ಇದಕ್ಕೂ ಮುನ್ನ ಮೈಸೂರಿನ ಹೋಟೆಲ್ವೊಂದರಲ್ಲಿ ಪವಿತ್ರ ಲೋಕೇಶ್ ಹಾಗೂ ನರೇಶ್ ಒಟ್ಟಿಗೆ ಇದ್ದಾಗ ಸಿಕ್ಕಿಹಾಕಿಕೊಂಡಿದ್ದರು. ಈ ವೇಳೆ ಕೂಡ ರಮ್ಯಾ ಹೋಟೆಲ್ನಲ್ಲಿ ರಂಪಾಟ ಮಾಡಿದ್ದರು. ಆದರೀಗ ಪವಿತ್ರ ಲೋಕೇಶ್ ಹಾಗೂ ನರೇಶ್ ಮದುವೆಯಾಗಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಇದು ಅಸಲಿ ಮದುವೆಯೋ ಅಥವಾ ಸಿನಿಮಾ ಶೂಟಿಂಗೋ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಒಂದು ವೇಳೆ ಪವಿತ್ರಾ ಲೋಕೇಶ್, ನರೇಶ್ ನಿಜವಾಗಿಯೂ ಮದುವೆ ಆಗಿದ್ದರೆ ರಮ್ಯಾ ಮುಂದೇನು ಮಾಡ್ತಾರೆ ಅಂತ ಕಾದು ನೋಡಬೇಕಾಗಿದೆ.