ಪವಿತ್ರಾ ಹಾಗೂ ನರೇಶ್ ವಿವಾಹ ಸುದ್ದಿ ವೈರಲ್ ಆಗುತ್ತಿದ್ದಂತೆ ಅವರು ಮದುವೆಯಾಗುತ್ತಿರುವುದು ನಿಜ ಎಂದು ನರೇಶ್ ಪತ್ನಿ ರಮ್ಯಾ ರಘುಪತಿ ಹೇಳಿದ್ದಾರೆ. ಆದರೆ ನಾನ್ಯಾವತ್ತೂ ಡಿವೋರ್ಸ್ ಕೊಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಟಿ ಪವಿತ್ರಾ ಲೋಕೇಶ್ ಹಾಗೂ ತೆಲುಗು ನಟ ನರೇಶ್ ಅವರ ಲಿಪ್ ಕಿಸ್ಸಿಂಗ್ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ವೈರಲ್ ಆಗ್ತಿದ್ದಂತೆ ಈ ಜೋಡಿಯ ಮದುವೆ ಸುದ್ದಿ ಕೂಡಾ ಎಲ್ಲೆಡೆ ಹರಿದಾಡುತ್ತಿದೆ.
2/ 8
ಹೊಸ ವರ್ಷ, ಹೊಸ ಆರಂಭ ಎಂದು ತಮ್ಮ ವಿಡಿಯೋಗೆ ಕ್ಯಾಪ್ಶನ್ ಕೊಟ್ಟಿದ್ದು ಮತ್ತೊಂದು ಕುತೂಹಲಕ್ಕೆ ಕಾರಣ. ಈ ಜೋಡಿ ಈ ವರ್ಷ ಪಕ್ಕಾ ಮದುವೆಯಾಗ್ತಾರೆ ಎನ್ನಲಾಗಿದೆ.
3/ 8
ಆದರೆ ಮದುವೆಯಾಗೋಕೆ ನರೇಶ್ಗೆ ಡಿವೋರ್ಸ್ ಸಿಗಬೇಕಲ್ಲಾ? ಹೌದು ಕಾನೂನಾತ್ಮಕವಾಗಿ ಅವರು ಈಗಲೂ ಅವರು ರಮ್ಯಾ ಅವರ ಪತಿಯೇ.
4/ 8
ನರೇಶ್ ಅವರು ಈಗಲೂ ರಮ್ಯಾ ಅವರ ಪತಿಯಾಗಿರುವಾಗ ಇನ್ನೊಂದು ಮದುವೆ ಸಾಧ್ಯವಿಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು. ಈ ಎಲ್ಲ ಬೆಳವಣಿಗೆಗಳ ಮಧ್ಯೆ ರಮ್ಯಾ ಅವರೂ ಈ ಮದುವೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
5/ 8
ಈಗ ರಮ್ಯಾ ರಘುಪತಿ ಅವರ ತಮ್ಮ ಪತಿಯ ವಿವಾಹದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನರೇಶ್ನನ್ನು ನಾನು ಸುಮ್ಮನೆ ಬಿಡುವುದಿಲ್ಲ ಎಂದ ಅವರು ಪತಿಯ ಮೋಸದಾಟವನ್ನು ಬಿಚ್ಚಿಟ್ಟಿದ್ದಾರೆ.
6/ 8
ಅವರು ಮದುವೆಗೆ ರೆಡಿಯಾಗಿರೋದು ಹೌದು. ಆದರೆ ನಮಗಿಬ್ಬರಿಗೆ ಡಿವೋರ್ಸ್ ಆಗಿಲ್ಲ. ನಾವು ಬೇರೆಯಾಗಲ್ಲ ಎಂದು ಮಗನಿಗೆ ಮಾತು ಕೊಟ್ಟಿದ್ದೇನೆ. ಅದನ್ನು ಉಳಿಸಿಕೊಳ್ಳುತ್ತೇನೆ ಎಂದಿದ್ದಾರೆ.
7/ 8
ಮದುವೆಯಾದಾಗ ಎಲ್ಲ ಸರಿ ಇತ್ತು. ಆದರೆ ಮಗನಾದ ನಂತರ ನರೇಶ್ ಬದಲಾದರು. ಅವರ ಶರ್ಟ್ನಿಂದ ಲೇಡಿಸ್ ಪರ್ಫ್ಯೂಮ್ ಸ್ಮೆಲ್ ಬರುತ್ತಿತ್ತು. ಕೇಳಿದರೆ ಸಾಬೂಬು ಕೊಡುತ್ತಿದ್ದರು. ಆದರೆ ಕ್ರಾಸ್ ಚೆಕ್ ಮಾಡಿದರೆ ಎಲ್ಲವೂ ಗೊತ್ತಾಗುತ್ತಿತ್ತು ಎಂದಿದ್ದಾರೆ.
8/ 8
ಈಗ ರಮ್ಯಾ ರಘುಪತಿ ವಿಚ್ಛೇದನೆ ಕೊಡಲು ನಿರಾಕರಿಸುತ್ತಿದ್ದು ನರೇಶ್ ಅವರು ಇತ್ತ ನಾಲ್ಕನೇ ಮದುವೆಗೆ ರೆಡಿಯಾಗಿದ್ದಾರೆ. ಪವಿತ್ರಾ-ನರೇಶ್ ವಿವಾಹ ನಡೆಯುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.