Naresh-Pavitra Lokesh: ಸೂಪರ್ ಸ್ಟಾರ್ ಕೃಷ್ಣನ ಜೊತೆ ಅಫೇರ್ ಇದೆ ಎಂದಿದ್ದ ನರೇಶ್! 3ನೇ ಪತ್ನಿ ರಮ್ಯಾ ಗಂಭೀರ ಆರೋಪ
Ramya Raghupathi: ನರೇಶ್ ಅವರ 3ನೇ ಪತ್ನಿ ರಮ್ಯಾ ರಘುಪತಿ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ನರೇಶ್ ಬಗ್ಗೆ ಹಲವು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ದಿವಂಗತ ಸೂಪರ್ ಸ್ಟಾರ್ ಕೃಷ್ಣ ಅವರೊಂದಿಗೆ ನೀನು ಅಕ್ರಮ ಸಂಬಂಧ ಇಟ್ಟುಕೊಂಡಿದ್ದೀಯಾ ಎಂದು ನನ್ನ ಮೇಲೆ ಆರೋಪ ಮಾಡಿದ್ರು ಎಂದು ರಮ್ಯಾ ಹೇಳಿದ್ದಾರೆ.
ಟಾಲಿವುಡ್ನ ಹಿರಿಯ ನಟ ನರೇಶ್, ನಟಿ ಪವಿತ್ರಾ ಲೋಕೇಶ್ ರನ್ನು 4ನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಇದೀಗ ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧ ನರೇಶ್, 3ನೇ ಪತ್ನಿ ರಮ್ಯಾ ರಘುಪತಿ ಅನೇಕ ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ. ಕೃಷ್ಣ ಅವರಿಗೂ ನನಗೂ ಅಫೇರ್ ಇದೆ ಎಂದು ಆರೋಪಿಸಿದ್ರು.
2/ 8
ಇತ್ತೀಚೆಗಷ್ಟೇ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಸೆನ್ಸೇಷನಲ್ ವಿಷಯ ಬಹಿರಂಗವಾಗಿದೆ. ನರೇಶ್ ನಾನಾ ರೀತಿಯಲ್ಲಿ ನನಗೆ ಟಾರ್ಚರ್ ಕೊಟ್ಟಿದ್ದಾನೆ ಎಂದು ರಮ್ಯಾ ಹೇಳಿದ್ದಾರೆ.
3/ 8
ಆಕೆಯನ್ನು ದೂರ ಮಾಡಲು ನರೇಶ್ ಹಲವು ಪ್ರಯತ್ನಗಳನ್ನು ಮಾಡಿದರು ಎಂದು ರಮ್ಯಾ ರಘುಪತಿ ಹೇಳಿದ್ದಾರೆ. ಕೊನೆಗೆ ದೇವರಂತಿರುವ ಕೃಷ್ಣನ ಜತೆ ಆಫೇರ್ ಇಟ್ಟುಕೊಂಡಿದ್ದೀಯಾ ಎಂದು ಆರೋಪಿಸಿದ್ರು.
4/ 8
ಕೃಷ್ಣ ಅವರ ಘನತೆಗೆ ಧಕ್ಕೆ ತರಬಾರದು ಎಂಬ ಉದ್ದೇಶದಿಂದ ಇಷ್ಟು ವರ್ಷ ಮೌನ ವಹಿಸಿದ್ದೆ ಎಂದು ರಮ್ಯಾ ರಘುಪತಿ ಹೇಳಿದ್ದಾರೆ. ಅಷ್ಟೇ ಅಲ್ಲದೆ ನನ್ನ ಬಳಿ ಎಲ್ಲಾ ಸಾಕ್ಷ್ಯಗಳಿವೆ ಎಂದು ರಮ್ಯಾ ಹೇಳಿದ್ದಾರೆ.
5/ 8
ದಿವಂಗತ ಸೂಪರ್ ಸ್ಟಾರ್ ಕೃಷ್ಣ ಮಲ ಮಗ ನರೇಶ್, ಆದರೂ ಕೃಷ್ಣ ಅವರು ನರೇಶ್ಗೆ ಒಳ್ಳೆಯ ಜೀವನವನ್ನೇ ಕಟ್ಟಿ ಕೊಟ್ಟರು ಎಂದ್ರು. ಕೃಷ್ಣ ಅವರ ಸಾವಿನ ನಂತರ ನರೇಶ್ 3ನೇ ಪತ್ನಿ ಈ ರೀತಿ ಆರೋಪ ಮಾಡ್ತಿದ್ದು, ಭಾರೀ ಚರ್ಚೆಯಾಗ್ತಿದೆ.
6/ 8
ನಟಿ ಪವಿತ್ರಾ ಲೋಕೇಶ್ ಹಾಗೂ ತೆಲುಗು ನಟ ನರೇಶ್ ಅವರ ಲಿಪ್ ಕಿಸ್ಸಿಂಗ್ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ವೈರಲ್ ಆಗ್ತಿದ್ದಂತೆ ಈ ಜೋಡಿಯ ಮದುವೆ ಸುದ್ದಿ ಕೂಡಾ ಎಲ್ಲೆಡೆ ಹರಿದಾಡುತ್ತಿದೆ.
7/ 8
ನರೇಶ್, ಪವಿತ್ರಾ ಮದುವೆ ಬಗ್ಗೆ ಪ್ರತಿಕ್ರಿಯಿಸಿದ ರಮ್ಯಾ, ಅವರು ಮದುವೆಯಾಗಲು ಡಿವೋರ್ಸ್ ಸಿಗಬೇಕು. ಕಾನೂನಾತ್ಮಕವಾಗಿ ಅವರು ಈಗಲೂ ರಮ್ಯಾ ಪತಿಯೇ, ನಾನು ಡಿವೋರ್ಸ್ ಕೊಡಲ್ಲ ಎಂದಿದ್ದಾರೆ.
8/ 8
ನಾನು ಬೇರೆಯಾಗಲ್ಲ ಎಂದು ನನ್ನ ಮಗನಿಗೆ ಮಾತು ಕೊಟ್ಟಿದ್ದೇನೆ. ಅದನ್ನು ಉಳಿಸಿಕೊಳ್ಳುತ್ತೇನೆ ಎಂದಿದ್ದಾರೆ. ಈಗಾಗಲೇ ನರೇಶ್ ಮೂರು ಮದುವೆಯಾಗಿದ್ದಾರೆ. ಅವರೆಲ್ಲರಿಗೂ ಮಕ್ಕಲಾಗಿದ್ದಾರೆ. ಈಗಾಗಲೇ ತುಂಬಾ ಕೆಳಮಟ್ಟಕ್ಕೆ ಇಳಿದಿದ್ದಾರೆ ಎಂದು ರಮ್ಯಾ ಆಕ್ರೋಶ ಹೊರಹಾಕಿದರು.