ಕುಕಟ್ಪಲ್ಲಿಯಲ್ಲಿರುವ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿರುವ ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ, ತಮ್ಮ ಖ್ಯಾತಿಗೆ ಮಸಿ ಬಳಿಯಲು ಮತ್ತೆ ಮದುವೆ ಸಿನಿಮಾ ಮಾಡಿದ್ದಾರೆ. ಈ ಸಿನಿಮಾ ಬಿಡುಗಡೆಯನ್ನು ಕೂಡಲೇ ನಿಲ್ಲಿಸಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ. ಇದರೊಂದಿಗೆ ನರೇಶ್ - ಪವಿತ್ರಾ ಲೋಕೇಶ್ - ರಮ್ಯಾ ರಘುಪತಿ ನಡುವಿನ ಸಂಬಂಧ ಮತ್ತೊಮ್ಮೆ ಬಿಸಿ ಬಿಸಿ ಚರ್ಚೆಯಾಗಿದೆ.