಬ್ಬರು ರೆಡ್ ಸೀ ಇಂಟರ್​ನ್ಯಾಷನಲ್ ಫಿಲ್ಮ್​ ಫೆಸ್ಟಿವಲ್​ನಲ್ಲಿ ಪಾಕಿಸ್ತಾನಿ ತಂಡದ ಜೊತೆ ಕೆಲಸ ಮಾಡ್ತೀರಾ ಎಂದು ಕೇಳಿದ್ದರು. ಇದಕ್ಕೆ ಉತ್ತರಿಸಿದ ನಟ, ಖಂಡಿತಾ ಸರ್. ಕಲಾವಿದರಿಗೆ ಗಡಿ ಇಲ್ಲ ಎಂದು ನಾನಂದುಕೊಳ್ಳುತ್ತೇನೆ. ಹಾಗೆಯೇ ಕಲೆಗೂ ಗಡಿ ಇಲ್ಲ ಎಂದಿದ್ದಾರೆ.

    MORE
    GALLERIES

  • 49

    Ranbir Kapoor: ಪಾಕಿಸ್ತಾನಿ ಸಿನಿಮಾದಲ್ಲಿ ನಟಿಸ್ತೀನಿ ಎಂದರಾ ರಣಬೀರ್? ಆಲಿಯಾ ಪತಿ ಹೇಳಿದ್ದೇನು?

    ಇತ್ತೀಚೆಗೆ ಇದೇ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು ನಟ ತಮ್ಮ ಮುಂಬರುವ ತೂ ಜೂಟಿ ಮೇ ಮಕ್ಕರ್ ಸಿನಿಮಾವನ್ನು ಚಂಡೀಘಡ್​ನಲ್ಲಿ ಪ್ರಚಾರ ಮಾಡುವಾಗ ಇದರ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

    MORE
    GALLERIES

  • 59

    Ranbir Kapoor: ಪಾಕಿಸ್ತಾನಿ ಸಿನಿಮಾದಲ್ಲಿ ನಟಿಸ್ತೀನಿ ಎಂದರಾ ರಣಬೀರ್? ಆಲಿಯಾ ಪತಿ ಹೇಳಿದ್ದೇನು?

    ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಹೋದ ಕಾರ್ಯಕ್ರಮದಲ್ಲಿ ಬಹಳಷ್ಟು ಜನ ಪಾಕಿಸ್ತಾನಿ ಚಿತ್ರ ನಿರ್ದೇಶಕರಿದ್ದರು. ಆ ಹೇಳಿಕೆ ವಿವಾದಾತ್ಮಕವಾಗಿ ಕೊಟ್ಟಿದ್ದಲ್ಲ ಎಂದಿದ್ದಾರೆ.

    MORE
    GALLERIES

  • 69

    Ranbir Kapoor: ಪಾಕಿಸ್ತಾನಿ ಸಿನಿಮಾದಲ್ಲಿ ನಟಿಸ್ತೀನಿ ಎಂದರಾ ರಣಬೀರ್? ಆಲಿಯಾ ಪತಿ ಹೇಳಿದ್ದೇನು?

    ಆದರೆ ಆ ಹೇಳಿಕೆಯಿಂದ ಇಷ್ಟೊಂದು ದೊಡ್ಡ ವಿವಾದ ಆಗುತ್ತೆ ಎಂದು ನಾನಂದುಕೊಂಡಿರಲಿಲ್ಲ. ನನಗೆ ಅದು ದೊಡ್ಡ ವಿವಾದ ಎನಿಸಲಿಲ್ಲ. ಸಿನಿಮಾ ಅಂದ್ರೆ ಸಿನಿಮಾ. ಕಲೆ ಅಂದ್ರೆ ಕಲೆ ಎಂದಿದ್ದಾರೆ.

    MORE
    GALLERIES

  • 79

    Ranbir Kapoor: ಪಾಕಿಸ್ತಾನಿ ಸಿನಿಮಾದಲ್ಲಿ ನಟಿಸ್ತೀನಿ ಎಂದರಾ ರಣಬೀರ್? ಆಲಿಯಾ ಪತಿ ಹೇಳಿದ್ದೇನು?

    ಏ ದಿಲ್ ಹೇ ಮುಷ್ಕಿಲ್ ಸಿನಿಮಾದಲ್ಲಿ ಫವಾದ್ ಜೊತೆ ನಟಿಸಿದ್ದೆ. ನನಗೆ ಪಾಕಿಸ್ತಾನದ ಬಹಳಷ್ಟು ಕಲಾವಿದರ ಪರಿಚಯ ಇದೆ. ಫತೇಹ್ ಅಲಿ ಖಾನ್ ಹಾಗೂ ಅತಿಫ್ ಅಸ್ಲಾಮ್ ಅವರು ಅದ್ಭುತ ಗಾಯಕರು. ಅವರು ಹಿಂದಿ ಸಿನಿಮಾಗಳಿಗೂ ತಮ್ಮ ಕೊಡುಗೆ ನೀಡಿದ್ದಾರೆ. ಸಿನಿಮಾ ಎಂದರೆ ಸಿನಿಮಾ, ಅದಕ್ಕೆ ಗಡಿ ಇದೆ ಎಂದು ನಾನು ಭಾವಿಸುವುದಿಲ್ಲ ಎಂದಿದ್ದಾರೆ.

    MORE
    GALLERIES

  • 89

    Ranbir Kapoor: ಪಾಕಿಸ್ತಾನಿ ಸಿನಿಮಾದಲ್ಲಿ ನಟಿಸ್ತೀನಿ ಎಂದರಾ ರಣಬೀರ್? ಆಲಿಯಾ ಪತಿ ಹೇಳಿದ್ದೇನು?

    ಕಲೆ ದೇಶಕ್ಕಿಂತ ದೊಡ್ಡದಲ್ಲ. ಆದರೆ ನೀವು ಕಲೆಯನ್ನು ಗೌರವಿಸಬೇಕು. ನಿಮ್ಮ ಮೊದಲ ಆದ್ಯತೆ ದೇಶವೇ ಆಗಿರಬೇಕು ಎಂದು ಹೇಳಿದ್ದಾರೆ ನಟ.

    MORE
    GALLERIES

  • 99

    Ranbir Kapoor: ಪಾಕಿಸ್ತಾನಿ ಸಿನಿಮಾದಲ್ಲಿ ನಟಿಸ್ತೀನಿ ಎಂದರಾ ರಣಬೀರ್? ಆಲಿಯಾ ಪತಿ ಹೇಳಿದ್ದೇನು?

    ನಟ ಕೊನೆಯದಾಗಿ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ನಟಿಸಿದ್ದರು. ಅವರ ಮುಂದಿನ ಕಾಮೆಡಿ ರೊಮ್ಯಾಂಟಿಕ್ ಸಿನಿಮಾ ಮಾರ್ಚ್ 8ರಂದು ಬಿಡುಗಡೆಯಾಗಲಿದೆ. ಇದರ ನಂತರ ನಟ ಅನಿಮಲ್​ನಲ್ಲಿ ನಟಿಸಲಿದ್ದಾರೆ.

    MORE
    GALLERIES